ರೈತ ಸಂಘವಾ.. (Raitha sangha) ನಟ ಗಣೇಶ್ (Actor Ganesh) ಅವರಾ.. ಎಂದು ಯಾರ ಮುಂದಾದರೂ ಆಯ್ಕೆ ಮುಂದಿಟ್ಟರೆ.. ಎಂತಹ ಗಣೇಶ್ (Actor Ganesh) ಅಭಿಮಾನಿಯಾದರೂ.. ರೈತ ಸಂಘವನ್ನೇ ಆಯ್ಕೆ ಮಾಡ್ಕೊಳ್ತಾರೆ. ಅದು ರೈತರ ಮೇಲಿರೋ ಕಾಳಜಿ, ಪ್ರೀತಿ ಅಷ್ಟೆ. ಆದರೆ ಚಾಮರಾಜನಗರ ಜಿಲ್ಲೆಯ ಜಕ್ಕಹಳ್ಳಿ ಗ್ರಾಮಸ್ಥರು ರೈತ ಸಂಘ ಮತ್ತು ಗಣೇಶ್ ನಡುವಿನ ಆಯ್ಕೆ ಬಂದಾಗ ಗಣೇಶ್ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೊಂದು ಸ್ಪೆಷಲ್ ಇದೆ.
ಗೋಲ್ಡನ್ ಸ್ಟಾರ್ ಗಣೇಶ್ (Actor golden star Ganesh) ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಪ್ರಕರಣ ಹೈಕೋರ್ಟ್ (Karnataka high court) ಮೆಟ್ಟಿಲು ಕೂಡ ಏರಿದ್ದು, ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ಅವಕಾಶ ನೀಡಿದೆ. ಈ ಮಧ್ಯೆ ನಾವು ಜಮೀನು ಕೊಟ್ಟಿದ್ದೇ ತಪ್ಪು, ಬೇಗ ವಾಪಸ್ ತಗೊಳ್ತೀವಿ ಅಂತಿದೆ ಸರ್ಕಾರ. ಇದರ ನಡುವೆ ರೈತ ಸಂಘ ಕಟ್ಟಡ ನಿರ್ಮಾಣವನ್ನು ವಿರೋಧಿಸುತ್ತಿದೆ. ಆದರೆ ಗ್ರಾಮಸ್ಥರೇ ಗಣೇಶ್ ಪರ ನಿಂತಿರುವುದು ವಿಶೇಷ.
ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಗಣೇಶ್ (Actor Ganesh) ಮನೆ ಕಾಮಗಾರಿ ಮಾಡುತ್ತಿರುವ ಸ್ಥಳಕ್ಕೆ ರೈತ ಸಂಘದ ಕಾರ್ಯಕರ್ತರು ತೆರಳಿ ಪ್ರತಿಭಟನೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಜಕ್ಕಹಳ್ಳಿ ಹಾಗೂ ಮಂಗಲ ಗ್ರಾಮಸ್ಥರು ಘೇರವ್ ಹಾಕಿ ಈ ಸ್ಥಳಕ್ಕೆ ಹೋಗದಂತೆ ತಡೆದು ರೈತ ಸಂಘಟನೆಯ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ. ನಮಗೆ ಗಣೇಶ್ ಅವರ ಕಟ್ಟಡ ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆ ಆಗುತ್ತಿಲ್ಲ. ಇಲ್ಲಿನ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಏನಾದರೂ ನಿಮಗೆ ಮನವಿ ಮಾಡಿದ್ದೇವೆಯೇ? ನಮಗೆ ತೊಂದರೆ ಆದರೆ ನಾವೇ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತೇವೆ. ನಿಮ್ಮ ಅವಶ್ಯಕತೆ ನಮಗಿಲ್ಲ. ನಿಮಗೆ ಜಾಗ ವೀಕ್ಷಣೆ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಘೇರಾವ್ ಹಾಕಿ ಪ್ರತಿಭಟನಾಕಾರರಿಗೆ ಪ್ರಶ್ನೆ ಮಾಡಿದ್ದಾರೆ.
ನಮಗೆ ಯಾವ ಪರಿಸರವಾದಿಗಳು ಪ್ರತಿಭಟಿಸಲು ಹೇಳಿಲ್ಲ. ಕಾಡಂಚಿನ ಜನರಿಗೆ ಮಾತ್ರ ಕಾನೂನು ಕೇಳುವ ಸರ್ಕಾರ ಹಣವಂತರಿಗೆ ಹೇಗೆ ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತು ಎಂದು ತಿಳಿದುಕೊಳ್ಳುವ ಸಲುವಾಗಿ ಬಂದಿದ್ದೇವೆ” ಎಂದು ಗ್ರಾಮಸ್ಥರಿಗೆ ಹೇಳಿದರೂ ಕೂಡ ಅಲ್ಲಿನ ಜನರು ಪ್ರತಿಭಟನೆ ಮಾಡಲು ಬಿಟ್ಟಿಲ್ಲ.
ರಿಯಲ್ ಪ್ರಾಬ್ಲಂ ಆಗಿರುವುದು ಪೊಲೀಸರಿಗೆ. ಹೈಕೋರ್ಟ್ ಪ್ರಕಾರ ಅವರು ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಪಡಿಸುವಂತಿಲ್ಲ. ಇತ್ತ ರೈತ ಸಂಘದವರ (Raitha sangha) ಪ್ರತಿಭಟನೆಗೂ ಅಡ್ಡಿ ಮಾಡುವ ಹಾಗಿಲ್ಲ. ಎಲ್ಲವನ್ನೂ ಮೀರಿ ಗ್ರಾಮಸ್ಥರು ಗಣೇಶ್ (Actor Ganesh) ಪರ ಇದ್ದಾರೆ. ಕೊನೆಗೆ ಪೊಲೀಸರು ರೈತ ಸಂಘದವರನ್ನೇ ಸಮಾಧಾನ ಮಾಡಿ ಕಳುಹಿಸಿದ್ದಾರೆ.



