ನಟ ದರ್ಶನ್ ಅವರ ಬಗ್ಗೆ ಹಲವು ಖ್ಯಾತ ಜ್ಯೋತಿಷಿಗಳು ಭವಿಷ್ಯ ಹೇಳ್ತಿದ್ದಾರೆ. ಹಲವರ ವಾದದ ಪ್ರಕಾರ ದರ್ಶನ್ʻಗೆ ಜೈಲು ವಾಸ ಮುಗಿದಿಲ್ಲ. ಇದು ಕೊನೆಯೂ ಅಲ್ಲ. ಅಲ್ಲದೆ, ದರ್ಶನ್ ಅವರಿಗೆ ರೇಣುಕಾಸ್ವಾಮಿಯ ಪ್ರೇತದ ಕಾಟವೂ ಇದೆ. ಶನಿ ಕಾಟವೂ ಇದೆ. ಆದರೆ, ದರ್ಶನ್ ತಮ್ಮ ಪತ್ನಿಯನ್ನು ಮಾತ್ರ ಬಿಡುವುದಿಲ್ಲ. ಇಂತಾದ್ದೊಂದು ಜ್ಯೋತಿಷ್ಯ ಹೇಳಿರೋದು ಜ್ಯೋತಿಷಿ ದಿನೇಶ್ ಭಟ್.
ನಟ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ. ಇದು ೨ನೇ ಬಾರಿ ಎನ್ನುವುದು ವಿಶೇಷ. ವೃತ್ತಿ ಜೀವನ ಏರುಗತಿಯಲ್ಲಿದ್ದಾಗ ಜೈಲಿಗೆ ಹೋಗಿದ್ದ ದರ್ಶನ್, ಈ ಬಾರಿ ಉತ್ತುಂಗದಲ್ಲಿದ್ದಾಗಲೇ ಜೈಲು ಸೇರಿದ್ದಾರೆ. ದರ್ಶನ್ ಅವರಿಗೆ ಚಾರ್ಜ್ʻಶೀಟ್ ಆಗುವವರೆಗೆ ಬೇಲ್ ಸಿಗುವ ಸಾಧ್ಯತೆ ಇಲ್ಲ. ಚಾರ್ಜ್ʻಶೀಟ್ ಹಾಕುವುದಕ್ಕೆ ಪ್ರಕರಣ ದಾಖಲಾದ ದಿನದಿಂದ ೩ ತಿಂಗಳವರೆಗೆ ಸಮಯ ಇರುತ್ತದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೂಕ್ತ ಸಾಕ್ಷ್ಯಗಳೂ ಸಿಕ್ಕಿರುವುದರಿಂದ ಹಾಗೂ ಅಭಿಮಾನಿಗಳನ್ನು ಮತ್ತು ಹಣ, ಅಧಿಕಾರ, ಪ್ರಭಾವ ಬಳಸಿ ಕೇಸ್ ಮುಚ್ಚಿ ಹಾಕುವ ಯತ್ನ ಮಾಡಿದ ಆರೋಪ ಇರುವುದರಿಂದ ಸದ್ಯಕ್ಕೆ ಜಾಮೀನು ಸಿಕ್ಕಲ್ಲ. ಈ ಮಧ್ಯೆ ಜ್ಯೋತಿಷಿ ದಿನೇಶ್ ಭಟ್ ಎಂಬುವವರು ದರ್ಶನ್ʻಗೆ ಇನ್ನೂ ಮೂರ್ನಾಲ್ಕು ಬಾರಿ ಜೈಲು ಸೇರಬೇಕಾದ ಸಂದರ್ಭ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರೇಣುಕಾಸ್ವಾಮಿಯಂತೆ ಕೊಲೆಯಾಗಿದ್ದು, ಆ ರೀತಿ ಸತ್ತವರಿಗೆ ಮೋಕ್ಷ ಸಿಕ್ಕುವುದಿಲ್ಲ. ಪ್ರೇತವಾಗಿ ಕಾಡುತ್ತಾರೆ. ತಮಗೆ ತೊಂದರೆ ಕೊಟ್ಟವರಿಗೆ ಹಿಂಸೆ ಮಾಡ್ತಾರೆ ಎಂದು ಗರುಡ ಪುರಾಣವನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ ಈ ಕೊಲೆ ಮಾಡಿದವರ ಮನೆಯಲ್ಲಿ ಏನಾದರೊಂದು ಅವಘಡ ಆಗಬಹುದು, ವಿಧ ವಿಧವಾದ ರೀತಿಯಲ್ಲಿ ಕೌಟುಂಬಿಕ ಸಮಸ್ಯೆ ಆಗಬಹುದು, ಅಷ್ಟೇ ಅಲ್ಲದೆ ಆ ಕುಟುಂಬದಲ್ಲಿ ಮುಂದೆ ಹುಟ್ಟುವ ಮಕ್ಕಳಿಗೂ ಸಮಸ್ಯೆ ಆಗಬಹುದು. ದರ್ಶನ್ ಜಾತಕದ ಪ್ರಕಾರ ಅವರಿಗೆ ಸಾಡೇಸಾತ್ ನಡೆಯುತ್ತಿದೆ. ಅವರ ಜಾತಕದಲ್ಲಿ ದೇವತಾನುಗ್ರಹ ಇಲ್ಲ. ಜಾತಕದಲ್ಲಿ ಸಾಡೇಸಾತಿ ಶನಿ ಮಧ್ಯಭಾಗದಲ್ಲಿದ್ದಾನೆ ಎಂದಿದ್ದಾರೆ ದಿನೇಶ್ ಭಟ್.
ದರ್ಶನ್ ಜಾತಕದಲ್ಲಿ 3 ರಿಂದ 4 ಬಾರಿ ಕಾರಾಗೃಹ ವಾಸ ಯೋಗ ಇದೆ.ಈಗಾಗಲೇ ಅವರು 2022ರಲ್ಲಿ ಜೈಲು ವಾಸ ಮಾಡಿದ್ದರು. ಮತ್ತೆ 2027ರಲ್ಲಿ ಜೈಲು ವಾಸ ಮಾಡುತ್ತಾರೆ. ಮುಂದೆ ಅವರು ಯಾರಿಗೋ ಸಹಾಯ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡು ಜೈಲಿಗೆ ಹೋಗ್ತಾರೆ ಅಂತ ಅವರ ಜಾತಕ ಹೇಳುತ್ತದೆ. 2026ರ ಜೂನ್ ನಂತರ ದರ್ಶನ್ ಅವರಿಗೆ ಒಳ್ಳೆಯ ಯೋಗ ಇದೆ, ಆಗಲೇ ಅವರಿಗೆ ದೇವತಾನುಗ್ರಹ ಶುರುವಾಗುತ್ತದೆ. 2026ರಲ್ಲಿ ದರ್ಶನ್ ರಾಜಕೀಯಕ್ಕೆ ಬರುವ ಯೋಗ ಇದೆ ಅಂತ ಕಾಣಿಸುತ್ತದೆ ಎಂದೂ ಹೇಳಿದ್ದಾರೆ. ಆದರೆ, ಅದಕ್ಕೆ ಸ್ವತಃ ದರ್ಶನ್ ಮನಸ್ಸು ಮಾಡಬೇಕು ಎಂದೂ ಹೇಳಿದ್ದಾರೆ.
ಮನೆಯಲ್ಲಿ ತಾಯಿ, ಪತ್ನಿ ಕಣ್ಣೀರು ಹಾಕಿದಾಗ ಅಥವಾ ಬೇರೆ ಮಹಿಳೆಗೆ ಯಾವುದೇ ರೀತಿಯಲ್ಲಿ ಮೋಸ ಆದಾಗ ಅಥವಾ ಸರಿಯಾಗಿ ಕುಲದೇವರ ಆರಾಧನೆ ಸರಿಯಾಗಿ ಮಾಡದಿದ್ದಾಗ ದೋಷ ಬರುತ್ತದೆ. ದರ್ಶನ್ ಕುಟುಂಬದಲ್ಲಿ ಸ್ತ್ರೀ ದೋಷವು ಇರೋದಂತೂ ಹೌದು. ಮುಂಬರುವ ನವೆಂಬರ್ ತಿಂಗಳವರೆಗೂ ಜೈಲು ವಾಸ ತಪ್ಪಿದ್ದಲ್ಲ ಎಂದಿರುವ ದಿನೇಶ್ ಭಟ್ ದರ್ಶನ್ ಯಾವತ್ತಿಗೂ ಹೆಂಡ್ತಿಯನ್ನ ಬಿಡಲ್ಲ. ಇನ್ನೊಂದು ಹೆಣ್ಣಿನ ಜೊತೆ ಅವರು ಸಂಬಂಧ ಬೆಳೆಸಿದರೂ ಕೂಡ ಹೆಂಡ್ತಿಯನ್ನು ಬಿಡೋದಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ದರ್ಶನ್ ಅವರಿಗೆ ಶುಭವೂ ಇದೆ. ಅಶುಭವೂ ಇದೆ. ಯೋಗವೂ ಇದೆ. ಕಾಟವೂ ಇದೆ. ಆದರೆ.. ರೇಣುಕಾಸ್ವಾಮಿಯ ಪ್ರೇತ ಎದ್ದು ಬಂದು ಕಾಡಲಿದೆ ಎಂದು ಹೇಳಿರುವುದು ವಿಚಿತ್ರ ಭಾವ ಮೂಡಿಸಿದೆ.



