ದೇಶದ ಲೋಕಸಭೆ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಸಂಪುಟಕ್ಕೆ ಭರ್ಜರಿ ಸರ್ಜರಿ ಗ್ಯಾರಂಟಿ. ಈ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ಧಾರೆ. ಆದರೆ..ಇದು ರಿಲಸ್ಟಿಗೋಸ್ಕರ ನೀಡುತ್ತಿರುವ ಹೇಳಿಕೆ ಎಂದುಕೊಳ್ಳುತ್ತಿದ್ದವರಿಗೆ ಎಲೆಕ್ಷನ್ ಮುಗಿದ್ಮೇಲೆ ಶಾಕ್ ಗ್ಯಾರಂಟಿ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ ಈ ಸಲ ಅಭ್ಯರ್ಥಿಗಳ ಕೊರತೆಯಿಂದ ಸಚಿವರ ಮಕ್ಕಳು ಮತ್ತು ಕುಟುಂಬ ಸದಸ್ಯರನ್ನು ಕಣಕ್ಕಿಳಿಸಿತ್ತು. ಪರಿವಾರ ರಾಜಕಾರಣದ ಆರೋಪ ಬಂದರೂ ಸವಾಲನ್ನು ಸ್ವೀಕರಿಸಿತ್ತು. ಗೆಲ್ಲುವುದೊಂದೇ ಮಂತ್ರ ಎಂಬ ಗುರಿ ಇಟ್ಟುಕೊಂಡು ಮುನ್ನುಗ್ಗಿತ್ತು. ಅಷ್ಟೇ ಅಲ್ಲ, ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನೂ ಸಚಿವರಿಗೆ ನೀಡಲಾಗಿತ್ತು. ಈ ಟಾಸ್ಕ್ʻನಲ್ಲಿ ಸೋತವರಿಗೆ ಮಂತ್ರಿ ಪಟ್ಟಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಅಕಸ್ಮಾತ್ ಗೆದ್ದರೆ.. ನೋ ಪ್ರಾಬ್ಲಂ ಎನ್ನಲಾಗುತ್ತಿದೆ.
ಸಂಪುಟದ ಸದಸ್ಯರ ಕುಟುಂಬದವರೇ ಸೋತರೆ.. ಅಂದರೆ ಮಗ/ಮಗಳು/ಪತ್ನಿ/ಅಕ್ಕ/ಭಾವ.. ಮಾದರಿಯಲ್ಲಿ ಸೋತರೆ ಅವರು ಕ್ಯಾಬಿನೆಟ್ಟಿಂದ ಹೊರಹೋಗಬೇಕು. ಸಂಬಂಧಿಸಿದ ಸಚಿವರು ನೈತಿಕ ಹೊಣೆ ಹೊರಬೇಕು. ಈ ಚುನಾವಣೆಯ ಸೋಲು ಮತ್ತು ಗೆಲುವು ಸಚಿವರುಗಳ ಭವಿಷ್ಯವನ್ನೂ ನಿರ್ಧರಿಸಲಿದೆ. ಇದು ಹೈಕಮಾಂಡ್ ಮಟ್ಟದಲ್ಲೇ ಆಗಿರುವ ನಿರ್ಧಾರ. ಹಾಗಾಗಿ ಚುನಾವಣೆ ಫಲಿತಾಂಶವನ್ನು ಕಾಂಗ್ರೆಸ್ ಎದುರು ನೋಡುತ್ತಿದೆ.
ಈ ಲಿಸ್ಟಿನಲ್ಲಿ ಯಾರೆಲ್ಲ ಇದ್ಧಾರೆ ಗೊತ್ತಾ..?
ಸಚಿವ ಈಶ್ವರ್ ಖಂಡ್ರೆ : ಇವರ ಮಗ ಸಾಗರ್ ಖಂಡ್ರೆಗೆ ಬೀದರ್ ಟಿಕೆಟ್ ಕೊಡಲಾಗಿದೆ.
ಸಚಿವ ಶಿವಾನಂದ ಪಾಟೀಲ್ : ಇವರ ಮಗಳು ಸಂಯುಕ್ತಾ ಪಾಟೀಲ್ ಬಾಗಲಕೋಟೆಯ ಅಭ್ಯರ್ಥಿ
ಮಲ್ಲಿಕಾರ್ಜುನ್ ಶಾಮನೂರು : ಇವರ ಪತ್ನಿ ಪ್ರಭಾ ಅವರಿಗೆ ದಾವಣಗೆರೆ ಟಿಕೆಟ್ ಕೊಡಲಾಗಿದೆ.
ಸತೀಶ್ ಜಾರಕಿಹೊಳಿ : ಇವರ ಮಗಳು ಪ್ರಿಯಾಂಕಾ ಚಿಕ್ಕೋಡಿ ಕ್ಯಾಂಡಿಡೇಟ್
ಲಕ್ಷ್ಮೀ ಹೆಬ್ಬಾಳ್ಕರ್ : ಇವರ ಮಗ ಮೃಣಾಲ್ ಅವರಿಗೆ ಬೆಳಗಾವಿ ಟಿಕೆಟ್ ನೀಡಲಾಗಿದೆ.
ಹೆಚ್.ಸಿ.ಮಹದೇವಪ್ಪ : ಇವರ ಮಗ ಸುನಿಲ್ ಬೋಸ್ ಚಾಮರಾಜನಗರ ಅಭ್ಯರ್ಥಿ
ಪ್ರಿಯಾಂಕ್ ಖರ್ಗೆ : ಇವರ ಭಾವ ಅಂದರೆ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಕಲ್ಬುರ್ಗಿಯಿಂದ ಸ್ಪರ್ಧಿಸಿದ್ಧಾರೆ
ಮಧು ಬಂಗಾರಪ್ಪ : ಇವರ ಅಕ್ಕ ಗೀತಾ ಶಿವರಾಜಕುಮಾರ್ ಶಿವಮೊಗ್ಗದಿಂದ ಸ್ಪರ್ಧೆ ಮಾಡಿದ್ಧಾರೆ
ಡಿಕೆ ಶಿವಕುಮಾರ್ : ಸಂಸದ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ
ಆದರೆ.. ಇಲ್ಲಿ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಹೊರತು ಪಡಿಸಿದ್ರೆ.. ಮಿಕ್ಕವರ ಕುಟುಂಬ ಸದಸ್ಯರು ಸೋತರೂ ಸಮಸ್ಯೆ ಇಲ್ಲ ಎನ್ನಲಾಗಿದೆ.



