ತೂಕ ಇಳಿಸಿಕೊಂಡಿದ್ದೇ (Spandana) ಕಂಟಕವಾಯ್ತಾ? ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಹೀಗೊಂದು ಸುದ್ದಿ ಹರಿದಾಡುತ್ತಿರುವುದಂತೂ ನಿಜ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ಅವರ ಹಠಾತ್ ನಿಧನಕ್ಕೆ ತೂಕ ಇಳಿಸಿಕೊಂಡಿದ್ದೇ ಕಾರಣವಂತೆ. ಹೀಗೊಂದು ಸುದ್ದಿ ಹರಿದಾಡುತ್ತಿದೆ.
ಸ್ಪಂದನಾ (Spandana Vijay Raghavendra) ವ್ಯಾಯಾಮ ಮೂಲಕ ಬರೋಬ್ಬರಿ 16 ಕೇಜಿ ತೂಕ ಇಳಿಸಿಕೊಂಡಿದ್ದರು (Weight loss) ಎನ್ನಲಾಗಿದೆ. ಅವರು ಹೀಗೆ ದೇಹ ದಂಡಿಸಿಕೊಂಡಿದ್ದೇ ಅವಘಡಕ್ಕೆ ಕಾರಣ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಅವರನ್ನು ನೋಡಿದವರು ಸ್ಪಂದನಾ (Spandana Vijay Raghavendra) ಅವರು 16 ಕೆಜಿ ತೂಕ ಇಳಿಸಿಕೊಳ್ಳುವಷ್ಟು (Weight loss) ದಪ್ಪನೇ (Fat body) ಇರಲಿಲ್ಲ. ಅಲ್ಲದೆ ಸ್ಪಂದನಾ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎನ್ನುತ್ತಿದ್ದರೇ ಹೊರತು, ಅದಕ್ಕಾಗಿ ಹಠಕ್ಕೆ ಬಿದ್ದಿರಲಿಲ್ಲ. ವ್ಯಾಯಾಮ ಮಾಡುತ್ತಿದ್ದರಾದರೂ, ಅತಿಯಾಗಿ ಅಂತೂ ಮಾಡುತ್ತಿರಲಿಲ್ಲ ಎನ್ನುವುದು ಅವರ ಮನೆಯ ಡ್ರೈವರ್, ಕೆಲಸದಾಳುಗಳ ಮಾತು.
ಕೊರೊನಾ ಅವಧಿಯಲ್ಲಿ ವ್ಯಾಯಾಮ (Weight loss) ಮಾಡುತ್ತಿದ್ದರು. ಆದರೆ, ಕೊರೊನಾ ಮುಗಿದ ನಂತರ ವ್ಯಾಯಾಮದ ಅವಧಿ ಇನ್ನೂ ಕಡಿಮೆಯಾಗಿತ್ತು ಎನ್ನುವುದು ಅವರ ಮನೆಯ ಕೆಲಸ ಮಾಡುತ್ತಿದ್ದ ಮಹಿಳೆಯ ಮಾತು. ಸ್ಪಂದನಾ (Spandana Vijay Raghavendra) ಅವರ ದೊಡ್ಡಪ್ಪ ಬಿ.ಕೆ.ಹರಿಪ್ರಸಾದ್ (BK Hariprasad) ಅವರು ಕೂಡಾ ಪೋಸ್ಟ್ ಮಾರ್ಟಮ್ ರಿಪೋರ್ಟ್ (Autopsy report) ಬಂದ ಮೇಲೆ ಏನು ಬೇಕಾದರೂ ಸುದ್ದಿ ಮಾಡಿ. ಅದಕ್ಕೂ ಮೊದಲೇ ನಿಮಗೆ ಅನ್ನಿಸಿದ್ದನ್ನೆಲ್ಲ ಸುದ್ದಿ ಮಾಡಬೇಡಿ ಎಂದು ಮಾಧ್ಯಮಗಳಿಗೆ ಬುದ್ದಿ ಮಾತು ಹೇಳಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆ (jayadeva heart centere) ಡಾ.ಮಂಜುನಾಥ್ (Dr. Manjunath) ಅವರೂ ಕೂಡಾ ಉತ್ತರ ಕೊಟ್ಟಿರುವುದು ಸ್ಪಂದನಾ (Spandana) ಅವರ ಬಗ್ಗೆ ಅಲ್ಲ. ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹೃದ್ರೋಗ, ಹೃದಯಾಘಾತದ ಸಮಸ್ಯೆ ಮೊದಲಿಗಿಂತ ಶೇ.22ರಷ್ಟು ಹೆಚ್ಚಾಗಿದೆ. ಅತಿಯಾದ ವ್ಯಾಯಾಮವೂ ಅಪಾಯಕರ ಎಂದಷ್ಟೇ ಹೇಳಿರುವುದು. ಸ್ಪಂದನಾ ಅವರ ಕುರಿತಾಗಿ ಅಲ್ಲ.
ಇನ್ನು ಸ್ಪಂದನಾ (Spandana) ಅವರ ಗೆಳತಿ ನೇತ್ರಾ ಅವರ ಪ್ರಕಾರ ಕಾಲೇಜು ದಿನಗಳಿಂದಲೂ ಆಕೆ ವಿಪರೀತ ದಪ್ಪ ಇರಲಿಲ್ಲ. ತೂಕ ಕಡಿಮೆ ಮಾಡಿಕೊಂಡರೆ ತೊಂದರೆ ಆಗುತ್ತೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಹಠಾತ್ ಸಾವಿಗೆ ಅದು ಕಾರಣ ಅಲ್ಲ. ಆ ಬಗ್ಗೆ ಇರುವ ಗಾಸಿಪ್ಗಳೆಲ್ಲ ನಾನ್-ಸೆನ್ಸ್.
(Spandana) ಕುಟುಂಬಕ್ಕೆ ಅಪ್ತರಾಗಿದ್ದ, ರೇಖಾ ರಾಣಿ ಅವರ ಅವರ ಪ್ರಕಾರ ಸ್ಪಂದನಾ ಅಚ್ಚುಕಟ್ಟಾಗಿ ಊಟ ಮಾಡ್ತಿದ್ದಳು, ದೇಹ ದಂಡಿಸೋದು ಮಾಡುತ್ತಿರಲಿಲ್ಲ, ಆರೋಗ್ಯದ ಕಡೆಗೆ ತುಂಬ ಗಮನ ಕೊಡುತ್ತಿದ್ದಳು. ಸ್ಪಂದನಾ (Spandana) ತುಂಬ ಬುದ್ಧಿವಂತೆ. ಕುಟುಂಬವನ್ನು ನೋಯಿಸಬಾರದು, ಕುಟುಂಬವನ್ನು ನೋಯಿಸಿ ಸಣ್ಣಗಾಗಿ ಮಾಡೋದು ಏನಿದೆ ಎನ್ನೋದು ಅವಳಿಗೆ ಗೊತ್ತಿತ್ತು. ಏನೇ ಆಗಲಿ ತನ್ನ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳಬಾರದು ಅಂತ ಸ್ಪಂದನಾಗೆ ಗೊತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಸ್ಪಂದನಾಗೆ ಕುಟುಂಬದ ಜೊತೆ ಚೆನ್ನಾಗಿ ಬದಕುಬೇಕು ಎನ್ನೋದಿತ್ತು ಎಂದು ರೇಖಾ ರಾಣಿ ಹೇಳಿದ್ದಾರೆ.
ಇಂದು ರಾತ್ರಿ ಮೃತದೇಹವನ್ನು ಬೆಂಗಳೂರಿಗೆ ತರಲಾಗುತ್ತಿದ್ದು, ನಾಳೆ ಅಂತ್ಯಕ್ರಿಯೆ ನೆರವೇರಲಿದೆ.



