ಅಶ್ವಿನಿ ಪುನೀತ್ ರಾಜ್ ಮಾರ್ ಅವರನ್ನು ಇತ್ತೀಚೆಗೆ ದುಷ್ಟನೊಬ್ಬ ನಕಲಿ ಚಿತ್ರ, ವಿಡಿಯೋ ಬಳಸಿ ಡೀಪ್ ಫೇಕ್ ವಿಡಿಯೋ ಮಾಡಿದ್ದ ಪ್ರಕರಣ ಈಗ ಇನ್ನೊಂದು ಹಂತಕ್ಕೆ ತಲುಪಿದೆ. ಆ ರೀತಿಯ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವ ಕುರಿತಂತೆ ಅಭಿಮಾನಿಗಳೇ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತೀರ ಕೆಟ್ಟ ಭಾಷೆ ಬಳಸಿ, ತನ್ನ ವಿಕೃತಿ ಮೆರೆದಿದ್ದ ಆ ವ್ಯಕ್ತಿಯ ವಿಡಿಯೋ ಮತ್ತು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೋ ಬಗ್ಗೆ ಅನುಮಾನಗಳೂ ಇವೆ. ಏಕೆಂದರೆ ಯೋಗೇಂದ್ರ ಯಾದವ್, ರಾಜ್ ಮನೆತನದವರ ದೊಡ್ಡ ಅಭಿಮಾನಿ. ಅದು ಇತರರಿಗೂ ಗೊತ್ತಿದೆ. ಬಹುತೇಕರು ʻಆತ ಅಂತಹ ವ್ಯಕ್ತಿ ಅಲ್ಲʼ ಎಂದೇ ಪೋಸ್ಟ್ ಹಾಕುತ್ತಿದ್ದಾರೆ.
ಆದರೆ, ಯೋಗೇಂದ್ರ ಪ್ರಸಾದ್ ಎಂಬ ವ್ಯಕ್ತಿಯ ಟ್ವಿಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಬಾಳು ಕೊಡುತ್ತಿದ್ದೇನೆ. ‘ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್ ಕುಮಾರ್‌ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 ಅಕ್ಟೋಬರ್ 2024 ರಂದು ನಾನು ವಿವಾಹವಾಗಲಿದ್ದೇನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ.
ಸ್ಥಳ ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಪೋಸ್ಟ್ ಹಾಕಿದ್ದು ಸತ್ಯ. ಅದನ್ನು ನೇರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೇ ಟ್ಯಾಗ್ ಮಾಡಿದ್ದ ವಿಷಯವೂ ಸತ್ಯ. ಅದು ಸುಳ್ಳಾಗಿದ್ದರೆ ಅಥವಾ ಆತನ ಅಕೌಂಟ್ ಹ್ಯಾಕ್ ಆಗಿ ಬೇರೆ ಯಾರೋ ಸೃಷ್ಟಿಸಿದ್ದರೆ, ಆತನೇ ದೂರು ಕೊಡಬಹುದಿತ್ತು. ದೂರು ಕೊಡುವ ಶಕ್ತಿ ಇಲ್ಲದೇ ಹೋದರೆ, ಬೇರೆಯವರ ಮುಖಾಂತರವಾದರೂ ಗಮನಕ್ಕೆ ತರಬಹುದಿತ್ತು.. ಹಾಗೇಕೆ ಮಾಡಲಿಲ್ಲ ಎನ್ನುವುದೇ ಪ್ರಶ್ನೆ.
ವಿಡಿಯೋದಲ್ಲಿ ಅಶ್ವಿನಿಯವರು ಈತನನ್ನು ಅಪ್ಪಿಕೊಳ್ಳೋ ವಿಡಿಯೋ ಕೂಡಾ ಇದ್ದು, ಡೀಪ್ ಫೇಕ್ ವಿಡಿಯೋ ಸೃಷ್ಟಿಸಲಾಗಿತ್ತು. ಇದೀಗ ರಾಜ್ ಕುಟುಂಬದ ಅಭಿಮಾನಿಗಳು ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ಸಾರಾ ಗೋವಿಂದು ಅವರುಗಳಿಗೆ ವಿಡಿಯೋ ಹಾಗೂ ಚಿತ್ರಗಳ ಪ್ರತಿ ನೀಡಿ ದೂರು ನೀಡಿದ್ದಾರೆ. ಫಿಲಂ ಚೇಂಬರ್ ನವರೇ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನಕಲಿ ಖಾತೆಗಳನ್ನು ಬಳಸಿ ಇಂಥಹಾ ಅಸಭ್ಯ ವಿಡಿಯೋಗಳನ್ನು ಹರಿಬಿಡುತ್ತಿದ್ದು, ಸೋಷಿಯಲ್ ಮೀಡಿಯಾಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಫಿಲ್ಮ್ ಚೇಂಬರ್ಗೆ ಮನವಿ ಸಹ ಮಾಡಿದ್ದಾರೆ.
ದೂರು ಸ್ವೀಕರಿಸಿ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ‘ಈ ರೀತಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಚಿತ್ರರಂಗದಲ್ಲಿ ಎಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೂ ಈ ರೀತಿ ಕೃತ್ಯ ಮಾಡಬಾರದು, ಈ ಬಗ್ಗೆ ಕಮಿಷನರ್, ಸೈಬರ್ ಕ್ರೈಂ ಗೆ ದೂರು ಕೊಡುತ್ತೇವೆ ಎಂದಿದ್ದಾರೆ.
ಇನ್ನು ಚಿತ್ರರಂಗದ ಹಿರಿಯ ನಿರ್ಮಾಪಕ, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಕೂಡಾ ಕೆಲ ಕಿಡಿಗೇಡಿಗಳು ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಇಂತ ಕೆಲಸ ಮಾಡುವವರು ರಣಹೇಡಿಗಳು, ಧೈರ್ಯ ಇದ್ದರೆ ಮುಂದೆ ಬಂದು ಮಾತಾಡಲಿ, ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ದೂರು ಕೊಡುತ್ತೇವೆ. ರಾಜ್ ಕುಮಾರ್ ಕುಟುಂಬಕ್ಕೆ ಒಂದು ಬೆಲೆಯಿದೆ, ಕರ್ನಾಟಕ ಚಿತ್ರ ರಂಗದ ಗೌರವ ಹಾಳುಮಾಡಬೇಡಿ. ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಕ್ರಮ ಆಗುತ್ತೆ’ ಎಂದಿದ್ದಾರೆ.
ಕೆಲವು ನಟರ ಅಭಿಮಾನಿಗಳು, ಪ್ರತಿಸ್ಪರ್ಧಿ ನಟರ ಬಗ್ಗೆ ಅವರ ಕುಟುಂಬದ ಬಗ್ಗೆ ತೀರ ಕೀಳು ಮಟ್ಟದ ಕಮೆಂಟ್ ಮಾಡುವುದು, ಟ್ರೋಲ್ ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ. ಅದರಲ್ಲೂ ದರ್ಶನ್ ಜೈಲು ಸೇರಿದ ಬಳಿಕ ಅವರ ಅಭಿಮಾನಿಗಳು ಮೊದಲಿಗಿಂತಲೂ ವಿಕೃತವಾಗಿ ವರ್ತಿಸುತ್ತಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಇದು ಅನಾಹತವನ್ನೇ ಸೃಷ್ಟಿಸುವ ಆತಂಕವೂ ಇದೆ.
ಏಕೆಂದರೆ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಲ್ ಆಗಿದ್ಧಾರೆ. ಈ ಹಿಂದೆ ಇದನ್ನೂ ಮೀರಿದ ಕೆಟ್ಟತನ ಮೆರೆದಾಗಲೂ ಅಶ್ವಿನಿ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಈಗಲೂ ತಲೆ ಕೆಡಿಸಿಕೊಂಡಿಲ್ಲ. ಆದರೆ.. ಅಸಹ್ಯವಂತೂ ಪರಮಾವಧಿಯಲ್ಲಿದೆ. ಲಿಮಿಟ್ ದಾಟುತ್ತಲೇ ಇದೆ.
ಈ ಹಿಂದೆ ರಶ್ಮಿಕಾ ಮಂದಣ್ಣ ವಿಷಯದಲ್ಲಿ ಅಮಿತಾಭ್ ಬಚ್ಚನ್ ಆಕ್ಟಿವ್ ಆಗಿದ್ದರು. ಅದಾದ ನಂತರ ಕೆಲವು ನಟ, ನಟಿಯರ ಅಶ್ಲೀಲ ವಿಡಿಯೋ ಬಂದಾಗ ಅವರವರೇ ಆಕ್ಟಿವ್ ಆಗಿದ್ದರು. ಆದರೆ, ಅಶ್ವಿನಿ ಪುನೀತ್ ಅವರ ವಿಷಯದಲ್ಲಿ ಅಭಿಮಾನಿಗಳು ಆಕ್ಟಿವ್ ಆಗಿದ್ಧಾರೆ. ಆದರೆ ಅಶ್ವಿನಿ ಅವರು ಮಾತ್ರ.. ಅಹಂಕಾರ, ಅಸಭ್ಯತೆಗೆ ಉದಾಸೀನವೇ ಮದ್ದು ಎಂಬಂತಿದ್ದಾರೆ.



