ಎಚ್.ಡಿ.ರೇವಣ್ಣ ದೇವರು, ಧರ್ಮ, ಭವಿಷ್ಯಗಳನ್ನು ಸಿಕ್ಕಾಪಟ್ಟೆ ನಂಬ್ತಾರೆ. ಪ್ರತಿಯೊಂದಕ್ಕೂ ಮುಹೂರ್ತ, ಸಮಯ, ದಿಕ್ಕು, ಗಳಿಗೆ ಲೆಕ್ಕ ಹಾಕುತ್ತಾರೆ. ಜೆಡಿಎಸ್ʻನ ಪ್ರಚಾರ, ದೇವೇಗೌಡರು ಮನೆಯಿಂದ ಹೊರಬರುವ ಟೈಮು, ಕುಮಾರಸ್ವಾಮಿ ಸಿಎಂ ಆಗುವಾಗ ಯಾವ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಲೆಕ್ಕ ಹಾಕಿ ಹೇಳುವ ರೇವಣ್ಣ, ಸದನದಲ್ಲಿ ತಾವು ಕುಳಿತುಕೊಳ್ಳುವ ಕುರ್ಚಿಯನ್ನೂ ವಾಸ್ತು ಪ್ರಕಾರವೇ ಮಾಡಿಸ್ತಾರೆ. ಅಂತಹ ರೇವಣ್ಣ ಈಗ ಅರೆಸ್ಟ್ ಆಗುವಾಗಲೂ ಮುಹೂರ್ತ ನೋಡಿದ್ರಂತೆ ಎನ್ನುವುದು ಸುದ್ದಿಯಾಗ್ತಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೇಲೆ ಕೆ.ಆರ್ ನಗರದಲ್ಲಿ ದಾಖಲಾಗಿದ್ದ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ಅವರನ್ನು ಅರೆಸ್ಟ್ ಮಾಡುವುದಕ್ಕೆ ದೇವೇಗೌಡರ ಮನೆಗೆ ಹೋಗಿದ್ದವರಿಗೆ ಶಾಕ್ ಕಾದಿತ್ತು. ಮಾಜಿ ಪ್ರಧಾನಿಯ ಮನೆ ಎನ್ನುವ ಕಾರನಕ್ಕೆ ಸರ್ಚ್ ವಾರೆಂಟ್ ಕೂಡಾ ಪಡೆದು ಹೋಗಿದ್ದ ಪೊಲೀಸರಿಗೆ ಮನೆಯ ಬಾಗಿಲು ಓಪನ್ ಆಗಲಿಲ್ಲ. ಕಾನೂನು ಪ್ರಕಾರ ಡೋರ್ ಒಡೆದು ಒಳನುಗ್ಗುವ ಅಧಿಕಾರ ಪೊಲೀಸರಿಗೆ ಇತ್ತಾದರೂ.. ಅದು ಮಾಜಿ ಪ್ರಧಾನಿಯ ಎಂಬ ಕಾರಣಕ್ಕೆ ತಾಳ್ಮೆ ವಹಿಸಿದರು. ೨೫ ನಿಮಿಷಗಳಷ್ಟು ಕಾಲ ಬಾಗಿಲ ಹೊರಗೇ ನಿಂತು ಕಾದರು. ವಿಚಿತ್ರವೆಂದರೆ.. 25 ನಿಮಿಷಗಳ ವೇಯ್ಟಿಂಗ್ ನಂತರ.. ಬಾಗಿಲು ತೆರೆದದ್ದು ಖುದ್ದು ರೇವಣ್ಣ.
ಹೇಳಿ ಕೇಳಿ ಎಲ್ಲದಕ್ಕೂ ಘಳಿಗೆ-ಮುಹೂರ್ತ ನೋಡೋ ರೇವಣ್ಣ, ಶರಣಾಗಲು ಸಹ ಮಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿಷ್ಯ ಪ್ರಕಾರ 5 ಗಂಟೆ 17 ನಿಮಿಷದಿಂದ 6 ಗಂಟೆ 50 ನಿಮಿಷದವರೆಗೆ ಇದ್ದಿದ್ದು ಕಾಲಲಗ್ನ.. ಹೀಗಾಗಿ ಸಂಜೆ 6.50ರ ಬಳಿಕ ಲಾಭಲಗ್ನ ಇರೋದ್ರಿಂದ ಅದೇ ಹೊತ್ತಿಗೆ ರೇವಣ್ಣ ಶರಣಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.
ಅಂದಹಾಗೆ ಸಂತ್ರಸ್ತರಿಗೆ ಕಿರುಕುಳ ನೀಡುವಾಗಲೂ ಸಮಯ ನೋಡಿದ್ದರಾ.. ಮುಹೂರ್ತ ನೋಡಿಕೊಂಡೇ ಮಾಡಿದ್ದರಾ ಎಂಬುದು ಕುಹಕಿಗಳ ಪ್ರಶ್ನೆ. ಕೇಸು ದಾಖಲಾಗುತ್ತಿದ್ದಂತೆ ರೇವಣ್ಣ ಮನೆಯಲ್ಲಿ ಹೋಮ ಹವನ ಮಾಡಿಸಿದ್ದರು.
ಒಟ್ಟಿನಲ್ಲಿ ಈಗ ದೇವೇಗೌಡರ ಮನೆಯಲ್ಲೀಗ ಸೂತಕದ ವಾತಾವರಣ ಇದೆ. ಪದ್ಮನಾಭ ನಗರದ ಗೌಡರ ಮನೆಗೆ ಕುಟುಂಬದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗೇ ಧಾವಿಸಿ ಬರುತ್ತಿದ್ದಾರೆ. ಮಾಜಿ ಸಿಎಂ ಎಚ್ʻಡಿಕೆ, ನಿಖಿಲ್, ಡಾ.ಮಂಜುನಾಥ್ ಪತ್ನಿ ಅನಸೂಯ, ಇನ್ನಿಬ್ಬರು ಪುತ್ರರಾದ ಡಾ.ಬಾಲಕೃಷ್ಣಗೌಡ, ರಮೇಶ್ಗೌಡ ಸಹ ಆಗಮಿಸಿ ದೇವೇಗೌಡರ ನಿಗಾ ನೋಡುತ್ತಿದ್ಧಾರೆ.
ಒಟ್ಟಾರೆ, ಪೆನ್ಡ್ರೈವ್ ಪ್ರಕರಣ ದಳದ ಮಾನವನ್ನೇ ಭಂಗ ಮಾಡಿದೆ. ಪಕ್ಷದ ಹಿರಿಯ ನಾಯಕ ರೇವಣ್ಣ, ಕಿಡ್ನಾಪ್ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಸಂತ್ರಸ್ತೆಯೇನಾದರೂ.. ಸ್ವತಃ ತಾನಾಗಿಯೇ ಹೋಗಿದ್ದೆ ಎಂದರೆ ಮಾತ್ರ.. ರೇವಣ್ಣ ರಿಲೀಸ್ ಆಗಬಹುದು. ಇಲ್ಲದೇ ಹೋದರೆ.. ರೇವಣ್ಣ ಜೈಲಿನಲ್ಲಿಯೇ ಇರಬೇಕಾಗಬಹುದು. ಪ್ರಜ್ವಲ್ ರೇವಣ್ಣ ಕೂಡಾ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಅರೆಸ್ಟ್ ಆಗುವ ಸಾಧ್ಯತೆ ಇದೆ.



