ಯುವ. ಈ ವರ್ಷದ ಮೋಸ್ಟ್ ಸೆನ್ಸೇಷನಲ್ ಹೊಸ ಪರಿಚಯ. ಸಿನಿಮಾಗಳ ಬೆಳ್ಳಿ ಪರದೆಗೆ ಮೇಲೆ ಹೊಸಬರಾದರೂ.. ಅಭಿಮಾನಿಗಳಿಗೆ ಅಲ್ಲ. ಏಕೆಂದರೆ ಆತ ದೊಡ್ಮನೆಯ ಹುಡುಗ. ಈಗ ಅಣ್ಣನ ಸಿನಿಮಾಗೆ ತಂಗಿ ಪ್ರಮೋಷನ್ ಮಾಡುತ್ತಿದ್ದಾರೆ. ಅಣ್ಣ.. ಯುವ. ತಂಗಿ.. ವಂದಿತಾ. ಪುನೀತ್ ರಾಜಕುಮಾರ್ ಮಗಳು.
ಯುವ. ಈ ವರ್ಷದಲ್ಲಿಯೇ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ದೊಡ್ಮನೆಯ ಯುವ ನಟಿಸಿರುವ ಮೊದಲ ಸಿನಿಮಾ. ಇದೀಗ ಯುವ ಸಿನಿಮಾದ ೩ನೇ ಹಾಡು ರಿಲೀಸ್ ಆಗಿದೆ.
ಬೇಕು ನಿನ್ನ ಅಪ್ಪುಗೆ..
ಒಂದೇ ಒಂದು ಅಪ್ಪುಗೆ..
ಅಪ್ಪ ನನ್ನ ಪಾಲಿಗೆ..
ಎಂಬ ಹಾಡನ್ನು ರಿಲೀಸ್ ಮಾಡಿರುವುದು ಪುನೀತ್ ರಾಜಕುಮಾರ್ ಅವರ ಮಗಳು ವಂದಿತಾ. ಇದು ಅಪ್ಪುಗೆ ಮೇಲೆಯೇ ಚಿತ್ರಿಸಲಾಗಿರುವ ವಿಶೇಷ ಹಾಡು. ಆದರೆ.. ಅಪ್ಪುಗೆಯನ್ನಷ್ಟೇ ಅಲ್ಲ, ಕೇಳಿದವರು ಅಪ್ಪು ಅವರನ್ನೂ ನೆನಪಿಸಿಕೊಳ್ತಾರೆ.
ಯುವ ಸಿನಿಮಾದ ಬಹುಮುಖ್ಯ ಘಟ್ಟದಲ್ಲಿ ಹಾಡು ಇರಲಿದೆ. ಈ ಹಾಡನ್ನು ಬಿಡುಗಡೆ ಮಾಡಿದ ವಂದಿತಾಗೆ ಚಿತ್ರತಂಡದಿಂದ ಅಪ್ಪು ಫೋಟೋ ಉಡುಗೊರೆಯಾಗಿ ನೀಡಲಾಯಿತು. ಅಪ್ಪನ ಫೋಟೋ ನೋಡಿ ವಂದಿತಾ ಭಾವುಕರಾದರು.
ಈ ಹಾಡು ಕೇಳಿದವರಿ ಹಾಗೂ ಲಿರಿಕಲ್ ವಿಡಿಯೋ ನೋಡಿದವರಿಗೆ ಪದೇ ಪದೇ ಅಪ್ಪು ನೆನಪಾಗುತ್ತಾರೆ. ಅದು ಸಂತೋಷ್ ಆನಂದರಾಮ್ ಶಕ್ತಿಯೂ ಹೌದು. ಈ ಹಿಂದೆ ಮಿಸ್ಟರ್ & ಮಿಸಸ್ ರಾಮಾಚಾರಿ ಮಾಡಿದಾಗ.. ಚಿತ್ರದುದ್ದಕ್ಕೂ ವಿಷ್ಣುವರ್ಧನ್ ನೆನಪಾಗುತ್ತಿದ್ದರು. ರಾಜಕುಮಾರ ಮಾಡಿದಾಗಲೂ ಅಷ್ಟೆ.. ಅಣ್ಣಾವ್ರು ಕಣ್ಣ ಮುಂದೆ ನಿಂತೇ ಇರುವಂತೆ ಕಥೆ ಹೇಳಿದ್ದರು. ಆದರೆ.. ಯುವ ಚಿತ್ರದಲ್ಲಿ ಅಪ್ಪು ಇದ್ದಾರಾ..
ನೋ.. ಹಾಗೇನಿಲ್ಲ. ರಾಮಾಚಾರಿಯಲ್ಲಿ ವಿಷ್ಣುವರ್ಧನ್ ಅವರನ್ನು ರೆಫರೆನ್ಸ್ ಇಟ್ಟುಕೊಂಡೇ ಸಿನಿಮಾ ಮಾಡಿದ್ದೆವು. ಆದರೆ, ರಾಜಕುಮಾರದಲ್ಲಿ ರಾಜಕುಮಾರ ಹೆಸರು ಬಿಟ್ಟರೆ, ಎಲ್ಲಿಯೂ ಅಣ್ಣಾವ್ರನ್ನು ತೋರಿಸೋದಿಲ್ಲ. ಯುವದಲ್ಲಿಯೂ ಅಷ್ಟೆ..ಪ್ರೇಕ್ಷಕರು ಹುಡುಕುತ್ತಾರೆ ಎನ್ನುವುದು ಗೊತ್ತಿದೆ. ಆದರೆ, ಅಪ್ಪು ಸರ್ ಶೇಡ್ಸ್ ಈ ಚಿತ್ರದಲ್ಲಿ ಇಲ್ಲ ಎಂದಿದ್ದಾರೆ ಸಂತೋಷ್ ಆನಂದರಾಮ್.
ಅಂದಹಾಗೆ ಹಾಡಿನ ಸಾಹಿತ್ಯ ಇದು..
ಕೈ ಹಿಡಿದು ನಡೆಸೋ ಬೆನ್ನ್ ತಟ್ಟಿ ಬೆಳೆಸೋ
ನಮಗಾಗಿ ಶ್ರಮಿಸೋ ಆ ದುಡಿಮೆ ಜೀವನ
ಹೆಸರೊಂದಿಗೆ ಇರುವ ಬಾಳಿಗೊಂದರ್ಥ ಕೊಡುವ
ನೋವಿನಲೂ ನಗುವ
ಆ ತಂದೆ ಪಯಣ ಬೇಕು ನಿನ್ನ ಅಪ್ಪುಗೆ
ಒಂದೇ ಒಂದು ಅಪ್ಪುಗೆ
ಅಪ್ಪ ನನ್ನ ಪಾಲಿಗೆ
ಸರಿ ತಪ್ಪು ತಿಳಿಸೋ ಸಂಸ್ಕಾರ ಕಲಿಸೋ ಸಂಸಾರ
ಉಳಿಸೋ ದಿನಚರಿಯೇ ಜೀವನ ನೆನೆದಾಗ ಸಿಗುವ
ತಡವಾಗಿ ಬರುವ ನೆರಳಾಗಿ ತನು-ಮನವ ಅರ್ಪಿಸುವ
ಆ ಪಯಣ ಬೇಕು ನಿನ್ನ ಅಪ್ಪುಗೆ
ಒಂದೇ ಒಂದು ಅಪ್ಪುಗೆ
ಅಪ್ಪ ನನ್ನ ಪಾಲಿಗೆ
ಕೈ ಹಿಡಿದು ನಡೆಸೋ ಬೆನ್ನ್ ತಟ್ಟಿ ಬೆಳೆಸೋ
ನಮಗಾಗಿ ಶ್ರಮಿಸೋ ಆ ದುಡಿಮೆ ಜೀವನ
ಹೆಸರೊಂದಿಗೆ ಇರುವ ಬಾಳಿಗರ್ಥ ಕೊಡುವ
ನೋವಿನಲೂ ನಗುವ ಆ ತಂದೆ ಪಯಣ
ಬೇಕು ನಿನ್ನ ಅಪ್ಪುಗೆ
ಒಂದೇ ಒಂದು ಅಪ್ಪುಗೆ
ಅಪ್ಪ ನನ್ನ ಪಾಲಿಗೆ



