

ಕೋಟಿ ಸಾರಿ ಕೊಲ್ಲೋ..ಮಾಯಾ ಪುಷ್ಪಶರವ.
ದಿನಾ ಬೆದರುತಾನಾ
ನಿಂಗೆ ದಿನಾ ಜೀವದಾನಾ..
ಇದರಲ್ಲಿ ಯಾವ ಸುಳ್ಳೂ ಇಲ್ಲ. ಏಕೆಂದರೆ ಇದು ವಿಜ್ಞಾನ.
ವಾತ್ಸಾಯನ ಸೂತ್ರ.. ಅಂಧರಿಗೆ ನೇತ್ರ..
ನಡೆಯೋಣವೇ ಪರಿಪಾಲಿಸಿ.. ನಮಗೊಪ್ಪುವಾ..ಪುಟ ಆರಿಸಿ.
ಸೃಷ್ಟಿಯ ಸುಂದರ ಸೂತ್ರಗಳೆಲ್ಲವೂ.. ನಿನ್ನದೇ..ಸುರಸುಂದರಿ
ಈ ಪುರುಷನೂ..ಬರಿ ಕಿಂದರಿ.
ಇಷ್ಟು ಅರ್ಥ ಮಾಡಿಕೊಂಡರೆ ತೂಕ ಇಳಿಸಿಕೊಳ್ಳೋಕೆ ಕಷ್ಟವೇ ಅಲ್ಲ. ಇತ್ತೀಚೆಗೆ ಕರಣ್ ಜೋಹರ್ ಶೋನಲ್ಲಿ ಅನಿಲ್ ಕಪೂರ್ ಹೇಳಿದ್ದು ಕೇಳಿರ್ತೀರಲ್ಲ. ಸೆಕ್ಸ್ ನನ್ನ ಯೌವ್ವನದ ಗುಟ್ಟು ಅನ್ನೋದನ್ನ. ಲೈಂಗಿಕ ಕ್ರಿಯೆ ಮೈಮನಸ್ಸುಗಳೆರಡನ್ನು ಸಕ್ರಿಯವಾಗಿಡುತ್ತೆ. ತೂಕ ಇಳಿಸಿಕೊಳ್ಳೋಕೆ ಅದಕ್ಕಿಂತ ದೊಡ್ಡ ರಾಮಬಾಣ ಇನ್ನೊಂದಿಲ್ಲ.
ಅಂಗಾ ಅಂಗಾ ಸೇರಿ ಅಂತರಂಗ..
ಸಂಗ ಸಂಗಾ ಸೇರಿ ಪ್ರಣಯ ಪ್ರಸಂಗ..
ಹಾಡ್ತ ಹಾಡ್ತ ರಾಗ..
ನೀಡ್ತಾ ನೀಡ್ತಾ ಯಾಗ..
ನೊಡ್ತಾ ನೊಡ್ತಾ ಮೋಹ
ಹೀರ್ತಾ ಹೀರ್ತಾ ದಾಹ..
ಸವತಿಯ ಶತ್ರು ಯಾರಿಲ್ಲ ಸ್ವಚಂದ ರಾಸ ಲೀಲೆಗೆ
ಡಾ.ಭಾರ್ಗವ ಪ್ರಕಾರ ಒಬ್ಬ ಪುರುಷ ಲೈಂಗಿಕ ಕ್ರಿಯೆಯಿಂದ ಒಂದು ನಿಮಿಷಕ್ಕೆ 4.25 ಕ್ಯಾಲೊರಿಗಳನ್ನು ಕಳೆದುಕೊಂಡರೆ ಹೆಣ್ಣು ಸೆಕ್ಸ್ ಸೆಷನ್ನಲ್ಲಿ ನಿಮಿಷಕ್ಕೆ ಸರಿಸುಮಾರು 3.1 ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಲೈಂಗಿಕ ಸಮಯದಲ್ಲಿ ನಾವು ಕಳೆದುಕೊಳ್ಳುವ ಕ್ಯಾಲೊರಿಗಳ ಪ್ರಮಾಣವು ನಿಮ್ಮ ಸಂಗಾತಿ ಹಾಸಿಗೆಯಲ್ಲಿ ಎಷ್ಟು ಕಾಲ ಉಳಿಯಬಹುದು ಎಂಬುದನ್ನು ತೋರಿಸುತ್ತದೆ.
ಲೈಂಗಿಕತೆಯಿಂದ ತೂಕ ಇಳಿಸಿಕೊಳ್ಳಬಹುದು ಅನ್ನೋದು ಸತ್ಯ. ದಿನಕ್ಕೆ 4 ಬಾರಿ ಸೆಕ್ಸ್ನಿಂದ 300-400 ಕ್ಯಾಲೊರಿ ಬರ್ನ್ ಮಾಡಬಹುದು. ಆದರೆ ಅದಕ್ಕೆ ಬೇಕಾದ ಶಕ್ತಿಯೂ ನಿಮ್ಮಲ್ಲಿರಬೇಕು. ಅತಿಯಾದ ಲೈಂಗಿಕತೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಸೆಕ್ಸ್ ಸೂತ್ರವೊಂದನ್ನೇ ನಂಬಿಕೊಂಡು ತೂಕ ಇಳಿಸುವ ಸರ್ಕಸ್ಸಿಗೆ ಬೀಳಬೇಡಿ. ಮನಸ್ಸಿನಲ್ಲಿ ಉತ್ಸಾಹವಿಲ್ಲದೆ ಹೋದರೆ ಲೈಂಗಿಕತೆಯಿಂದಲೂ ಯಾವ ಪ್ರಯೋಜನವೂ ಇಲ್ಲ.
ಒಳ್ಳೆಯ ಸೆಕ್ಸ್ ಲೈಫ್ ಇದ್ದವರಿಗೆ ಇಮ್ಯುನೋಗ್ಲೋಬಿನ್ ಹೆಚ್ಚು. ರೋಗ ಪ್ರತಿರೋಧಕ ಶಕ್ತಿಯೂ ಹೆಚ್ಚು. ಸಂತೃಪ್ತ ಲೈಂಗಿಕ ಜೀವನ ನಡೆಸುವವರು ಕಾಯಿಲೆ ಬೀಳುವುದು ಕಡಿಮೆ. ನಿರಂತರ ಲೈಂಗಿಕತೆ ಬಿಪಿಯನ್ನು ಕಂಟ್ರೋಲಿನಲ್ಲಿಡುತ್ತದೆ. ಕಿಡ್ನಿಗಳನ್ನು ಹೆಲ್ದಿಯಾಗಿರಿಸುತ್ತದೆ. ಅಧ್ಯಯನವೊಂದರ ಪ್ರಕಾರ ಆರೋಗ್ಯಕರ ಕಾಮಜೀವನ ಹೊಂದಿರುವವರಿಗೆ ರಕ್ತದೊತ್ತಡ ಸಮಸ್ಯೆ ಕಂಡುಬಂದಿಲ್ಲ. ಅದರರ್ಥ ಹೃದಯ ಆರೋಗ್ಯವಾಗಿರುತ್ತದೆ.
ನಿರಂತರ ಸೆಕ್ಸ್ ನಡೆಯಬೇಕೆಂದರೆ ಮಾನಸಿಕವಾಗಿಯೂ ಚೆನ್ನಾಗಿರಬೇಕು. ಮನಸ್ಸು ಉಲ್ಲಾಸದಿಂದಿರಬೇಕು. ಕೌಟುಂಬಿಕ ಜೀವನ ಹ್ಯಾಪಿಯಾಗಿರಬೇಕು. ದೈಹಿಕ ಸಂಬಂಧದಿಂದ ಹೆಚ್ಚುವರಿ ಕ್ಯಾಲೊರಿ ಬರ್ನ್ ಮಾಡೋದು ಮಾತ್ರವಲ್ಲ, ಬದಲಾಗಿ ಸೆಕ್ಸ್ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳ ನಡುವೆ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಉತ್ತಮ ದೈಹಿಕ ಸಂಬಂಧವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಎಂಡಾರ್ಫಿನ್ ಗಳು ಮತ್ತು ಇತರ ಹಾರ್ಮೋನುಗಳ ಹೆಚ್ಚಿನ ಹರಿವು ತಲೆ, ಬೆನ್ನು ಮತ್ತು ಕಾಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತ ಮತ್ತು ಪಿರಿಯಡ್ಸ್ ನೋವನ್ನು ಸಹ ಕಡಿಮೆ ಮಾಡುತ್ತೆ. ಇಷ್ಟೆಲ್ಲ ಆರೋಗ್ಯ ಇರುವಾಗ ತಂತಾನಾಗಿಯೇ ತೂಕವೂ ಕಡಿಮೆಯಿರುತ್ತದೆ.



