ಯಡಿಯೂರಪ್ಪ. ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ. ಆದರೆ.. ಈ ಮಾತು ಅನ್ವಯವಾಗೋದು ಎಲೆಕ್ಷನ್ ಹೊತ್ತಿನಲ್ಲಿ ಮತ ಕೇಳುವಾಗ ಮಾತ್ರ. ಗೆದ್ದ ಮೇಲೆ ಅದೇ ಯಡಿಯೂರಪ್ಪ ವಿರುದ್ಧ ಒಂದು ದೊಡ್ಡ ಕೂಟವೇ ರಚನೆಯಾಗುತ್ತೆ. ಹೆಜ್ಜೆ ಹೆಜ್ಜೆಗೂ ಮುಳ್ಳಾಗಿ ಕಾಡುತ್ತೆ. ಹೀಗ್ಯಾಕೆ.. ಎಲ್ಲವನ್ನೂ ಡೀಟೈಲಾಗಿ ನೋಡೋಣ.. ಸ್ಪೆಷಲ್ ಯೂ ಯೂಟ್ಯೂಬ್ ಚಾನೆಲ್ಲಿಗೆ ಸಬ್ ಸ್ಕ್ರೈಬ್ ಆಗಿ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮೋದಿಯವರಿಗಿಂತ ಸೀನಿಯರ್. ಇದೇ ಕಾರಣಕ್ಕಾಗಿ ಮೋದಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರನ್ನು ಕೊಂಡಾಡಿದ್ದು.
ಇಂತಹ ಯಡಿಯೂರಪ್ಪ ರೈತ ನಾಯಕರಾಗಿದ್ದರೇ ಹೊರತು, ಲಿಂಗಾಯತರ ಲೀಡರ್ ಆಗಿರಲಿಲ್ಲ. ಲಿಂಗಾಯತ ನಾಯಕರಾಗಿದ್ದು ಕುಮಾರಸ್ವಾಮಿ, ಕೊಟ್ಟ ಮಾತು ತಪ್ಪಿ ನಡೆದು ಸಿಎಂ ಪಟ್ಟ ನೀಡದೇ ಕೈಕೊಟ್ಟಾಗ. ರಾಜಕೀಯವನ್ನ ಹತ್ತಿರದಿಂದ ನೋಡಿದವರಿಗೆ ಇದು ಅರ್ಥವಾಗುತ್ತೆ.
ಅಂತಹ ಯಡಿಯೂರಪ್ಪ ಅವರ ವಿರುದ್ಧ ಈಗ ಗುಡುಗುತ್ತಿರುವ ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ್, ಡಿವಿ ಸದಾನಂದ ಗೌಡ.. ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದ ಸಿಟಿ ರವಿ, ಪ್ರತಾಪ್ ಸಿಂಹ, ಸೋಮಣ್ಣ.. ಅವರಂತಹ ನಾಯಕರಿಗೆ ಕೊರತೆ ಇಲ್ಲ. ಅದಕ್ಕೆ ಬಿಜೆಪಿ ಹೈಕಮಾಂಡ್ ಕೃಪಾ ಕಟಾಕ್ಷವೂ ಇತ್ತು ಅನ್ನೋದೂ ಸುಳ್ಳಲ್ಲ. ಅದು ಸಂತೋಷ ರಹಸ್ಯ. ಆ ವಿಷಯ ಬಿಡಿ.ಆದರೆ ಬಿಜೆಪಿ ಹೈಕಮಾಂಡಿನವರಿಗೆ ಒಂದಂತೂ ಸ್ಪಷ್ಟವಾಗಿದೆ. ಮೋದಿ ಅಲೆ ವೋಟುಗಳನ್ನು ತಂದುಕೊಡೋದೂ ನಿಜವಾದರೂ.. ಗೆಲುವನ್ನು ನಿರ್ಧಾರ ಮಾಡುವುದು ಯಡಿಯೂರಪ್ಪ ಮತ್ತವರ ಹಿಂದಿರೋ ಪ್ರಬಲ ವೋಟ್ ಬ್ಯಾಂಕ್ ಅನ್ನೋದು.
ಆದರೆ.. ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕದಿದ್ದರೆ.. ಅವರು ತಮ್ಮ ನಿಯಂತ್ರಣ ಕೈತಪ್ಪಿ ಹೋಗಬಹುದು ಅನ್ನೋ ಆತಂಕವೂ ಇದ್ದ ಹಾಗಿದೆ. ಒಟ್ಟಿನಲ್ಲಿ ಯಡಿಯೂರಪ್ಪ ಬಿಜೆಪಿಗೆ ಉಗುಳಲೂ ಆಗದ.. ನುಂಗಲೂ ಆಗದ ಬಿಸಿ ಬಿಸಿ ತುಪ್ಪ. ಅಥವಾ.. ಹೈಕಮಾಂಡಿಗೆ ಯಡಿಯೂರಪ್ಪ ಅವರ ಶಕ್ತಿ, ತಾಕತ್ತಿನ ಪ್ರತಿಫಲ ಸಿಗಬೇಕು. ಆದರೆ.. ಅವರಿಗೆ ಅಧಿಕಾರ ಕೊಡಬಾರದು. ಈ ಡಬ್ಬಲ್ ಆಟಗಳಿಂದಾಗಿಯೇ ಬಿಜೆಪಿ ಪ್ರತಿ ಎಲೆಕ್ಷನ್ನಿನಲ್ಲೂ ಹೊಡೆತ ತಿನ್ನುತ್ತಲೇ ಬಂದಿದೆ.
ಇಂತಹ ಕಿರುಕುಳಗಳಿಂದಾಗಿಯೇ ಬೇಸತ್ತಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ಇದೇ ಈಶ್ವರಪ್ಪ ಆಗಲೂ ಯಡಿಯೂರಪ್ಪ ಬೆಂಕಿ ಸುರಿಮಳೆಯನ್ನೇ ಸುರಿಸಿದ್ದರು. ಆದರೆ ಎಲೆಕ್ಷನ್ನು ನಡೆದಾಗ ಈಶ್ವರಪ್ಪ 3ನೇ ಸ್ಥಾನಕ್ಕೆ ಕುಸಿದಿದ್ದರು. ಯಡಿಯೂರಪ್ಪರ ಕೆಜೆಪಿ ರನ್ನರ್ ಅಪ್ ಆಗಿತ್ತು. ಕಾಂಗ್ತೆಸ್ ಕೆಲವೇ ನೂರು ಮತಗಳ ಅಂತರದಲ್ಲಿ ಗೆದ್ದಿತ್ತು.
ಈಶ್ವರಪ್ಪ ಮತ್ತೆ ಗೆಲುವು ಕಂಡಿದ್ದು ಯಡಿಯೂರಪ್ಪ ಬಿಜೆಪಿಗೆ ವಾಪಸ್ ಬಂದು, ಈಶ್ವರಪ್ಪ ಪರ ಮತ ಯಾಚಿಸಿದಾಗಲೇ. ಇನ್ನು ಯತ್ನಾಳರ ವಿಚಾರ. ಯತ್ನಾಳ್ ಅವರನ್ನು ಬಿಜೆಪಿಗೆ ಮತ್ತೆ ಕರೆತಂದಿದ್ದೇ ಯಡಿಯೂರಪ್ಪ. ಏನೇ ಕೂಗಾಡಿದರೂ.. ಎಲೆಕ್ಷನ್ನಿನ ಹೊತ್ತಿಗೆ ಯಡಿಯೂರಪ್ಪ ಅವರನ್ನು ಹೇಗಾದರೂ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಗೆಲ್ಲೋದು ಯತ್ನಾಳ್ ಅವರಿಗೆ ಗೊತ್ತು. ಬಿಜೆಪಿಯಲ್ಲಿ ಇಂತಹ ಹಲವು ನಾಯಕರಿದ್ದಾರೆ.
ಈ ಬಾರಿಯೂ ಅಷ್ಟೆ. ಯಡಿಯೂರಪ್ಪ ಸಿಎಂ ಆಗಿದ್ದಾಗ.. ರಾಜ್ಯಪಾಲರಿಗೆ ಪತ್ರ ಬರೆದು ಕಿರಿಕ್ಕು ಶುರು ಮಾಡಿದ್ದವರೇ ಈಶ್ವರಪ್ಪ. ಅಷ್ಟೆಲ್ಲ ಯಾಕೆ.. ವಿಜಯೇಂದ್ರ ಅವರಿಗೆ ವರುಣಾದಲ್ಲಿ ಟಿಕೆಟ್ ಕೊಟ್ಟಿದ್ದರೆ, ಬಿಜೆಪಿ ಆಪರೇಷನ್ ಕಮಲ ಮಾಡಬೇಕಾಗಿ ಬರುತ್ತಿರಲಿಲ್ಲ. ಈಸಿಯಾಗಿ ಬಹುಮತದ ಸ್ಥಾನಗಳನ್ನು ಬಿಜೆಪಿಯೇ ಗೆಲ್ಲುತ್ತಿತ್ತು ಎನ್ನುವುದು ರಾಜಕೀಯ ಪಂಡಿತರ ಮಾತು.
ಆಗ ಅದಕ್ಕೆ ಅಡ್ಡಿ ಮಾಡಿದ ಸಂತೋಷ ಸೈನ್ಯದಲ್ಲಿ ಈಶ್ವರಪ್ಪ ಕೂಡಾ ಒಬ್ಬರಾಗಿದ್ದರು. ಆಗ ಅವರು ರಾಯಣ್ಣ ಪಡೆ ಕಟ್ಟೋಕೆ ಹೊರಟಿದ್ದರು. ಇಂತಹ ಗೊಂದಲಗಳಿಂದಾಗಿಯೇ 2018ರಲ್ಲಿ ಮತ್ತೊಮ್ಮೆ ಬಿಜೆಪಿ ಬಹುಮತದ ಹತ್ತಿರ ಮುಗ್ಗರಿಸಿತ್ತು.
ಇನ್ನು ಸಿಎಂ ಆದರೂ.. ಮಧ್ಯದಲ್ಲೇ ಅಧಿಕಾರ ಬಿಟ್ಟು ಕೆಳಗಿಳಿದ ಯಡಿಯೂರಪ್ಪ, ಹೊರಗೆ ಏನೇ ಮಾತನಾಡಿದರೂ.. ಒಳಗಿನ ರಾಜಕೀಯವೇ ಬೇರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ. ಈ ಬಾರಿಯೂ.. ಅಷ್ಟೆ.. ಯಡಿಯೂರಪ್ಪ ಅವರನ್ನು ನೆಗ್ಲೆಕ್ಟ್ ಮಾಡಿ ಎಲೆಕ್ಷನ್ನಿಗೆ ಹೋದ ಬಿಜೆಪಿಗೆ, 2013ರ ಅಸ್ಲೆಂಬ್ಲಿ ಎಲೆಕ್ಷನ್ ರಿಸಲ್ಟ್ ರಿಪೀಟ್ ಆಗಿದೆ.
2013ರಲ್ಲಿ ಯಡಿಯೂರಪ್ಪ ಬಿಜೆಪಿ ಬಿಟ್ಟು, ಕೆಜಿಪಿ ಕಟ್ಟಿದ್ದಾಗ 40 ಸ್ಥಾನ ಗಳಿಸೋಕೆ ಸುಸ್ತು ಹೊಡೆದಿದ್ದ ಬಿಜೆಪಿ, ಈ ಬಾರಿ 66 ಸೀಟುಗಳನ್ನಾದರೂ ಗೆದ್ದಿದೆ.
ಇನ್ನು ಅವಕಾಶ ಸಿಕ್ಕಾಗಲೆಲ್ಲ ಯಡಿಯೂರಪ್ಪ ಅವರನ್ನು ಹಣಿಯುವ ಮಾತನ್ನಾಡುವ ಈಶ್ವರಪ್ಪ, ಲಾಭಕ್ಕೆ ಬೇಕಾದಾಗಲೆಲ್ಲ ಯಡಿಯೂರಪ್ಪ ಅವರ ಮನೆಯ ಮಗನಾಗುತ್ತಾರೆ. ಆದರೆ.. ಈ ಬಾರಿ ಯಡಿಯೂರಪ್ಪ ಅವರು ಇಂತಹ ಎಲ್ಲರ ಹೋರಾಟವನ್ನೂ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುತ್ತಿದೆ.
ಹೀಗಾಗಿಯೇ.. ತಮ್ಮ ಸಾಮರ್ಥ್ಯದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದವರ ಕ್ಷೇತ್ರಗಳಲ್ಲಿ ಪ್ರಚಾರವನ್ನೂ ಮಾಡಲಿಲ್ಲ. ಇದನ್ನು ಅಡ್ಜಸ್ಟ್ʻಮೆಂಟ್ ರಾಜಕೀಯ ಅನ್ನೋವ್ರಿದ್ಧಾರೆ. ಆದರೆ ಎಲೆಕ್ಷನ್ನಿನ ವೇಳೆ ಯಡಿಯೂರಪ್ಪ ಹೆಸರಿನ ಲಾಭ ಪಡೆದು, ಗೆದ್ದ ಮೇಲೆ ಅವರ ವಿರುದ್ಧವೇ ಡಬಲ್ ಗೇಮ್ ಆಡೋದೂ ಕೂಡಾ ಅಡ್ಜಸ್ಟ್ʻಮೆಂಟ್ ರಾಜಕೀಯ ಅಲ್ಲವಾ..?
ಯಡಿಯೂರಪ್ಪ ಹೇಳಿದವರಿಗೆ ಟಿಕೆಟ್ ಕೊಟ್ಟು ಅವರು ಗೆದ್ದೂ ಬಿಟ್ಟರೆ.. ಯಡಿಯೂರಪ್ಪ ಟೀಂ ಸ್ಟ್ರಾಂಗ್ ಆಗುತ್ತೆ ಅಂತ ಅಡ್ಡಗಾಲು ಹಾಕಿದ ತಂಡದವರೇ.. ಈಗ ಯಡಿಯೂರಪ್ಪ ನಮಗೆ ಟಿಕೆಟ್ ಕೊಡಿಸಿಲ್ಲ.. ಅನ್ಯಾಯ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ಧಾರೆ. ಕರ್ಮ ರಿಟರ್ನ್ಸ್ ಅನ್ನೋದು ಇದಕ್ಕೇ ಇರಬೇಕು.
ಅಂದಹಾಗೆ ಯಡಿಯೂರಪ್ಪ ಡಬಲ್ ಗೇಮ್ ಆಡಿಯೇ ಇಲ್ಲವಾ.. ಈ ಪ್ರಶ್ನೆಗೆ ಉತ್ತರ ಹೇಳೋದಾದ್ರೆ.. ರಾಜಕೀಯದಲ್ಲಿ ಉನ್ನತ ಹುದ್ದೆಗೇರುವ ನಾಯಕ, ಕೇವಲ ಜನಪ್ರಿಯತೆ ಇಟ್ಟುಕೊಂಡರಷ್ಟೇ ಸಾಲದು, ತಂತ್ರಗಾರಿಕೆಯೂ ಗೊತ್ತಿರಬೇಕು. ಮೀಡಿಯಾಗಳಲ್ಲಿ ಅಬ್ಬರಿಸುವುದಷ್ಟೇ ನಾಯಕತ್ವ ಅಲ್ಲ, ತಂತ್ರಗಾರಿಕೆಯ ನಡುವೆ ತಮ್ಮವರನ್ನು ಬೆಳೆಸುವ ಪ್ರಾಮಾಣಿಕತೆಯೂ ಇರಬೇಕು. ಅಂದಹಾಗೆ.. ಸಿಂಪಲ್ಲಾಗಿ ಹೇಳ್ಬೇಕಂದ್ರೆ.. ಮೋದಿ ಅವರ ಹೆಸರಿಂದಲೇ ಈ ಬಾರಿಯ ಎಲೆಕ್ಷನ್ ಗೆಲ್ಲೋ ಹುಮ್ಮಸ್ಸು ಬಿಜೆಪಿಯಲ್ಲಿ ಕಾಣ್ತಾ ಇದೆ.
ಆದರೆ.. ಯಾವುದೇ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರದ ಮತಗಳಿವೆಯಲ್ಲ.. ಅವುಗಳನ್ನು ಡಿಸೈಡ್ ಮಾಡುವ ತಾಕತ್ತು ಇರೋದು ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಮಾತ್ರ. ಕಾಂಗ್ರೆಸ್ಸಿನಲ್ಲಿ ಈ ಶಕ್ತಿ ಸದ್ಯಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಇದೆ. ಅಂದರೆ ಇಬ್ಬರು ಲೀಡರ್ಸ್ ಶಕ್ತಿ ಇದೆ. ಆದರೆ.. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ.. ನಂ.2 ಎನ್ನಬಹುದಾದ ಇನ್ನೊಬ್ಬ ಲೀಡರ್ ಇಲ್ಲ. ಸೋಷಿಯಲ್ ಮೀಡಿಯಾ ಜನಪ್ರಿಯತೆಯೇ ಬೇರೆ. ನೆಲದಲ್ಲಿ ಇರುವ ಜನಪ್ರಿಯತೆಯೇ ಬೇರೆ. ಇದು ಕಹಿಯಾದರೂ ಸತ್ಯ.


