ದೇಶದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿದ್ದನ್ನು ಹೊಗಳಿದರೂ.. ಸಹಿಸಿಕೊಳ್ಳೋ ಶಕ್ತಿ ಕೆಲವರಿಗೆ ಇಲ್ಲ. ಅದನ್ನು ಹೊಗಳಿದವರನ್ನು ತೆಗಳುವ ಮೂಲಕ ಆ ಜನ ನೇರವಾಗಿ ಕ್ರೆಡಿಟ್ʻನ್ನು ಮೋದಿಗೆ ಕೊಡ್ತಿದ್ಧಾರೆ. ಅದು ಬೇರೆ ಪ್ರಶ್ನೆ. ಆದರೆ.. ಇಲ್ಲಿ ಮೋದಿಯನ್ನು ಹೊಗಳಿದ ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುತ್ತಿರುವವರೂ ಇದ್ಧಾರೆ. ಹೊಗಳುತ್ತಿರುವವರೂ ಇದ್ಧಾರೆ.
ನಟಿ ರಶ್ಮಿಕಾ ಮಂದಣ್ಣ ಅವರನ್ನು ಖುದ್ದು ನರೇಂದ್ರ ಮೋದಿಯೇ ಹೊಗಳಿದ್ದರೆ, ಆ ದಿನಗಳು ಖ್ಯಾತಿಯ ನಟ ಚೇತನ್ ತೆಗಳಿದ್ಧಾರೆ.
ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಸೆನ್ಸೇಷನ್ ಆಗಿದ್ದರು. ಕೆಲವೇ ತಿಂಗಳ ಹಿಂದೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಂಡ ಅಟಲ್ ಸೇತು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ರಶ್ಮಿಕಾ ಮಂದಣ್ಣ ಹೆಮ್ಮೆಯಿಂದ ಮಾತನಾಡಿದ್ದರು.
ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು. ಈಗ ಅದು ಕೇವಲ 20 ನಿಮಿಷಗಳಿಗೆ ಇಳಿದಿದೆ. ಯೋಚಿಸಿದರೆ ಅಸಾಧ್ಯ ಎನಿಸುತ್ತದೆ. ಅದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈಗೆ, ಬೆಂಗಳೂರಿನಿಂದ ಮುಂಬೈ ರಸ್ತೆ ಹಾಗೂ ಇನ್ನಿತರೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ನಟಿ ಮಾತನಾಡಿದ್ದರು.


ಮೋದಿಯ ಕಾಲದಲ್ಲಿ ಅಭಿವೃದ್ಧಿಯಾದ ರಸ್ತೆಯನ್ನು ಹೊಗಳಿದ್ದಕ್ಕೆ ರಶ್ಮಿಕಾ ಮಂದಣ್ಣ ಈಗ ಎರಡೂ ರೀತಿಯಲ್ಲಿ ಟ್ರೋಲ್ ಆಗುತ್ತಿದ್ಧಾರೆ. ಮೊದಲೇ ಎಲೆಕ್ಷನ್ ಸಮಯ. ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿಗಳು ಈ ಸಂದರ್ಭದಲ್ಲಿ ಬಂದಿರುವ ಈ ವಿಡಿಯೋ ಮೋದಿ ಪರ ಪ್ರಚಾರ. ರಶ್ಮಿಕಾ ಮಂದಣ್ಣ ಬಿಜೆಪಿಗೆ ಸೇಲ್ ಆದ್ರು ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ರಶ್ಮಿಕಾ ಮಂದಣ್ಣರನ್ನು ಹಾಡಿ ಹೊಗಳುತ್ತಿದ್ಧಾರೆ.
ಸರಿ.. ಹೊಗಳಿಕೆ ಆಯ್ತು. ಈಗ ನಟ ಚೇತನ್ ತೆಗಳಿದ್ದೇನು ಅನ್ನೋದನ್ನ ನೋಡಿದ್ರೆ.. ಆತ ಹೇಳಿರೋದು ಇಷ್ಟೆ.
ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲ ಸೌಕರ್ಯಗಳನ್ನು ನಿರ್ಮಿಸಬಹುದು. ಕಳೆದ 10 ವರ್ಷಗಳಲ್ಲಿ ಭಾರತದ ಆದಾಯ ಮತ್ತ ಆದಾಯದ ಅಸಮಾನತೆ ಗಗನಕ್ಕೇರಿದೆ. ಅದೇ ವೇಳೆ ಪ್ರಜಾಪ್ರಭುತ್ವದ ಸ್ವಾತಂತ್ರ‍್ಯಗಳು, ಹಕ್ಕುಗಳು ದಾಳಿಗೆ ಒಳಗಾಗಿವೆ. ಇದು ಸೆಲಬ್ರಿಟಿಗಳ ಅಜ್ಞಾನವೇ ಹೊರತು ಮತ್ತೇನಲ್ಲ.. ಎಂದು ಟೀಕಿಸಿದ್ಧಾರೆ ನಟ ಚೇತನ್.
ಚೇತನ್ ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ದಡ್ಡಿ, ಅಜ್ಞಾನಿ ಎಂದೆಲ್ಲ ಪರೋಕ್ಷವಾಗಿ ಹೇಳಿದ್ಧಾರೆ. ಯಾರು ಅಜ್ಞಾನಿ.. ಯಾರು ಬುದ್ದಿವಂತರು.. ಗೊತ್ತಿಲ್ಲ. ಚೇತನ್ ಅವರಿಗೆ ರಶ್ಮಿಕಾ ಮಂದಣ್ಣ ಅವರೇ ರಿಯಾಕ್ಟ್ ಮಾಡಬೇಕು. ಆದರೆ.. ರಶ್ಮಿಕಾ ಮಂದಣ್ಣ ಚೇತನ್ ಅವರಿಗೆ ರಿಯಾಕ್ಟ್ ಮಾಡುವ ಯಾವ ಸೂಚನೆಯೂ ಇದ್ದಂತಿಲ್ಲ.



