ಧ್ರುವ ಸರ್ಜಾ (Dhruva sarja) ಕಾಳಿದಾಸನಾಗಿ (Kalidasa) ಹಳೇ ಕಾಲದ ರೌಡಿಯಾಗಿ ನಟಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ (Reeshma nanaiah) ಮಚ್ ಲಕ್ಷ್ಮಿಯಾಗಿ (machlakshmi) ನಟಿಸುತ್ತಿದ್ದಾರೆ. ರವಿಚಂದ್ರನ್ (Ravichandran) ಅವರು ಅಣ್ಣಯ್ಯಪ್ಪನಾಗಿ (Annayyappa) ನಟಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿಯೂ (ShilpaShetty) ನಟಿಸುತ್ತಿದ್ದಾರೆ. ರಾಣಿ ಸತ್ಯವತಿಯ (Rani Sathyavathhi) ಪಾತ್ರದಲ್ಲಿ. ಸಂಜಯ್ ದತ್ ಕೂಡಾ ಇದ್ದಾರೆ. ಕೆಡಿ ದ ಡೆವಿಲ್ (KD the Devil) . ಧ್ರುವ ಸರ್ಜಾ (Dhruva sarja) ಮತ್ತು ಜೋಗಿ ಪ್ರೇಮ್ (Jogi prema) ಮೊದಲ ಬಾರಿಗೆ ಜೊತೆಯಾಗಿರುವ ಸಿನಿಮಾ. ಸಿನಿಮಾದಲ್ಲಿ ಪ್ರೇಮ್ ಅವರು ಸ್ಟಾರ್`ಗಳ ಸೈನ್ಯವನ್ನೇ ತಂದು ಗುಡ್ಡೆ ಹಾಕ್ಕೊಂಡಿದ್ದಾರೆ ಜೋಗಿ ಪ್ರೇಮ್.
ಈ ಚಿತ್ರದಲ್ಲೀಗ ರಮೇಶ್ ಅರವಿಂದ್ (Ramesh Aravind) ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅಣ್ಣನಾಗಿ ನಟಿಸುತ್ತಿದ್ದಾರೆ.
ಈ ವಿಷಯವನ್ನು ಜೋಗಿ ಪ್ರೇಮ್ ಸ್ವತಃ ಬಹಿರಂಗಗೊಳಿಸಿದ್ದು, ಸದ್ಯದಲ್ಲೇ ರಮೇಶ್ ತಮ್ಮ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. ‘ಕೆಡಿ’ ಚಿತ್ರವು ಸ್ಯಾಂಡಲ್ವುಡ್ ಅಭಿಮಾನಿಗಳಲ್ಲಿ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ ಎನ್ನಬಹುದು. ‘ಕೆಡಿ-ದಿ ಡೆವಿಲ್’ ಚಿತ್ರದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರೀಷ್ಮಾ ಭಾಗದ ಚಿತ್ರೀಕರಣ ಮರಳುಗಾಡಿನಲ್ಲಿ ನಡೆಯುತ್ತಿದ್ದು, ಬಿಡುವಿನ ವೇಳೆಯಲ್ಲಿ ನಟಿ ಮರಳಿನ ಜತೆ ಆಟವಾಡುತ್ತ ಎಂಜಾಯ್ ಮಾಡುತ್ತಿದ್ದಾರಂತೆ. ಮಾರ್ಟಿನ್ ಚಿತ್ರೀಕರಣವೂ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಮಾರ್ಟಿನ್ ಬಿಡುಗಡೆ ನಂತರವೇ ಕೆಡಿ ಬಿಡುಗಡೆ ಎನ್ನಲಾಗಿದೆ.
ಅಭಿಮಾನಿಗಳಿಗೆ ಈಗ ಕಾಡುತ್ತಿರುವ ಪ್ರಶ್ನೆ ಎಂದರೆ ರಮೇಶ್ ಅರವಿಂದ್ ಅಣ್ಣನಾದರೆ ರವಿಚಂದ್ರನ್ ಪಾತ್ರ ಏನು ಅನ್ನೋದು. ಏಕೆಂದರೆ ಪ್ರೇಮ್, ಪಾತ್ರದ ಹೆಸರು ಹೇಳಿದ್ದಾರೆಯೇ ಹೊರತು, ಕಾಳಿದಾಸನಿಗೂ ಅಣ್ಣಯ್ಯಪ್ಪಂಗೂ ಏನು ಲಿಂಕ್ ಅನ್ನೋದನ್ನ ಹೇಳಿಲ್ಲ. ಅಭಿಮಾನಿಗಳಿಗೀಗ ಒಂದೇ ಕುತೂಹಲ. ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಜೋಡಿಯಾಗಿರ್ತಾರೆ ಅನ್ನೋದು ಅವರ ನಂಬಿಕೆ. ಹೀಗಾಗಿಯೇ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಧ್ರುವ ಸರ್ಜಾರ ತಂದೆ ತಾಯಿಯ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋದು ಅವರ ಕಲ್ಪನೆ. ಆದರೆ ಪ್ರೇಮ್ ಕಲ್ಪನೆಯಲ್ಲಿ ಏನಿದೆಯೋ ಬಲ್ಲವರಾರು..?



