ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಒಬಿಸಿ ಮೀಸಲಾತಿ ಯುದ್ಧ ಶುರುವಾಗಿದೆ. ಈಗ ಬಯಲಾಗಿರುವ ಮಾಹಿತಿ ಪ್ರಕಾರ ಮುಸ್ಲಿಮರಲ್ಲಿನ ಜಾತಿಗಳು ಅತ್ತ ಒಬಿಸಿ ಗ್ರೂಪಿನಲ್ಲಿದ್ದು, ಅಲ್ಲಿಯೂ ಮೀಸಲಾತಿ ಪಡೆಯುತ್ತಿದ್ದಾರೆ. ಇದೆಲ್ಲದರ ಜೊತೆ ಪ್ರತ್ಯೇಕವಾಗಿ ಮುಸ್ಲಿಂ ಮೀಸಲಾತಿಯನ್ನೂ ಪಡೆಯುತ್ತಿದ್ಧಾರೆ. ಒಬಿಸಿಯಲ್ಲಿ ಜಾತಿ ಹೆಸರಿನಲ್ಲಿ… ಮುಸ್ಲಿಂ ಮೀಸಲಾತಿ ಹೆಸರಲ್ಲಿ ಅಲ್ಲಿಯೂ ಪ್ರತ್ಯೇಕ ಮೀಸಲಾತಿ ಪಡೆಯುತ್ತಿದ್ಧಾರೆ. ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ದಿಸೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಮರನ್ನು ಇತರೆ ಹಿಂದುಳಿದ ವರ್ಗಗಳ ಕೆಟಗರಿಗೆ ಅಂದ್ರೆ ಒಬಿಸಿ ಗ್ರೂಪಿಗೆ ಸೇರಿಸಿದೆ. ಇದಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಅಸಮಾಧಾನ ವ್ಯಕ್ತಪಡಿಸಿದೆ. ರ್ನಾಟಕ ಸರ್ಕಾರವು ಮುಸ್ಲಿಮರಿಗೆ ಮೀಸಲಾತಿ ನೀಡುವ ದಿಸೆಯಲ್ಲಿ ಆ ಧರ್ಮದ ಎಲ್ಲರನ್ನೂ ಒಬಿಸಿಗೆ ಸೇರಿಸಿರುವುದು ಸರಿಯಲ್ಲ. “ಮೀಸಲಾತಿ ನೀಡಲು ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿ ಕೆಟಗರಿಗೆ ಸೇರಿಸಿದೆ. ಇದು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಒಬಿಸಿ ಮೀಸಲಾತಿ ನೀಡಬೇಕೇ ಹೊರತು, ಇಡೀ ಧರ್ಮವನ್ನೇ ಒಬಿಸಿಗೆ ಸೇರಿಸಿರುವುದು ಸರಿಯಲ್ಲ ಎಂದು ಹೇಳಿದೆ.
ಕರ್ನಾಟಕಲ್ಲಿ ಮುಸ್ಲಿಮರ ಸಂಖ್ಯೆ ಶೇ.12.92ರಷ್ಟಿದೆ. ಕೆಟಗರಿ II-B ಅನ್ವಯ ಕರ್ನಾಟಕದಲ್ಲಿರುವ ಎಲ್ಲ ಮುಸ್ಲಿಮರು ಒಬಿಸಿ ಕೆಟಗರಿ ವ್ಯಾಪ್ತಿಗೆ ಸೇರುತ್ತಾರೆ. ಕೆಟಗರಿ 1ರಲ್ಲಿ 17 ಮುಸ್ಲಿಂ ಸಮುದಾಯಗಳು, 2ಎ ಕೆಟಗರಿಯಲ್ಲಿ 19 ಮುಸ್ಲಿಂ ಸಮುದಾಯಗಳು ಬರುತ್ತವೆ. ಇದು ಸಾಮಾಜಿಕ ನ್ಯಾಯ ತತ್ವದ ವಿರುದ್ಧದ ತೀರ್ಮಾನವಾಗಿದೆ ಎಂದು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಹೇಳಿದೆ.
ಹಿಂದುಗಳು, ಮುಸ್ಲಿಮರು ಸೇರಿ ಎಲ್ಲ ಧರ್ಮಗಳಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರಿಗೆ ಮಾತ್ರ ಒಬಿಸಿ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಒಂದಿಡೀ ಧರ್ಮಕ್ಕೇ ಒಬಿಸಿ ಮೀಸಲಾತಿ ನೀಡುವುದು ಮೀಸಲಾತಿಯ ಮೂಲ ತತ್ವಕ್ಕೆ ವಿರುದ್ಧಎನ್ನುವುದು ರಾಷ್ಟ್ರೀಯ ಆಯೋಗದ ವಾದ.
ಎಲ್ಲ ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರ್ಪಡೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಬಿಸಿ ಕೆಟಗರಿ ವ್ಯಾಪ್ತಿಯ ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗೆಯೇ, ಮೀಸಲಾತಿ ನೀಡಿರುವ ಕುರಿತು ಯಾವುದೇ ಮಾಹಿತಿಯನ್ನೂ ರಾಜ್ಯ ಸರ್ಕಾರ ಒದಗಿಸಿಲ್ಲ ಎಂಬುದಾಗಿ ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.
ಮೀಸಲಾತಿ ಅಕ್ರಮ : ಇರೋದು ಶೇ.4 ಕೊಟ್ಟಿರೋದು ಶೇ.16
ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗಿರೋ ಮೀಸಲಾತಿಯಲ್ಲಿ ಅಕ್ರಮ ನಡೆದಿರೋದು ತನಿಖೆಯಲ್ಲಿ ಬಯಲಾಗಿದೆ ಎಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಹೇಳಿದೆ. ಅಂದ ಹಾಗೆ ಮುಸ್ಲಿಮರಿಗೆ 2002ರಲ್ಲಿ ಶೇಕಡಾ 4ರಷ್ಟು ಮೀಸಲಾತಿ ನೀಡಲಾಗಿದೆ. ಹೀಗಿದ್ದರೂ ಕರ್ನಾಟಕದ 930 ಮೆಡಿಕಲ್ ಸೀಟುಗಳಲ್ಲಿ ಒಬಿಸಿ ಕೋಟಾದಡಿ ಶೇಕಡಾ 16ರಷ್ಟು ಮೀಸಲಾತಿ ನೀಡಲಾಗಿದೆ. ಮುಸ್ಲಿಮರನ್ನ ಒಬಿಸಿ ಕೋಟಾಗೆ ಸೇರಿಸಲಾಗಿದೆ. ಇದ್ರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಆಯೋಗ ಕಟುವಾಗಿ ಟೀಕಿಸಿದೆ.
ಕರ್ನಾಟಕದಲ್ಲಿ ಒಬಿಸಿಗಳಿಗೆ ಒಟ್ಟು ಶೇಕಡಾ 32ರಷ್ಟು ಮೀಸಲಾತಿ ಇದೆ. ಅದರಲ್ಲೂ ಎಸ್ಸಿ ಎಸ್ಟಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಬಳಿಕ ಅದರಲ್ಲಿ ಮರುವಿಂಗಡಣೆ ಮಾಡಲಾಗಿದೆ. ಕೆಟಗರಿ 1, ಕೆಟಗರಿ 2ಬಿ, ಕೆಟಗರಿ 1ಬಿ, ಕೆಟಗರಿ 3ಬಿ, ಕೆಟಗರಿ 2ಎ ಮಾಡಲಾಗಿದೆ. ಈ ಐದೂ ಕೆಟಗರಿ ಪೈಕಿ ಕೆಟಗರಿ 1ರಲ್ಲಿ 95 ಜಾತಿಗಳಿವೆ. ಆ 95ರಲ್ಲಿ 17 ಜಾತಿಗಳು ಮುಸ್ಲಿಮರದ್ದು.
ಇನ್ನು ಕೆಟಗರಿ1ಬಿ ಹಾಗೂ ಕೆಟಗರಿ 2ಬಿಯಲ್ಲೂ 103 ಜಾತಿಗಳಿವೆ. ಅದರಲ್ಲಿಯೂ ಹಲವು ಮುಸ್ಲಿಂ ಸಮುದಾಯದ ಜಾತಿಗಳಿವೆ. ಹೀಗಿದ್ದರೂ.. ಕೂಡಾ ಮುಸ್ಲಿಮರಿಗೆ ಪ್ರತ್ಯೇಕವಾಗಿ ಕರ್ನಾಟಕ ಸರ್ಕಾರ 2002ರಿಂದ ಶೇಕಡಾ 4ರಷ್ಟು ಮೀಸಲಾತಿ ನೀಡುತ್ತಿದೆ. ಹೀಗಾಗಿ.. ಮುಸ್ಲಿಮರು ಅತ್ತ ಒಬಿಸಿಯಲ್ಲಿ.. ಇತ್ತ ಮುಸ್ಲಿಮ್ ಮೀಸಲಾತಿಯಲ್ಲಿ ಎರಡೂ ಕಡೆ ಲಾಭ ಪಡೆಯುತ್ತಿದ್ದಾರೆ.ಅಂದ್ರೆ ಎಲ್ಲಾ ಮುಸ್ಲಿಮರು ಒಬಿಸಿಯಲ್ಲಿದ್ದಾರೆ.



