ರಕ್ಷಿತ್ ಶೆಟ್ಟಿ ಹಾಗೆಯೇ ಸೈಲೆಂಟ್ ಆಗಿದ್ದುಕೊಂಡು ಏನೇನೋ ಮಾಡ್ತಿರ್ತಾರೆ. ಕಿರಿಕ್ ಪಾರ್ಟಿ, ಪರಂವಾ ಸ್ಟುಡಿಯೋ, 777 ಚಾರ್ಲಿ.. ಚಿತ್ರಗಳೂ ಹೀಗೆಯೇ.. ಸೈಲೆಂಟ್ ಆಗಿ ಬಂದು ಸಖತ್ ಸದ್ದು ಮಾಡಿದ್ದವು. ಆದರೆ ಈ ಬಾರಿ ಹಾಗಲ್ಲ. ಏಕೆಂದರೆ ಚಿತ್ರದಲ್ಲಿರೋ ಸ್ಟಾರ್ಸ್ ಅಂತಹವರು.

ಭಾರತ ಚಿತ್ರರಂಗ ಕಂಡ ಅದ್ಭುತ ಕಲಾವಿದ ಕಮಲ್ ಹಾಸನ್. ತಮಿಳಿನ ಇನ್ನೊಬ್ಬ ಸ್ಟಾರ್ ನಟ ಇಳೆಯ ದಳಪತಿ ವಿಜಯ್, ಮತ್ತೊಬ್ಬ ಸ್ಟಾರ್ ಹೀರೋ ಕಾರ್ತಿ, ಅಧೀರ ಸಂಜಯ್ ದತ್, ಬ್ಯೂಟಿ ಕ್ವೀನ್ ತ್ರಿಶಾ ನಟಿಸುತ್ತಿರುವ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಪ್ರಮುಖ ಪಾತ್ರವಿದೆಯಂತೆ. ಇವರನ್ನೆಲ್ಲ ಒಟ್ಟುಗೂಡಿಸಿರುವುದು


ಕಾರ್ತಿಗೆ ಖೈತಿ, ಕಮಲ್ ಹಾಸನ್`ಗೆ ವಿಕ್ರಂ ಚಿತ್ರಗಳನ್ನು ಸಿದ್ಧ ಮಾಡಿ ಸೆನ್ಸೇಷನ್ ಸೃಷ್ಟಿಸಿದ ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರದಲ್ಲಿಯೇ ಕಮಲ್, ವಿಜಯ್, ಕಾರ್ತಿ, ಸಂಜಯ್ ದತ್, ತ್ರಿಶಾ ಮತ್ತು ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಯಾಗುತ್ತಿದ್ದಾರೆ. ಲೋಕೇಶ್ ದೊಡ್ಡ ದೊಡ್ಡ ಸ್ಟಾರ್ಸ್ ಹಾಕಿಕೊಂಡ ಮಾತ್ರಕ್ಕೆ ತೆರೆಯ ಮೇಲೆ ಸುಮ್ಮನೆ ತೋರಿಸಲ್ಲ.





