ತಮಿಳುನಾಡಿನಲ್ಲಿ ಅಣ್ಣಾ ಮಲೈ ಅವರ ಬಗ್ಗೆ ಭರ್ಜರಿ ನಿರೀಕ್ಷೆ ಇತ್ತು. ತಮಿಳುನಾಡಿನಲ್ಲಿ ಖಾತೆ ತೆರೆಯುತ್ತಾರೆ ಹಾಗೂ ಬಿಜೆಪಿಯ ಮತ ಪ್ರಮಾಣವನ್ನು ಎರಡಂಕಿಗೆ ಏರಿಸುತ್ತಾರೆ ಎಂಬ ನಿರೀಕ್ಷೆಗಳಿದ್ದವು. ಒಂದು ನಿರೀಕ್ಷೆಯೇನೋ ನಿಜವಾಯ್ತು. ಎರಡನೆಯದ್ದು ಆಗಲಿಲ್ಲ. ಎಲ್ಲ ಸ್ಥಾನಗಳೂ ಡಿಎಂಕೆ ಮತ್ತು ಕಾಂಗ್ರೆಸ್ ಪಾಲಾದವರು. ಅಣ್ಣಾಮಲೈ ಸೇರಿದಂತೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಲ್ಲರೂ ಸೋತರು. ಆದರೆ.. ಈ ಬಾರಿ ಸೋಲುಗಳು ವೀರೋಚಿತವಾಗಿದ್ದವು.
ತಮಿಳುನಾಡಿನಲ್ಲಿ ಭವಿಷ್ಯದ ನಾಯಕ ಅಂತಾ ಗುರುತಿಸಲಾಗ್ತಿರೋ ಅಣ್ಣಾಮಲೈ ಅವರನ್ನ ಡಿಎಂಕೆ ಈಗಾಗಲೇ ಟಾರ್ಗೆಟ್ ಮಾಡುತ್ತಿದೆ. ಅದರ ಒಂದು ಭಾಗವಾಗಿಯೇ ಒಂದು ವಿಡಿಯೋ ಹೊರಬಿದ್ದಿದೆ. ತಮಿಳುನಾಡಿನ ಡಿಎಂಕೆ ಬೆಂಬಲಿಗರು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಮುಖದ ಮೇಲೆ ಮೇಕೆಯನ್ನು ಸಾರ್ವಜನಿಕವಾಗಿ ಕಡಿಯುತ್ತಿರುವ ವಿಡಿಯೋ ಬಿಟ್ಟಿದ್ದಾರೆ.
ಮೇಕೆಯೊಂದಕ್ಕೆ ಅಣ್ಣಾಮಲೈ ಅವರ ಬೋರ್ಡ್ ಹಾಕಿ.. ತಲೆ ಕಡಿಯುವ ವಿಡಿಯೋ ಬಿಟ್ಟಿದ್ಧಾರೆ ಡಿಎಂಕೆ ಕಾರ್ಯಕರ್ತರು. ಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಅವರ ಮುಖವನ್ನು ಸಾರ್ವಜನಿಕವಾಗಿ ನೋಡುತ್ತಿರುವ ಮೇಕೆಯನ್ನು ಕಡಿಯುತ್ತಿರುವ ಆಘಾತಕಾರಿ ವಿಡಿಯೋ ಭಯಂಕರವಾಗಿದೆ. . ಅಣ್ಣಾಮಲೈ ಅವರ ಫೋಟೋವನ್ನು ಮೇಕೆಯ ಕುತ್ತಿಗೆಗೆ ಹಾಕಿ ಮೇಕೆಯ ಶಿರಚ್ಛೇದ ಮಾಡಿರುವ ವಿಡಿಯೋ ಭಯ ಹುಟ್ಟಿಸುತ್ತಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಅವರು ಡಿಎಂಕೆ ಅಭ್ಯರ್ಥಿ ಪಿ.ಗಣಪತಿ ರಾಜ್‌ಕುಮಾರ್ ಅವರ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋಲು ಅಣುಭವಿಸಿದ್ದಾರೆ. ಅಣ್ಣಾಮಲೈ ತೀವ್ರ ಪ್ರಚಾರ ಕಾರ್ಯ ಹಾಗೂ ಪಕ್ಷ ಸಂಘಟನೆ ನಡುವೆಯೂ ಕೆಲ ಮತಗಳ ಅಂತರದಿಂದ ಸೋತ ಹಿನ್ನೆಲೆಯಲ್ಲಿ ನಿಮ್ಮನ್ನು ಚುನಾವಣಾ ಕಣದಲ್ಲಿ ಮೇಕೆಯ ರೀತಿಯಲ್ಲಿ ಹರಕೆಯ ಕುರಿಯಂತೆ ಕತ್ತರಿಸಲಾಗುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.
ಆದರೆ.. ಈ ರೀತಿ ತಲೆ ಕಡಿಯುವುದು ಐಸಿಸ್ ಮಾದರಿಯಲ್ವೇ ಎನ್ನುವುದು ಬಿಜೆಪಿ ಪ್ರಶ್ನೆ. ವಿವಿಧ ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರಿಂದ ಟೀಕೆಗಳೇನೋ ವ್ಯಕ್ತವಾಗಿದೆ. ಆದರೆ.. ಡಿಎಂಕೆ ನಾಯಕರು ಗೊತ್ತೇ ಇಲ್ಲದಂತೆ ಕುಳಿತಿದ್ದು, ಪರೋಕ್ಷವಾಗಿ ತಮ್ಮ ಕಾರ್ಯಕರ್ತರ ನಡೆಯನ್ನ ಬೆಂಬಲಿಸಿದ್ಧಾರೆ. ರಾಜಕೀಯ ಅನ್ನೋದು ಕೀಳುಮಟ್ಟಕ್ಕೆ ಇಳಿಯುತ್ತಿದೆ.
ವಿಡಿಯೋಗೆ ರಿಯಾಕ್ಷನ್ ಕೊಟ್ಟಿರುವ ಅಣ್ಣಾಮಲೈ.. ʻಮೇಕೆಯನ್ನೇಕೆ ಬಲಿ ಕೊಡ್ತೀರಿ. ನಾನು ಇಲ್ಲೇ ಇದ್ದೇನೆ. ಬನ್ನಿʼ ಎಂದು ಸವಾಲು ಹಾಕಿದ್ದಾರೆ. ಅಣ್ಣಾ ಮಲೈ ಗೆದ್ದೇ ಗೆಲ್ಲುತ್ತಾರೆ ಅನ್ನೋ ವಿಶ್ವಾಸ ಮೂಡಿಸಿದ್ದರಾದರೂ.. ಸೋತಿದ್ಧಾರೆ. ಅಣ್ಣಾಮಲೈ ಸೋಲನ್ನು ಡಿಎಂಕೆ ನಾಯಕಿ, ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನ್ನಿಮೋಳಿ ಕುಹಕವಾಡಿದ್ದಾರೆ. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ನನ್ನ ತಂದೆ ಕರುಣಾನಿದಿಯಾಗಿದ್ದರೆ ನಾನು ಸುಲಭದಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ.
ನನ್ನ ತಂದೆ ಕರುಣಾನಿಧಿಯಾಗಿದ್ದರೆ ನಾನು ಗೆಲ್ಲುತ್ತಿದ್ದೆ. ಆದರೆ ನನ್ನ ತಂದೆ ಕುಪ್ಪುಸ್ವಾಮಿ. ಹೀಗಾಗಿ ಗೆಲುವಿಗೆ ಇನ್ನಷ್ಟು ಪರಿಶ್ರಮ ಬೇಕಿದೆ. ಗೆಲುವಿಗೆ ಕೆಲ ಸಮಯ ತೆಗೆದುಕೊಳ್ಳಲಿದೆ. ನನ್ನ ತಂದೆ ಫಾರ್ಮರ್ (ರೈತ), ಫಾರ್ಮರ್ ಸಿಎಂ (ಮಾಜಿ ಸಿಎಂ) ಅಲ್ಲ ಎಂದಿದ್ದಾರೆ ಅಣ್ಣಾಮಲೈ. ಇದೇ ವೇಳೆ ಅಣ್ಣಾ ಮಲೈ ಅವರ ಹೆಸರಿನ ಮೇಕೆಯ ತಲೆ ಕಡಿಯುವ ಕ್ರೌರ್ಯವನ್ನೂ ಮೆರೆದಿದೆ ಡಿಎಂಕೆ.



