ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ ಅವರದ್ದು ಹಿಟ್ & ಫ್ಲಾಪ್ ಜೋಡಿ. ಶಿವಣ್ಣ ಹೀರೋ ಆಗಿದ್ದ ಟಗರು ಚಿತ್ರದ ವಿಲನ್ ಪಾತ್ರದಿಂದಲೇ ಸ್ಟಾರ್ ಆದವರು ಡಾಲಿ ಧನಂಜಯ. ಆದರೆ, ಟಗರುನಲ್ಲಿ ಸಿಕ್ಕ ಸಕ್ಸಸ್, ಭೈರಾಗಿಯಲ್ಲಿ ಸಿಕ್ಕಲಿಲ್ಲ. ಭೈರಾಗಿ ಅಟ್ಟರ್ ಫ್ಲಾಪ್ ಸಿನಿಮಾ. ಉತ್ತರಕಾಂಡ, ಸೆಟ್ಟೇರಿ ಸುಸ್ತಾಗಿ ಮಲಗಿದೆ.
ಇನ್ನು ಹೇಮಂತ್ ಕುಮಾರ್, ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ. ಅದರಲ್ಲಿ ಅನುಮಾನ ಇಲ್ಲ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ’ ರೀತಿಯ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಹೇಮಂತ್ ಎಂ ರಾವ್, ಅಜ್ಞಾತವಾಸ ಚಿತ್ರದಲ್ಲಿ (ನಿರ್ಮಾಪಕ ಮಾತ್ರ. ನಿರ್ದೇಶಕ ಅಲ್ಲ) ಸೋತಿದ್ದಾರೆ. ಹಾಗೆ ನೋಡಿದರೆ ಸಪ್ತ ಸಾಗರದಾಚೆ ಎಲ್ಲೋ ಒಂದು ವರ್ಗಕ್ಕೆ ಮಾತ್ರವೇ ಇಷ್ಟವಾದ ಸಿನಿಮಾ.
ಅತ್ತ ಡಾಲಿ ಧನಂಜಯ ಅವರಿಗೂ ಕೂಡಾ ಬಡವ ರಾಸ್ಕಲ್ ನಂತರ ದೊಡ್ಡ ಗೆಲುವು ಸಿಕ್ಕಿಲ್ಲ. ಎಲ್ಲರೂ ಜೊತೆಯಾಗಿದ್ದಾರೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಅನ್ನೋ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮತ್ತು ‘ಡಾಲಿ’ ಧನಂಜಯ ನಟಿಸಲಿದ್ದು, ಹೇಮಂತ್ ರಾವ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಘೋಷಿಸಿದ್ದ ಹೇಮಂತ್ ರಾವ್ – ಶಿವಣ್ಣ ಜೋಡಿಯ ಭೈರವನ ಕೊನೆಯ ಪಾಠ ಸದ್ಯಕ್ಕೆ ಮುಂದಕ್ಕೆ ಹೋದಂತಿದೆ.
ತೆಲುಗು ಭಾಷೆಯಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ ಅವರಿಗೆ ಜನಪ್ರಿಯತೆ ಇದೆ. ಹಾಗಾಗಿ, ಈ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಡಾ. ವೈಶಾಕ್ ಜೆ ಗೌಡ ಅವರು ಹಣ ಹಾಕುತ್ತಿದ್ದು, ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಇರಲಿದೆ.
ಸಿನಿಮಾ ಟೈಟಲ್ ಅನೌನ್ಸ್ ಆಗಿದೆ.ಟೈಟಲ್ ಆನಿಮೇಷನ್ ಮೋಷನ್ ಟೀಸರ್ ಸಮೇತ ಸಿನಿಮಾ ಘೋಷಣೆ ಆಗಿದೆ. ಇದೇ ತಿಂಗಳು ಜೂನ್-20 ರಂದು ನಮ್ಮ ಚಿತ್ರದ ಮುಹೂರ್ತ ಇದೆ.
ಶಿವ ರಾಜ್ ಕುಮಾರ್ ಅವರಾಗಲೀ, ಡಾಲಿ ಧನಂಜಯ ಅವರಾಗಲೀ.. ಒಂದೇ ರೀತಿಯ ಪಾತ್ರ, ಕಥೆಗಳಿಗೆ ಅಂಟಿಕೊಂಡವರಲ್ಲ. ಇನ್ನು ಹೇಮಂತ್ ರಾವ್ ಕ್ಲಾಸ್ ಶೈಲಿಯ ಕ್ಲಾಸಿಕ್ ಚಿತ್ರಗಳನ್ನೇ ಕೊಟ್ಟಿರುವ ನಿರ್ದೇಶಕ. ಹೀಗಾಗಿ ವರ್ಸಟೈಲ್ ಕೆಟಗರಿಯ ತಾರೆಗಳ ಸಂಗಮ ಕುತೂಹಲ ಮೂಡಿಸಿರುವುದಂತೂ ನಿಜ. 666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್ ಹಾಕಲಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಡಾಲಿ ಅವರ ಉತ್ತರಕಾಂಡ, ಅಣ್ಣಾ ಫ್ರಂ ಮೆಕ್ಸಿಕೋ, ಜಂಗಲ್, ನಾಡಪ್ರಭು ಕೆಂಪೇಗೌಡ, ಜೆಸ್ಸಿ ದಿ ಯುನಿವರ್ಸಿಟಿ, ಅನಕೊಂಡ, ಜಿಂಗೋ.. ಮೊದಲಾದ ಚಿತ್ರಗಳು ಸುದ್ದಿಯಲ್ಲೇನೋ ಇವೆ. ಅಪ್ ಡೇಟ್ ಇಲ್ಲ. ಇದರ ನಡುವೆಯೇ ಹೊಸ ಸಿನಿಮಾ ಘೋಷಣೆ ಆಗಿದೆ.



