ಪ್ರಿಯಾ ಆನಂದ್. ಕನ್ನಡಕ್ಕೆ ಹೊಸಬರೇನಲ್ಲ. ಈ ಮಲಯಾಳಿ ಬೆಡಗಿ ಕನ್ನಡದವರಿಗೆ ರಾಜಕುಮಾರಿ ಎಂದೇ ಪರಿಚಿತ. ರಾಜಕುಮಾರ ಚಿತ್ರದ ರಾಜಕುಮಾರಿಯೇ ಈ ಪ್ರಿಯಾ ಅನಂದ್. ಅದಾದ ಮೇಲೆ ಗಣೇಶ್ ಜೊತೆ ಒಂದ್ಸಲ ನಟಿಸಿದ್ದ ಪ್ರಿಯಾ ಆನಂದ್, ಪುನೀತ್ ಅವರ ಕಟ್ಟಕಡೆಯ ಸಿನಿಮಾ ಜೇಮ್ಸ್ ಚಿತ್ರದ ನಾಯಕಿಯೂ ಹೌದು. ಅವರೀಗ ಮತ್ತೆ ಬಂದಿದ್ದಾರೆ. ಸಿಂಡ್ರೆಲಾ ಅವತಾರ ಎತ್ತಿದ್ದಾರೆ. ಶಿವಣ್ಣನ ಹೃದಯ ಮೀಟುವುದಕ್ಕೆ.
ಮೀಟದೇನೇ ವೀಣೆಯೊಂದು ಟೊಯ್ಯ್ ಅನಬಹುದೇ..
ಇದು ಎಂಥ ಹಂಬಲ.. ಪದವೊಂದ ಪುಂಗಲ..
ಸುಮ್ಮನಿರದೆ ಕುನ್ನಿ ಹೃದಯ ಕುಂಯ್ʻಗುಡಬಹುದೇ..
ಇವಳ್ಯಾವ ಸಿಂಡ್ರೆಲಾ.. ಇವಳನ್ನ ನಂಬಲಾ..
ಯೋಗರಾಜ್ ಭಟ್ಟರಷ್ಟೇ ಪ್ರೀತಿಸುವ ಹೃದಯವನ್ನೂ ಕುನ್ನಿಗೆ ಹೋಲಿಸಿ ಬರೆಯಬಲ್ಲರು. ಟೊಯ್ಯ್ ಅಂದೂ ಕೂಡಾ ಪ್ರೀತಿಯನ್ನ ಚೆಲ್ಲಬಲ್ಲರು. ಇದು ಕರಟಕ ದಮನಕದ ಪ್ರೇಮಗೀತೆ. ಕುನ್ನಿ ಹೃದಯದ ಹೀರೋ ಆಗಿರುವುದು ಶಿವಣ್ಣ. ಆ ಹೃದಯದಲ್ಲಿ ವೀಣೆಯನ್ನು ಮೀಟಿದ ನಾಯಕಿ ಸಿಂಡ್ರೆಲಾರಂತೆ ಹೊಳೆಯುತ್ತಿರುವದು ಪ್ರಿಯಾ ಆನಂದ್.
ಒಂದೊಂದಾಗಿ ಆಚೆ ಬಂದ್ವು ಆಸೆ
ಒಸಿ ಸೊಂಟ ಗಿಲ್ಲಲಾ..? ಖುಷಿ ಹಂಚಿಕೊಳ್ಳಲಾ..?
ಶೇವಿಂಗ್ ಮಾಡ್ಲೇಬಾರ್ದಾಗಿತ್ತು ಮೀಸೆ ಮುಖವೆಲ್ಲ ಕಿಲಕಿಲ
ಮೈಯೆಲ್ಲ ಮುಲ ಮುಲ ಹೇಳಂಗಿಲ್ಲ ಬಿಡಂಗಿಲ್ಲ
ಮೀಟದೇನೆ ವೀಣೆಯೊಂದು ಟೊಯ್ಯ್ ಅನಬಹುದೆ
ಸಂಗೀತ ಕಲಿಯುವ ಬಯಕೆ
ಬಟ್ ಯಾಕೋ ಏನೋ ಸ್ವಲ್ಪ ಸಂಕೋಚ
ನಂಗಂತೂ ತಿಳಿದಿರಲಿಲ್ಲ
ಸುಟ್‌ಕೊಳ್ಳೋದ್ರಲ್ಲೂ ಇದೆ ಸಂತೋಷ
ನನ್ನ ಕಥೆ ಹೇಳಲೇ ಮಡಿಲಲಿ
ಮಲಗಿ ಕಣ್ಣು ಮುಚ್ಚಿ ಹೋಗೇಬಿಡಲೆ ಸೆರಗಲಿ
ಕರಗಿ ಬಂದಿರ್ಬೊದು ನಂಗೂ ಚೈತ್ರ ಕಾಲ
ನಾ ಚಿಗುರು ಒಡೆಯಲ..? ಬರಿ ಉಗುರು ಕಡಿಯಲ..?
ನಾನೇ ಒಂದು ದೊಡ್ಡ ದಾಸವಾಳ
ನನ್ನನ್ನು ಮುಡಿವಳ..? ಸೈಡಲ್ಲಿ ಇಡುವಳ..?
ಹೇಳಂಗಿಲ್ಲ ಬಿಡಂಗಿಲ್ಲ ಹೇಳಂಗಿಲ್ಲ ಬಿಡಂಗಿಲ್ಲ
ಮೀಟದೇನೆ ವೀಣೆಯೊಂದು ಟೊಂಯ್ಯ್ ಅನಬಹುದೆ
ಇದು ಎಂಥ ಹಂಬಲ..ಪದವೊಂದ ಪುಂಗಲ..
ಸುಮ್ಮನಿರದೆ ಕುನ್ನಿ ಹೃದಯ ಕುಂಯ್‌ಗುಡಬಹುದೆ
ಇವಳ್ಯಾವ ಸಿಂಡ್ರೆಲಾ..? ಇವಳನ್ನು ನಂಬಲಾ..?
ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡಿಗೆ ಧ್ವನಿ ನೀಡಿರುವುದು ರಾಜೇಶ್ ಕೃಷ್ಣ. ಸಾಹಿತ್ಯ.. ಅನುಮಾನವೇ ಇಲ್ಲ, ಯೋಗರಾಜ್ ಭಟ್ಟರು. ಶಿವಣ್ಣ ಮತ್ತು ಪ್ರಭುದೇವ ಒಂದಾಗಿರುವ ಈ ಚಿತ್ರದಲ್ಲಿರೋದು ವಿಶೇಷ ಕಥೆ. ರಾಕ್ʻಲೈನ್ ವೆಂಕಟೇಶ್ ನಿರ್ಮಾಣದ ಕರಟಕ ದಮನಕ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ಧಾರೆ.



