ಕಾಂಗ್ರೆಸ್ಸಿನವರು (Congress) ಇರೋದೇ ಹೀಗೆ. ಅವರಿಗೆ ಬೇಕಾದಾಗ ಕಾಲು ಹಿಡೀತಾರೆ. ಬೇಡ ಅಂದ್ರೆ ಮುಗಿಸ್ತಾರೆ. ಇದು ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿಯ ಬಗ್ಗೆ ಲೇವಡಿ ಮಾಡಿದ, ಅಟ್ಯಾಕ್ ಮಾಡಿದ ಎಲ್ಲರಿಗೂ ರೇವಣ್ಣ (HD Revanna) ಕೊಟ್ಟ ತಿರುಗೇಟು. ಅದಕ್ಕೆ ಅವರು ಎಂದಿನಂತೆ ಉದ್ದನೆಯ ಲೆಕ್ಕವನ್ನೂ ಕೊಟ್ಟರು.
ಕಾಂಗ್ರೆಸ್ ಯಾಕೆ ಈ ಸ್ಥಿತಿಗೆ ಬಂದಿದೆ ಗೊತ್ತಾ, ಇವರು ಕಮ್ಯುನಿಸ್ಟ್ ರನ್ನ ಮುಗಿಸಿದ್ರು, ಲಾಲೂ ಪ್ರಸಾದ್ (lalu Prasad yadav) ಮುಗಿಸಿದ್ರು. ಬೇಕಾದಾಗ ತಬ್ಬಿಕೊಳ್ತಾರೆ, ಪ್ರಾದೇಶಿಕ ಪಕ್ಷ ಮುಗಿಸಿದ್ದು ಇವರೇ ಎಂದಿದ್ದಾರೆ ರೇವಣ್ಣ..ಅಷ್ಟಕ್ಕೇ ನಿಂತಿಲ್ಲ. ಕೋಮುವಾದಿಗಳನ್ನು ದೂರ ಇಡಬೇಕು ಅಂ ತಾರೆ ತುಮಕೂರಿನಲ್ಲಿ ಅವರ ಜೊತೆ ಸೇರಿ ದೇವೇಗೌಡರನ್ನು ಸೋಲಿಸ್ತಾರೆ ಅಂತಾನೂ ಹೇಳಿದ್ರು.
ಇಂಡಿಯಾ (I.N.D.I.A) ಟೀಂ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಡ್ತಿದ್ದಾರೆ. ರಾಷ್ಟ್ರೀಯ ಪಕ್ಷ ಜೆಡಿಸ್ ಎಲ್ಲಿದೆ ಅಂತಾ ಕೇಳ್ತಾರೆ? ಕೋಮುವಾದಿಗಳನ್ನು ದೂರ ಇಡಬೇಕೆಂದು 28 ಪಕ್ಷದವರು ಒಂದಾಗಿದ್ದಾರೆ. ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಇಳಿಸಿದಾಗಿನಿಂದ ಯಾವ ರೀತಿ ನಡೆಸಿಕೊಂಡರು. ಇವರು ಬೇಕಾದಾಗ ಬಂದು ಕಾಲು ಹಿಡಿತಾರೆ, ಬೇಡವಾದಾಗ ಮುಗಿಸ್ತೀವಿ ಅಂತಾರೆ. ನಾವು ಜನರನ್ನು ಉಳಿಸಬೇಕಿದೆ. ನಮ್ಮ ನಿಲುವು ಬದಲಾವಣೆಗೆ ಕಾಂಗ್ರೆಸ್ ಕಾರಣ. ಇವರಿಗೆ ಅಧಿಕಾರದ ಮದ ಬಂದಿದೆ ಎಂದಿದ್ದಾರೆ ರೇವಣ್ಣ.
ಇದು ನಮಗೆ ಹೊಸದೇನು ಅಲ್ಲ. ನಮ್ಮ ಕುಟುಂಬದ ಮೇಲೆ ಈ ಪಕ್ಷ ಮುಗಿಸಬೇಕು ಎಂದು ಪ್ರಯತ್ನ ನಡೆಯುತ್ತಲೆ ಇದೆ. ಕೆಲವು ವರ್ಗಗಳು ಈ ಪ್ರಯತ್ನ ಮಾಡುತ್ತಿವೆ. ಇದಕ್ಕೆಲ್ಲಾ ನಾವು ಹೆದರಿ ಓಡಿ ಹೋಗೋದಿಲ್ಲ. ನಾವ್ಯಾವತ್ತು ಕಾನೂನಿಗೆ ತಲೆಬಾಗೊ ಕುಟುಂಬ ಮತ್ತು ಪಕ್ಷವಾಗಿದೆ. ನಮ್ಮ ಪಕ್ಷದ ಕಚೇರಿ 40 ವರ್ಷದಿಂದ ಇತ್ತು. ಅದನ್ನು ಕೂಡ ಕಿತ್ತುಕೊಂಡ್ರಪ್ಪ. ದೇವೇಗೌಡರು (HD Devegowda) ರಾತ್ರಿ 9 ಗಂಟೇಲಿ ಕಣ್ಣೀರು ಹಾಕಿಕೊಂಡು ಬಂದ್ರು. ನಾವೇನು ಹೆದರಿದ್ವಾ, ದೇವೇಗೌಡರು ಕುಮಾರಸ್ವಾಮಿಗೆ (HD Kumaraswamy) ಇದನ್ನೆಲ್ಲಾ ಎದುರಿಸೊ ಶಕ್ತಿ ಇದೆ ಎಂದು ಹೇಳಿದ್ದಾರೆ ರೇವಣ್ಣ.
ಈ ಸರ್ಕಾರ ಕೇವಲ ಗ್ಯಾರಂಟಿ ಸ್ಕೀಂ ಜಾರಿ ಕಡೆ ಗಮನ ಕೊಡ್ತಾ ಇದೆ. ಹೀಗಾದ್ರೆ ರೈತರು ಎಲ್ಲಿಗೆ ಹೋಗಬೇಕು. ಬರೀ ಗ್ಯಾರಂಟಿ ಕೊಟ್ಟರೆ ಸಾಕಾ.. ಬೆಳೆ ಹಾಳಾದ ರೈತರಿಗೆ, ರಾಗಿ, ಜೋಳ ನಷ್ಟ ಮಾಡಿಕೊಂಡವರಿಗೆ ಪರಿಹಾರ ಕೊಡೋದಿಲ್ವಾ? ಕಾಂಗ್ರೆಸ್ ಸರ್ಕಾರ ರೈತರ ಮನೆ ಹಾಳಾದ್ರು ಪರವಾಗಿಲ್ಲ, ಬೇಕಾದರೇ ಬೀದಿಪಾಲಾಗಲಿ ನಮಗೆ ಗ್ಯಾರಂಟಿ ಯೋಜನೆ ಈಡೇರಿಸುವುದೇ ಮುಖ್ಯ ಎನ್ನುವಂತೆ ವರ್ತಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದಾರೆ. ರೇವಣ್ಣ ಏನೇ ರಾಜ್ಯ ಮಟ್ಟದ ನಾಯಕರೆಂದರೂ ಹಾಸನವನ್ನು ಮಾತ್ರ ಬಿಟ್ಟುಕೊಡಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುವಂತೆ ರೇವಣ್ಣ ಮಾತನಾಡಿದ್ದೆಲ್ಲ ಹಾಸನ ಜಿಲ್ಲೆಯ ಬಗ್ಗೆಯೇ.



