ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ. ಭಕ್ತರಿಗೆ ಕೋಡಿಮಠ ಶ್ರೀ ಎಂದೇ ಪರಿಚಿತರು. ಇವರು ನೀಡುವ ಭವಿಷ್ಯವಾಣಿಗಳು ಬಹುತೇಕ ನಿಜವಾಗುವುದು ಭಕ್ತರಿಗೆ ನಂಬಿಕೆಯೂ ಹೆಚ್ಚು. ಕೋಡಿಮಠದ ತಾಳೆಪತ್ರಗಳಲ್ಲಿ ಭವಿಷ್ಯವನ್ನು ಬರೆದಿಡಲಾಗಿದೆ. ಅದರಿಂದಲೇ ಕೋಡಿಮಠ ಸ್ವಾಮಿಗಳು ಇಂತಹ ಭವಿಷ್ಯ ಹೇಳುತ್ತಾರೆ ಎನ್ನುವುದು ಪ್ರತೀತಿ. ಇಂತಹ ಸ್ವಾಮೀಜಿ ಇತ್ತೀಚೆಗೆ ದೀಪಾವಳಿ ಹಬ್ಬದ ವೇಳೆ ಒಂದು ಭವಿಷ್ಯ ಹೇಳಿದ್ದರು.
ಮಧ್ಯಬಾಗಿಲಿನಿಂದ ಪ್ರಾರಂಭವಾಗಿ ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿ ಲೋಕ ಕಂಟಕವಿದೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ ಕಂಟಕಗಳಿವೆ. ಬಾಂಬ್ಗಳು, ಭೂಕಂಪ, ಯುದ್ದಭೀತಿ ಜೊತೆ ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗಿ ಸಾಯುತ್ತಾರೆ. ದೇಶ ನಿಶ್ಯಕ್ತವಾಗಿ ಜನ ದಾರಿಯಲ್ಲಿ ಬಿದ್ದು ಸಾಯುತ್ತಾರೆ. ನೀರಿನಲ್ಲಿ ಕಂಟಕವಿದೆ.. ಜನ ದೈವಭಕ್ತಿಯಿಂದ ಇರಬೇಕು ಎಂದಿದ್ದರು.

ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗಿ ಸಾಯತ್ತಾರೆ : ಈಗ ನೋಡಿದರೆ ದ.ಕೊರಿಯಾದಲ್ಲಿ ಸಂಭವಿಸಿದ ಹಾಲೋವನ್ ಉತ್ಸವದಲ್ಲಿ ಜನ ಭಯದಿಂದಲೇ ಬಿದ್ದು ಬಿದ್ದು ನರಳಿ ನರಳಿ ಸತ್ತಿದ್ದಾರೆ. ಸತ್ತಿರೋವ್ರ ಸಂಖ್ಯೆ 150ಕ್ಕೂ ಹೆಚ್ಚು. ಹಾಲೋವನ್ ಉತ್ಸವ ಎಂದರೆ ಬೇರೇನಲ್ಲ. ದೆವ್ವಗಳ ವೇಷ ಹಾಕಿಕೊಂಡು ಮಾಡುವ ಹಬ್ಬ. ಈ ಹಬ್ಬದಲ್ಲಿ ಹೃದಯಸ್ತಂಭನದಿಂದ ಸತ್ತವರೇ 100ಕ್ಕೂ ಹೆಚ್ಚು ಜನ. ಬಹುತೇಕರು 25ರ ವಯಸ್ಸಿನ ಒಳಗಿನವರು.
ಬಾಂಬ್‍ಗಳು ಬಲಿತೆಗೆದುಕೊಳ್ಳುತ್ತವೆ : ಉಕ್ರೇನ್‍ನಲ್ಲಿ ಯುದ್ಧ ನಿಂತಿಲ್ಲ. ದಿನದಿನವೂ ಜನ ಸಾಯುತ್ತಲೇ ಇದ್ದಾರೆ. ಸೋಮಾಲಿಯಾದಲ್ಲಿ ಶನಿವಾರ ನಡೆದ ಎರಡು ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 100ಕ್ಕೂ ಹೆಚ್ಚು. ದಾಳಿಯ ಹೊಣೆ ಹೊತ್ತಿರುವುದು ಅಲ್ ಕೈದಾ ಅಲ್ ಶಹೀದ್ ಉಗ್ರರು. ಮೊಗದಿಶುನಲ್ಲಿ ಕಾರುಗಳಿಗೆ ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ ಅಲ್ ಕೈದಾ ಉಗ್ರರು.


ಭೂಕಂಪ : ಅಮೆರಿಕದ ಲಾಸ್ ಏಂಜಲಿಸ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದೆ.
ಒಟ್ಟಿನಲ್ಲಿ ಯಾವುದು ಸತ್ಯವೋ.. ಯಾವುದು ಸುಳ್ಳೋ.. ಭವಿಷ್ಯವನ್ನು ನಂಬಬೇಕೋ.. ಬಿಡಬೇಕೋ.. ಈ ಗೊಂದಲದಲ್ಲಿರುವಾಗಲೇ ಕೋಡಿಮಠ ಶ್ರೀಗಳ ಭವಿಷ್ಯವಾಣಿ ಭಯ ಹುಟ್ಟಿಸಿರುವುದಂತೂ ಸತ್ಯ.



