ಕಾಟೇರ ಸೂಪರ್ ಸಕ್ಸಸ್ ಆಗಿದೆ. ಪಾರ್ಟಿನೂ ಜೋರಾಗಿಯೇ ಇದೆ. ಬಾಕ್ಸಾಫೀಸ್ ಚಿಂದಿ ಉಡಾಯಿಸುತ್ತಿರೋ ಕಾಟೇರದ ಯಶಸ್ಸನ್ನು ರಾಕ್ʻಲೈನ್ ವೆಂಕಟೇಶ್ ಪಾರ್ಟಿ ಮೇಲೆ ಪಾರ್ಟಿ ಮಾಡಿ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚೆಗೆ ಚಿತ್ರದ ಸಕ್ಸಸ್ ಬಗ್ಗೆ ಪಾರ್ಟಿ ಮಾಡಿದ್ರು. ಜವರಿ 3ನೇ ತಾರೀಕು, ಆ ದಿನ ಒಂದು ಪಾರ್ಟಿ ಮಾಡಿದ್ದರು. ಆ ಪಾರ್ಟಿಗೆ ಸಂಬಂಧಪಟ್ಟಂತೆ ಈಗ ಹಲವರಿಗೆ ನೋಟಿಸ್ ಜಾರಿಯಾಗುತ್ತಿದೆ. ನೋಟಿಸ್ ಪಡೆದವರ ಲಿಸ್ಟಿನಲ್ಲಿ ನಟ ದರ್ಶನ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಷ್, ನೀನಾಸಂ ಸತೀಶ್, ಡೈರೆಕ್ಟರ್ ತರುಣ್ ಸುಧೀರ್, ಚಿಕ್ಕಣ್ಣ, ಹರಿಕೃಷ್ಣ, ಸೇರಿ ಹಲವರಿದ್ಧಾರೆ. ಒಟ್ಟು 8 ಜನ.
ಘಟನೆ ಏನಾಯ್ತು?
ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ಮಾಡಿದ್ದರು. ಜನವರಿ 3ರಂದು ರಾತ್ರಿ ಪಬ್ಗೆ ಇವರು ಬೆಳಗಿನಜಾವದವರೆಗೆ ಪಾರ್ಟಿ ಮಾಡಿದ್ದರು. ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ನಿಯಮವನ್ನು ಇಲ್ಲಿ ಮೀರಲಾಗಿದೆ. ಜಟ್ಲಾಗ್ ರೆಸ್ಟೋಬಾರ್ ಈ ನಿಮಯಮ ಉಲ್ಲಂಘಿಸಿ ಬೆಳಗಿನ ಜಾವ 3.30ರವರೆಗೂ ಪಾರ್ಟಿ ಮಾಡಲು ಸೆಲೆಬ್ರಿಟಿಗಳಿಗೆ ಅವಕಾಶ ಕೊಟ್ಟಿತ್ತು. ರೆಸ್ಟೋಬಾರ್ ಬೆಳಗ್ಗಿನ ಜಾವ 3 ಗಂಟೆಯಾದ್ರೂ ತೆಗೆದೇ ಇರುವ ಬಗ್ಗೆ ಸ್ಥಳೀಯರು ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಜಟ್ಲಾಗ್ ರೆಸ್ಟೋಬಾರ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಕೂಡಲೇ ಬಾರ್ ಕ್ಲೋಸ್ ಮಾಡಿಸಿ 3.30ರ ಸುಮಾರಿಗೆ ಜೆಟ್ಲಾಗ್ ನಲ್ಲಿ ಪಾರ್ಟಿ ಮಾಡ್ತಿದ್ದ ಸೆಲೆಬ್ರಿಟಿಗಳನ್ನ ಮನೆಗೆ ಕಳುಹಿಸಿದ್ದರು. ಸುಬ್ರಹ್ಮಣ್ಯನಗರ ಇನ್ಸ್ಪೆಕ್ಟರ್ ಸುರೇಶ್ ಅವರಿಂದ ಮೂವರಿಗೂ ನೋಟಿಸ್ ಜಾರಿ ಆಗಿದೆ.
ಪೊಲೀಸರಿಗೆ ದಾರಿ ತಪ್ಪಿಸಿದ್ರಾ ಜೆಟ್ ಲ್ಯಾಗ್ ಮಾಲೀಕರು?
ಪ್ರಕರಣ ನಡೆದ ದಿನ ಮಧ್ಯರಾತ್ರಿ 12.45ಕ್ಕೆ ಜೆಟ್ಲ್ಯಾಗ್ಗೆ ಅವತ್ತಿನ ನೈಟ್ ರೌಂಡ್ಸ್ ಇರೋ ಎಸ್ಐ ಮತ್ತು ಸಿಬ್ಬಂದಿ ಹೋಗಿದ್ದರು. ತಡರಾತ್ರಿ 1:10ಕ್ಕೆ ಎಸ್ಐ ಜೆಟ್ಲ್ಯಾಗ್ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು. ಸ್ಟಾರ್ಗಳು ಒಳಗಡೆ ಇರೋದೇಕೆ ಎಂದು ಎಸ್ಐ ಪ್ರಶ್ನೆ ಮಾಡಿದ್ದರು.
ದರ್ಶನ್ ಸಿನಿಮಾವೊಂದರ ಮಾತು ಕತೆ ನಡೆಯುತ್ತಿದೆ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್. ಮೇಲೊಂದು ಗಾಜಿನ ರೂಮ್ ಇದೆ. ಅಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಮಾತು ಕತೆ ನಡೆಸುತ್ತಿದ್ದೇವೆ ಎಂದು ಜೆಟ್ಲ್ಯಾಗ್ ಮಾಲೀಕರು ಮಾಹಿತಿ ನೀಡಿದ್ದರು. ಅಲ್ಲದೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಮಾತ್ರ ಇದ್ದಾರೆ ಎಂದು ಜೆಟ್ಲ್ಯಾಗ್ ಮಾಲೀಕರು ಮಾಹಿತಿ ನೀಡಿದ್ದರು. ಈ ನಡುವೆ ಮಧ್ಯರಾತ್ರಿ 2.50ಕ್ಕೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಾಬರಿ ಆಗಿದೆ ಎಂದು ಪೊಲೀಸರಿಗೆ ಕರೆ ಬಂದಿದೆ. ರೆಸ್ಟೋಬಾರ್ ಕ್ಲೋಸ್ ಮಾಡಿಸಿ ಆ ಕೇಸ್ ಅಟೆಂಡ್ ಮಾಡಲು ಪೊಲೀಸರು ಹೋಗಿದ್ದರು. ಸೈರನ್ ಆಗಿದ್ದರಿಂದ ಬ್ಯಾಂಕ್ ರಾಬರಿ ಆಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಟೆಕ್ನಿಕಲ್ ಇಶ್ಯೂ ಆಗಿದ್ದರಿಂದ ಸೈರನ್ ಕೂಗಿತ್ತು. ಅಲ್ಲಿಗೆ ಮುಂಜಾನೆ 3 ಗಂಟೆ ಆಗಿತ್ತು. ಈ ಪ್ರಕರಣ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋಬಾರ್ನತ್ತ ಪೊಲೀಸರು ಹೋಗಿದ್ದರು. ಈ ವೇಳೆ ದರ್ಶನ್ ಜೊತೆ ಫೋಟೋಗಾಗಿ ಅಭಿಮಾನಿಗಳು ನಿಂತಿದ್ದರು. ಹೋಗಿ ಕ್ರೌಡ್ ಕ್ಲಿಯರ್ ಮಾಡಿ ದರ್ಶನ್ ಮತ್ತು ಸಹನಟರನ್ನ ಕಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಜೊತೆಗೆ ಅಂದು ರಾತ್ರಿ ನಡೆದ ಘಟನೆಗಳ ಬಗ್ಗೆ ಪೊಲೀಸ್ ಸಿಬ್ಬಂದಿ ಡೈರಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಇತ್ತ, ಜೆಟ್ಲ್ಯಾಗ್ ಮಾಲೀಕರಾದ ಶಶಿರೇಖಾ ಜಗದೀಶ್ ಹೇಳಿಕೆಯಲ್ಲಿ ನಟ ದರ್ಶನ್ ಸೇರಿ ಎಂಟು ಜನರ ಹೆಸರು ಇದೆ. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿದೆ. ಸದ್ಯ ನೋಟಿಸ್ಗೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ, ಎರಡನೇ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ದರ್ಶನ್, ರಾಕ್ʻಲೈನ್ ವೆಂಕಟೇಶ್ ಟೀಂ ದುಬೈ ಸೇರಿದಂತೆ ವಿದೇಶ ಪ್ರವಾಸದಲ್ಲಿದೆ. ಕಾಟೇರ ಚಿತ್ರವನ್ನು ಅಲ್ಲಿಯೂ ಪ್ರಮೋಟ್ ಮಾಡ್ತಿದೆ. ಆದರೆ ಉಳಿದಂತೆ ನೋಟಿಸ್ ಬಂದಿರುವ ಹಲವು ನಟರಿಗೆ ಸಂಕಷ್ಟ ಎದುರಾಗಿದೆ.



