ನಾನ್ ಬರೋವರ್ಗೆ ಮಾತ್ರ ಬೇರೆಯವರ ಹವಾ.. ನಾನ್ ಬಂದ್ಮೇಲೆ ನಂದೇ ಹವಾ ಅನ್ನೋ ಡೈಲಾಗ್ʻನಿಂದ ಯಶ್ ಅವರನ್ನು ಟ್ರೆಂಡ್ ಮಾಡಿದ್ದವರು ಸಂತೋಷ್ ಆನಂದರಾಮ್. ರಾಮಾಚಾರಿ ಸಿನಿಮಾದ ಅದೆಷ್ಟೋ ಡೈಲಾಗ್ ಇವತ್ತಿಗೂ ಕಿಕ್ ಕೊಡ್ತವೆ. ನಿರ್ದೇಶಕ ಸಂತೋಷ್ ಆನಂದರಾಮ್ ಫೇಮಸ್ ಆಗಿರೋದು ತಮ್ಮ ಸಿನಿಮಾ ಹಿಟ್ ಆದ ಕಾರಣಕ್ಕಷ್ಟೇ ಅಲ್ಲ, ಅಭಿಮಾನಿಗಳಿಗೆ ಥ್ರಿಲ್ ಕೊಡೋ ಡೈಲಾಗ್ಸ್ ಕೊಟ್ಟಿದ್ಧಾರೆ.
ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳಲ್ಲಂತೂ ಡೈಲಾಗ್ ಸುರಿಮಳೆಯಾಗಿದ್ದವು. ಅಭಿಮಾನಿಗಳಿಗೆ ಒಂದಕ್ಕಿಂತ ಒಂದು ಥ್ರಿಲ್ ಕೊಟ್ಟಿದ್ದವು.
ಯುವರತ್ನ ಸಿನಿಮಾದ ರೌಡಿಗಳು ಓಂ ನೋಡಿದ್ಯಾ ಅನ್ನೋ ಡೈಲಾಗಿಗೆ ನಾವೇ ಪ್ರೊಡ್ಯೂಸ್ ಮಾಡಿದ್ದು ಅನ್ನೋ ಡೈಲಾಗೇ ಇರಲಿ..
ರಾಜಕುಮಾರ ಸಿನಿಮಾದ
ಕಾಂಟ್ರವರ್ಸಿ ಇಲ್ಲದೇ ಇರೋವ್ನು ನೀನೊಬ್ನೇ ಅಂದ್ಕೊಂಡಿದ್ರೆ ನೀನೂ ತಪ್ ಮಾಡಿಬಿಟ್ಯಾ..
ಅನ್ನೋ ಡೈಲಾಗ್‌ನಲ್ಲಿ..
ನಂಗೆ.. ನಮ್ ಅಣ್ಣಂಗೆ ವಯಸ್ಸೇ ಆಗಲ್ಲ..
ಚಿಕ್ ವಯಸ್ಸಲ್ಲೇ ನ್ಯಾಷನಲ್ ಅವಾರ್ಡ್ ತಗೊಂಡೋನು.. ನಿಂಗೆ ಹೇಳ್ಕೊಡ್ಬೇಕಾ.. ಹೀಗೆ ಡೈಲಾಗುಗಳ ಮೇಲೆ ಡೈಲಾಗ್ ಇಟ್ಟಿದ್ದ ಸಂತೋಷ್ ಆನಂದರಾಮ್, ಈಗ ಯುವದಲ್ಲೂ ಡೈಲಾಗ್ ಸುರಿಮಳೆ ಸುರಿಸಿದ್ಧಾರೆ.
ಗೊತ್ತಿಲ್ಲದೆ ಒಳಗೆ ಬರೋಕೆ ನನ್ನನ್ನೇನು ಅಭಿಮನ್ಯ ಅಂದ್ಕೊಂಡ್ಯಾ.. ಬಭ್ರುವಾಹನ.. (ಅರ್ಜುನ ಬಭ್ರುವಾಹನರ ಹಾಡಿನ ಯುದ್ಧ ನೆನಪಾಗಿಯೇ ಆಗುತ್ತದೆ)
ಕೆಲವರು ಕುಡಿದ ಮೇಲೆ ಗಂಡಸಾಗ್ತಾರೆ. ಇನ್ನು ಕೆಲವ್ರು ತಾನು ಗಂಡಸು ಅಂತಾ ತೋರಿಸ್ಕೊಳ್ಳೋಕೆ ಕುಡೀತಾರೆ.. ನಾನು ಆ 2 ಕ್ಯಾಟಗರಿಗೂ ಸೇರಿಲ್ಲ (ಕಾಂಟ್ರವರ್ಸಿ ಮಾಡ್ಕೊಂಡಿರುವ ನಟರೊಬ್ಬರ ಹೆಸರು ನೆನಪಾದರೆ..)
ಎದುರು ಹಾಕಿಕೊಳ್ಳೋಕೆ ನಾನ್ ರೆಡಿ. ಎದೆ ಕೊಡೋಕೆ ನೀನ್ ರೆಡಿನಾ? ನೀನು ಲೋಕಲ್.. ನಾನು ಪಕ್ಕಾ ಲೋಕಲ್ (ಅಪ್ಪು ಅವರ ನಾನು ಲೋಕಲ್ ಅನ್ನೋ ಅಪ್ಪು ಡೈಲಾಗ್ ನೆನಪಾಗುತ್ತೆ)
ಡಿಗ್ನಿಟಿ ಅನ್ನೋದು ನಾವು ಮಾಡೋ ಕೆಲಸದಲ್ಲಿ ಇರೋದಲ್ಲ ಹೇಗೆ ಬದುಕುತ್ತೇವೆ ಅನ್ನೋದ್ರ ಮೇಲೆ ಇರೋದು (ದೊಡ್ಮನೆಯವರ ನೆನಪಾಗುತ್ತದೆ)
ಬ್ರಾಂಡ್ ಇರೋದು ಚೇಂಜ್ ಮಾಡೋಕ್ಕೆ ಅಲ್ಲ.. ಮೇಂಟೈನ್ ಮಾಡೋಕೆ
ಬೇಕೆಂದಾಗ ಫ್ರೆಂಡ್ ಆಗೋಕ್ಕೆ ನಾನು ಫೇಸ್ ಬುಕ್‌ನಲ್ಲಿ ಸೀಗೋನಲ್ಲ.. ಫೇಸ್ ಟು ಫೇಸ್ ಸಿಗೋನು
ಅನ್ನೋ ಡೈಲಾಗ್ ಟ್ರೆಂಡ್ ಆಗುತ್ತಿವೆ. ಕಂಪ್ಲೀಟ್ ಸಿನಿಮಾದಲ್ಲಿ ಇಂತಹ ಇನ್ನೂ ಹಲವು ಡೈಲಾಗ್ʻಗಳಿವೆ. ಸಂತೋಷ್ ಆನಂದರಾಮ್ ಮತ್ತೊಮ್ಮೆ ಪಂಚ್ ಕೊಟ್ಟಿದ್ದಾರೆ. ಯುವ, ಸಪ್ತಮಿ ಗೌಡ ಹೀರೋ ಹೀರೋಯಿನ್ ಆಗಿರುವ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ ಕೂಡಾ ಪ್ರಮುಖ ಪಾತ್ರದಲ್ಲಿದ್ಧಾರೆ. ಹೊಂಬಾಳೆ ಫಿಲಮ್ಸ್ʻನವರು ಮತ್ತೊಮ್ಮೆ ಗೆಲುವಿನ ನಗು ಬೀರಿದ್ದಾರೆ.
ಇಂತಹ ಇನ್ನೂ ಹತ್ತು ಹಲವಾರು ಡೈಲಾಗ್ಸ್ ಚಿತ್ರದಲ್ಲಿವೆ. ಅಭಿಮಾನಿಗಳಂತೂ ಬಿಡಿ.. ಕಾಲರ್ ಎತ್ತಿಕೊಂಡು ಓಡಾಡ್ರೋ.. ಎಂದು ಡೈಲಾಗ್ ಹೊಡೀತಿದ್ಧಾರೆ. ಈಗಿನ ಟ್ರೆಂಡ್ ನೋಡಿದರೆ.. ಯುವ, ಯುವ ರಾಜಕುಮಾರ್ʻಗೆ ಪರ್ಫೆಕ್ಟ್ ಎಂಟ್ರಿ ಸಿನಿಮಾ ಎಂಬ ಫೀಲ್ ಕೊಡುತ್ತಿದೆ.



