ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮನೆ ಮತ್ತು ತೋಟದ ಮನೆಗಳು, ಹಾಸನ ನಗರದ ಸಂಸದರ ಅತಿಥಿ ಗೃಹ ಹಾಗೂ ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದ ಇಬ್ಬರು ಮನೆಗೆಲಸದವರ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಪ್ರಜ್ವಲ್ ವಿರುದ್ಧ ಆರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ.
ಚಾರ್ಜ್‌ಶೀಟ್ ಪ್ರಕಾರ ಕೆಲಸದಲ್ಲಿದ್ದ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಹಿಳೆ ಮೇಲೆ ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಬೇಡಣ್ಣ ಬಿಟ್ಬಿಡಿ ಎಂದು ಹಿರಿಯ ವಯಸ್ಸಿನ ಮಹಿಳೆ ಹೇಳಿದರೂ ಬಿಡದೆ ಪ್ರಜ್ವಲ್ ಅತ್ಯಾಚಾರ ಎಸಗಿ, ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದೆ. ಈ ಸಂತ್ರಸ್ತೆಯನ್ನೇ ಮ್ಮ ಸಹಚರರ ಮೂಲಕ ಮಾಜಿ ಸಂಸದರ ತಂದೆ ಮಾಜಿ ರೇವಣ್ಣ ತಾಯಿ ಭವಾನಿ ರೇವಣ್ಣ ಅಪಹರಿಸಿದರು ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ರೇವಣ್ಣ ತಂಡ ಬಂಧಿತರಾಗಿ ಜೈಲು ಸೇರಿದರೆ, ಜಾಮೀನು ಪಡೆದು ಬಂಧನದಿಂದ ಭವಾನಿ ಪಾರಾಗಿದ್ದರು.
ದಮ್ಮಯ್ಯ ಕಣಣ್ಣ.. ಬಿಟ್ಬಿಡು ಎಂದರೂ ಬಿಡಲಿಲ್ಲ :
ಹೊಳೆನರಸೀಪುರದ ಮನೆ ಹಾಗೂ ತೋಟದ ಮನೆಯಲ್ಲಿ ಸಂತ್ರಸ್ತ ಮಹಿಳೆ ಕೆಲಸದಲ್ಲಿದ್ದರು. 2021ರ ಕೋವಿಡ್ ಲಾಕ್‌ಡೌನ್ ಪೂರ್ವ ಒಮ್ಮೆ ತೋಟದ ಮನೆಗೆ ಮಧ್ಯಾಹ್ನದ ಸಮಯದಲ್ಲಿ ಪ್ರಜ್ವಲ್ ಹೋಗಿದ್ದರು. ಆ ವೇಳೆ ತೋಟದ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ ಸಂತ್ರಸ್ತೆ ಬಳಿ ಹೋಗಿ ‘ಏನ್ ಕ್ಲೀನ್ ಆಯ್ತಾ ಅಂತಾ ಕೇಳಿ, ನಂಗೆ ಕುಡಿಯೋದಕ್ಕೆ ಒಂದು ಹೇಳಿದರು. ಅಂತೆಯೇ ನೀರು ತೆಗೆದುಕೊಂಡು ಪ್ರಜ್ವಲ್ ಇದ್ದ ರೂಮ್‌ನೊಳಗೆ ಸಂತ್ರಸ್ತ ಮಹಿಳೆ ತೆರಳಿದ್ದರು. ಆಗ ತಮ್ಮ ಮನೆಯಲ್ಲಿ ಕೋಣೆಗೆ ಕರೆದು, ಹೊರಗೆ ಹೋಗದಂತೆ ಪ್ರಜ್ವಲ್ ಬಾಗಿಲು ಹಾಕಿದ್ದರು. ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತ ‘ಬಟ್ಟೆ ತೆಗೆಯೇ.. ಏನೂ ಆಗಲ್ಲ ತೆಗೆಯೇ’ ಎಂದು ಹೇಳಿದ್ದರು. ‘ದಮ್ಮಯ್ಯ ಕಣಣ್ಣ ಬಾಗಿಲು ತೆಗೆದುಬಿಡು’ ಎಂದು ಗೋಳಾಡಿದರೂ ಬಿಡದೆ ಸಂತ್ರಸ್ತೆಯ ಬಟ್ಟೆಯನ್ನು ಪ್ರಜ್ವಲ್ ಬಿಚ್ಚಿಸಿದ್ದರು. ಆಗ ಬಾತ್ ರೂಂಗೆ ಹೋಗಬೇಕು ಅರ್ಜೆಂಟ್ ಎಂದರೂ ಬಿಡದೆ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು ಎಂದು ಉಲ್ಲೇಖವಾಗಿದೆ. ಅತ್ಯಾಚಾರ ಕೃತ್ಯವನ್ನು ಚಿತ್ರೀಕರಿಸಿಕೊಂಡು ಸಂತ್ರಸ್ತೆಗೆ ಪ್ರಜ್ವಲ್ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಆ ವಿಚಾರವನ್ನು ಯಾರಿಗಾದರೂ ಹೇಳಿದರೆ. ವಿಡಿಯೋವನ್ನು ನಿನ್ನ ಮಗನಿಗೆ ಕಳಿಸುತ್ತೇನೆ ಎಂದು ಬೆದರಿಸಿದ್ದರು.
ಸೀರೆಯೇ ಕಂಟಕವಾಗುತ್ತಾ..?
ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮನೆ ಮತ್ತು ತೋಟದ ಮನೆಗಳು, ಹಾಸನ ನಗರದ ಸಂಸದರ ಅತಿಥಿ ಗೃಹ ಹಾಗೂ ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಡಿಎನ್‌ಎ ವಿಶ್ಲೇಷಣೆಗೆ ಸಂತ್ರಸ್ತೆಯರು ಹಾಗೂ ಪ್ರಜ್ವಲ್ ಅವರಿಂದ ರಕ್ತ ಮಾದರಿ ಹಾಗೂ ಕೂದಲನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಎಸ್ಐಟಿ ಕಳುಹಿಸಿದ್ದು, ಶೀಘ್ರದಲ್ಲೇ ಅಂತಿಮ ವರದಿ ಬರಲಿದೆ. ಈ ವರದಿಯಲ್ಲಿ ಸಾಮ್ಯತೆ ಕಂಡು ಬಂದರೆ ಪ್ರಜ್ವಲ್‌ರವರಿಗೆ ಕಂಟಕವಾಗಲಿದೆ. ಹಾಸಿಗೆ, ದಿಂಬು, ಬಟ್ಟೆಗಳು, ಟವಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಲ್ಲದೆ, ಸಂತ್ರಸ್ತೆಯರಿಂದ ಸೀರೆಗಳನ್ನು ವಶಪಡಿಸಿಕೊಂಡಿತ್ತು.ಇನ್ನು ಪ್ರಜ್ವಲ್ ತೋಟದ ಮನೆಯಲ್ಲಿಯೂ ಸಂತ್ರಸ್ತೆಯರ ಸೀರೆಗಳು ಹಾಗೂ ಪೇಟಿಕೋಟ್‌ಗಳು ಪತ್ತೆಯಾಗಿವೆ. ತೋಟದ ಮನೆಯಲ್ಲಿ ಕೆಲಸಗಾರರು ಉಳಿದುಕೊಳ್ಳಲು ಪ್ರತ್ಯೇಕ ಕೋಣೆಯನ್ನು ಪ್ರಜ್ವಲ್ ರೇವಣ್ಣ ಕುಟುಂಬದವರು ನೀಡಿದ್ದರು. ಈ ಪ್ರಕರಣದ ತನಿಖೆ ವೇಳೆ ತೋಟದ ಮನೆ ಮೇಲೆ ಎಸ್‌ಐಟಿ ದಾಳಿ ನಡೆಸಿದಾಗ ಕೆಲಸಗಾರರ ಕೋಣೆಯಲ್ಲಿ ಸೀರೆಗಳು ಹಾಗೂ ಪೇಟಿಕೋಟ್‌ಗಳು ಸಿಕ್ಕಿವೆ. ಇವುಗಳನ್ನು ಡಿಎನ್‌ಎ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಈ ಪರೀಕ್ಷಾ ವರದಿ ನಿರೀಕ್ಷಣೆ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದರ ಎದೆಯಲ್ಲಿ ಡವಡವ ಶುರುವಾಗಿದೆ. ಅತ್ಯಾಚಾರ ಕೃತ್ಯ ಸಾಬೀತಿಗೆ ಎಸ್ಐಟಿಗೆ ಬಹುಮುಖ್ಯವಾದ ವೈಜ್ಞಾನಿಕ ಸಾಕ್ಷ್ಯ ಲಭಿಸಿದಂತಾಗುತ್ತದೆ.



