ಹಿಂದೂ ಧರ್ಮ (Hindu Dharma) ದ್ವೇಷ ಮಾಡಿದರೆ ಲಾಭ ಇದೆಯಾ..? ಹಿಂದೂ ಧರ್ಮ ದ್ವೇಷ ಮಾಡಿದರೆ ತೃಪ್ತಿ ಸಿಗುತ್ತಾ? ಹಿಂದೂ ಧರ್ಮ (Hindu Dharma) ದ್ವೇಷ ಮಾಡುವುದು ಪಕ್ಕಾ ಬಿಸಿನೆಸ್ ಆಗಿದೆಯಾ..? ಇಂಥಾದ್ದೊಂದು ಪ್ರಶ್ನೆ ಹುಟ್ಟುವುದು ಹಿಂದೂ ಧರ್ಮ ದ್ವೇಷದ ಹೇಳಿಕೆಗಳನ್ನು ನೋಡಿದಾಗ.. ಏಕೆಂದರೆ ಇದೀಗ ಪ್ರಚಾರಕ್ಕೆ ಬಂದಿರೋ ಕೆಲವು ನಾಯಕರ ಎಡಬಿಡಂಗಿತನದ ಹೇಳಿಕೆಗಳನ್ನು ನೋಡಿದರೆ, ಅನ್ನಿಸೋದೇ ಹಾಗೆ.. ಏಕೆಂದರೆ ಈಗ ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡುವ ಹೇಳಿಕೆ ಕೊಟ್ಟಿರುವ ಉದಯನಿಧಿ ಸ್ಟಾಲಿನ್ (Udayanidhi Stalin) ಮತ್ತು ಆತನಿಗೆ ಬೆಂಬಲ ಕೊಟ್ಟಿರುವ ಪ್ರಕಾಶ್ ರಾಜ್ (Prakash Raj) ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡುವುದು ಮತ್ತು ವಾಸ್ತವದಲ್ಲಿ ನಡೆದುಕೊಳ್ಳುವುದು ಬೇರೆಯೇ.
ವಿವಾದಕ್ಕೆ ಮುನ್ನುಡಿ ಬರೆದಿದ್ದು ಉದಯನಿಧಿ ಸ್ಟಾಲಿನ್. ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ.
ಸನಾತನ ಧರ್ಮ (Hindu Dharma) ಮಲೇರಿಯಾ(malaria), ಡೆಂಘೀ (Dengue) ಇದ್ದಂತೆ. ಅದನ್ನು ಕೇವಲ ವಿರೋಧ ಮಾಡಿದರೆ ಸಾಲದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ (Udayanidhi Stalin) ಹೇಳಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಕೂಡಾ ಸನಾತನ ಧರ್ಮದ ವಿರುದ್ಧ ಟ್ವೀಟ್ ಮಾಡಿದ್ದಾರೆ. ಹಿಂದೂಗಳು (Hindu Dharma) ತನಾ ತನಿಸ್ ಅಲ್ಲ. ಆದರೆ ತನಾತನಿಸ್ ಮಾನವ ವಿರೋಧಿಗಳು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರಾಜ್ (Prakash Raj) ಟ್ವೀಟ್ ಮೂಲಕ ಇವಿ ರಾಮಸ್ವಾಮಿ ಅಂದರೆ ಪೆರಿಯಾರ್ ಹಾಗೂ ಅಂಬೇಡ್ಕರ್ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಹಿಂದೂಗಳು ತನಾತನಿಗಳಲ್ಲ. ಆದರೆ ತನಾತನೀಸ್ ಮಾನವ ವಿರೋಧಿಗಳು. ನೀವು ಒಪ್ಪಿದರೆ ರಿಟ್ವೀಟ್ ಮಾಡಿ. ಶುಭ ಭಾನುವಾರ. ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರಾಜ್ (Prakash Raj) ಬಳಸಿರುವ ತಂತಾನಿ ಅಥವಾ ತನಾ ತನಿಸ್ ಅನ್ನೋ ಪದವನ್ನು ಎಡಪಂಥೀಯರು ಸೇರಿದಂತೆ ಕೆಲವರು ಸನಾತನ ಧರ್ಮವನ್ನು ಗೇಲಿ ಮಾಡುವಾಗ, ವ್ಯಂಗ್ಯವಾಡುವಾಗ ಬಳಸುವ ಪದ. ಒಟ್ಟಿನಲ್ಲಿ ಹಿಂದೂ ಧರ್ಮವನ್ನು ಟೀಕಿಸುವ ವಿಷಯದಲ್ಲಿ ಪ್ರಕಾಶ್ ರಾಜ್ ಎಲ್ಲಿದ್ದರೂ ಮುಂಚೂಣಿಯಲ್ಲಿರುತ್ತಾರೆ ಎಂದು ನೆಟ್ಟಿಜನ್ಸ್ ಟೀಕಿಸುತ್ತಿದ್ದಾರೆ.
ಟೀಕೆ ಯಾಕೆ..? ಉದಯನಿಧಿ ಸ್ಟಾಲಿನ್ (Udayanidhi Stalin) ಮತ್ತು ಪ್ರಕಾಶ್ ರಾಜ್ ಡಬಲ್ ಸ್ಟಾಂಡರ್ಡ್ ಏನು?
ನಟ ಪ್ರಕಾಶ್ ರಾಜ್ (Prakash Raj) ಹೇಳಿಕೇಳಿ ನರೇಂದ್ರ ಮೋದಿ ವಿರೋಧಿ. ಮೋದಿಯನ್ನು ವಿರೋಧಿಸುತ್ತಲೇ ಹಿಂದೂ ಧರ್ಮ ದ್ವೇಷಿಯಾಗಿರುವ ಪ್ರಕಾಶ್ ರಾಜ್ (Prakash Raj) ಅವರ ಪತ್ನಿ ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subrhmanya) ಭೇಟಿ ಮಾಡುತ್ತಾರೆ. ಶೃಂಗೇರಿಗೂ (Shringeri) ಭೇಟಿ ಮಾಡುತ್ತಾರೆ. ಪತ್ನಿಯ ಜೊತೆ ನಟ ಪ್ರಕಾಶ್ ರಾಜ್ ಕೂಡಾ ದೇವಸ್ಥಾನಕ್ಕೆ ಹೋಗುತ್ತಾರೆ. ಮಕ್ಕಳಾಗದ್ದಕ್ಕೆ ಹೋಮ ಮಾಡುತ್ತಾರೆ. ಹಿಂದೂ ಧರ್ಮದ ಶಕ್ತಿಪೀಠಗಳಲ್ಲಿ ಒಂದಾದ ಶೃಂಗೇರಿಗೂ ಹೋಗುತ್ತಾರೆ. ಪೂಜೆ ಮಾಡಿಸುತ್ತಾರೆ. ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಉತ್ಸವ ಟೀಕಿಸುವಾಗ, ಮಕ್ಕಳು ಶ್ರೀರಾಮ ಸೀತೆಯ ವೇಷದಲ್ಲಿ ಬರುವುದು ಪ್ರಕಾಶ್ ರಾಜ್ ಕಣ್ಣೀಗೆ ಫೋರ್ನ್ ರೀತಿ ಕಾಣಿಸುತ್ತದೆ. ಮತ್ತು ಹೊರಗೆ ಬಂದು ಸಮಯ ಸಿಕ್ಕ ಕೂಡಲೇ ಸನಾತನ ಧರ್ಮ ಸರ್ವನಾಶದ ಬಗ್ಗೆ ಮಾತನಾಡುತ್ತಾರೆ.
ಇನ್ನು ಉದಯನಿಧಿ ಸ್ಟಾಲಿನ್ (Udayanidhi Stalin) ಅವರದ್ದೂ ಅಷ್ಟೆ. ಉದಯನಿಧಿ (Udayanidhi Stalin) ಸ್ಟಾಲಿನ್ ಅವರ ಪತ್ನಿ ದುರ್ಗಾ (Durga Stalin) ಅವರೂ ಅಷ್ಟೇ. ಇತ್ತೀಚೆಗೆ ಆಗಸ್ಟ್ 10ರಂದು ಗುರುವಾಯೂರಿಗೆ (Guruvayuru temple) ಭೇಟಿ ನೀಡಿದ್ದ ಉದಯನಿಧಿ ಅವರ ಪತ್ನಿ ದುರ್ಗಾ ಸ್ಟಾಲಿನ್, 32 ಸವರನ್`ನ 0.256 ಕೆಜಿ ತೂಕದ ಸುಮಾರು 14 ಲಕ್ಷ ರೂ. ಮೌಲ್ಯದ ಕಿರೀಟವನ್ನ ಕಾಣಿಕೆಯಾಗಿ ಕೊಟ್ಟಿದ್ದರು. ಇದು ಇತ್ತೀಚೆಗೆ ನಡೆದಿರುವ ಘಟನೆ ಅಷ್ಟೆ. ಇಂತಹ ದೇವರ ಪೂಜೆ, ಉತ್ಸವಗಳಲ್ಲಿ ಹಿಂದೂ ಧರ್ಮದ ಆಚರಣೆಗಳಲ್ಲಿ ಭಾಗವಹಿಸುತ್ತಲೇ ಇರುತ್ತಾರೆ. ಆದರೆ.. ಹೇಳಿಕೆಗಳು ಮಾತ್ರ ಹಿಂದೂ ಧರ್ಮ ಸರ್ವನಾಶದ್ಧಾಗಿರುತ್ತದೆ.
ಹೀಗೇಕೆ.. ಹಿಂದೂ ಧರ್ಮ ದ್ವೇಷದಿಂದ, ಹಿಂದೂ ಧರ್ಮನಾಶದಿಂದ ಇವರಿಗೆ ಯಾವುದಾದರೂ ವ್ಯಾವಹಾರಿಕ ಲಾಭಗಳಿವೆಯಾ..? ಉದಯನಿಧಿ ಸ್ಟಾಲಿನ್ ಅವರಿಗೇನೋ ರಾಜಕೀಯ ಲಾಭ. ಆದರೆ ಪ್ರಕಾಶ್ ರೈ.. ಪಾರ್ಟ್‍ಟೈಂ ರಾಜಕಾರಣಿ. ಅವರಿಗ್ಯಾವ ಲಾಭ.. ಗೊತ್ತಾಗುತ್ತಿಲ್ಲ.



