12 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ. ಭಾರತ-ಪಾಕ್ ಲವ್ ಸ್ಟೋರಿಯ ಹೀರೋ-ಹೀರೋಯಿನ್ಸ್ ಇಬ್ಬರೂ ಬೇರೆ ಬೇರೆಯಾಗುತ್ತಿದ್ದಾರೆ. ಇಬ್ಬರೂ ಬೇರೆ ಬೇರೆ ಮನೆಯಲ್ಲಿ ವಾಸವಿದ್ದಾರೆ. ಮಗುವಾದ ಮೇಲೆ ಸಾನಿಯಾ ಮಿರ್ಜಾಗೆ ಶೋಯೆಬ್ ಮಲಿಕ್ ಅವರ ಆಫೇರ್ ಗೊತ್ತಾಗಿದೆ. ಹೀಗಾಗಿ ಗಂಡನನ್ನು ಮನೆಯಿಂದ ಹೊರ ಹಾಕಿದ್ದಾರೆ. ಮಗುವಿನ ಜೊತೆ ಸಪರೇಟ್ ಆಗಿದ್ದಾರೆ ಎಂದೆಲ್ಲ ಸುದ್ದಿಗಳು ಕಾಡ್ಗಿಚ್ಚಿನಂತೆ ಹಬ್ಬಿದ್ದವು. ಸುದ್ದಿಗಳು ಹೊರಬಿದ್ದಿದ್ದು ಪಾಕಿಸ್ತಾನದ ಮೀಡಿಯಾಗಳ ಮೂಲಕವೇ. ಅದಕ್ಕೆ ತಕ್ಕಂತೆ ಸಾನಿಯಾ ಮಿರ್ಜಾ ಹಾಕಿದ್ದ ಎರಡು ಸೋಷಿಯಲ್ ಮೀಡಿಯಾ ಪೋಸ್ಟ್‍ಗಳೂ ಮ್ಯಾಚ್ ಆಗಿದ್ದವು.
ಈ ಡೈವೋರ್ಸ್ ಸುದ್ದಿಯ ಮಧ್ಯೆ ಪಾಕಿಸ್ತಾನದ ನಟಿ ಹಾಗೂ ಮಾಡೆಲ್ ಆಯೆಷಾ ಒಮರ್ ಹೆಸರೂ ಕೇಳಿ ಬಂದಿತ್ತು. ಶೋಯೆಬ್ ಮಲಿಕ್ ತನಗಿಂತ 1 ವರ್ಷ ದೊಡ್ಡವಳಾಗಿರುವ ಆಯೆಷಾ ಜೊತೆ ಅಫೇರ್ ಇಟ್ಟುಕೊಂಡಿದ್ದಾನೆ ಎಂಬ ಸುದ್ದಿ ಹರಿದಾಡಿತ್ತು. ಸಾನಿಯಾ ಮಿರ್ಜಾ ಅಭಿಮಾನಿಗಳು ಅಯ್ಯೋ ಪಾಪ ಸಾನಿಯಾ ಎಂದರು. ಆದರೆ ಈಗ ಬಂದಿರೋ ಸುದ್ದಿಯೇ ಬೇರೆ. ಅವರಿಬ್ಬರೂ ಡೈವೋರ್ಸ್ ಆಗಿಲ್ಲ. ನಡೆದಿದ್ದೆಲ್ಲ ನಾಟಕ ಎಂಬ ಸುದ್ದಿ ಹೊರಬೀಳುತ್ತಿದೆ.
ಪಾಕಿಸ್ತಾನದ ಉರ್ದುಫ್ಲಿಕ್ಸ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮಿನಲ್ಲಿ ಮಿರ್ಜಾ-ಮಲಿಕ್ ಶೋ ಹೆಸರಿನ ಟಾಕ್ ಶೋವೊಂದು ಪ್ರಸಾರವಾಗಲಿದೆ. ಈ ಶೋನಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಇಬ್ಬರೂ ಇರಲಿದ್ದಾರೆ. ಈ ಶೋ ಕಾರಣಕ್ಕಾಗಿಯೇ ಈ ಡೈವೋರ್ಸ್ ಗಾಳಿಸುದ್ದಿ ತೇಲಿಬಿಡಲಾಗಿದೆ. ಆ ಮೂಲಕ ಶೋಗೆ ಪಬ್ಲಿಸಿಟಿ ಪಡೆಯಲಾಗುತ್ತಿದೆ ಎನ್ನುವುದು ಒಂದು ವಾದ.

ಇಲ್ಲ..ಇಲ್ಲ.. ಈ ಶೋ ಕಾರಣಕ್ಕಾಗಿಯೇ ಸಾನಿಯಾ-ಶೋಯೆಬ್ ಇಬ್ಬರೂ ಡೈವೋರ್ಸ್ ಖಚಿತಪಡಿಸುತ್ತಿಲ್ಲ. ಶೋನ ಎಲ್ಲ ಎಪಿಸೋಡ್ ಶೂಟಿಂಗ್ ಮುಗಿದಿದೆ. ಶೂಟಿಂಗ್ ಯಾವುದೂ ಕೂಡಾ ಬ್ಯಾಲೆನ್ಸ್ ಇಲ್ಲ. ಶೋ ಶುರುವಾಗುವ ಹೊತ್ತಿಗೆ ಪ್ರಾಬ್ಲಂ ಆಗಲಿದೆ. ಹಾಗೂ ಲೀಗಲಿ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕಾಗಿಯೇ ಡೈವೋರ್ಸ್ ತೆಗೆದುಕೊಳ್ಳುತ್ತಿಲ್ಲ. ಶೋ ಮುಗಿದ ತಕ್ಷಣ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಇಬ್ಬರೂ ಬೇರೆ ಬೇರೆಯಾಗಲಿದ್ದಾರೆ ಎನ್ನುವುದು ಇನ್ನೊಂದು ವಾದ.
2010ರಲ್ಲಿ ಮದುವೆಯಾಗಿದ್ದ ಸಾನಿಯಾ-ಶೋಯೆಬ್ ಇಂಡೋ-ಪಾಕ್ ಲವ್ ಸ್ಟೋರಿಗೆ ಹೊಸ ಭಾಷ್ಯ ಬರೆದಿದ್ದರು. ದಂಪತಿಗೆ 2018ರಲ್ಲಿ ಮಗುವಾಗಿತ್ತು. ಈಗ ಡೈವೋರ್ಸ್ ಹಂತಕ್ಕೆ ಬಂದಿದೆ. ಆದರೆ.. ಡೈವೋರ್ಸ್ ಆಗುತ್ತಾ.. ಆಗಲ್ವಾ.. ಇದು ಬಹುಜನರ ಕುತೂಹಲ.



