ಕೆಎಂಎಫ್ (KMF Milk) ಮತ್ತು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲು ದರವನ್ನು 5 ರು. ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ನಂದಿನಿಯ ಎಲ್ಲಾ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 3 ರು. ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರವು ಮಂಗಳವಾರದಿಂದ ಜಾರಿಗೆ ಬಂದಿದೆ. ಪ್ರತಿ ಲೀಟರ್ಗೆ 3 ರು. ಹೆಚ್ಚಳ ಮಾಡಲಾಗಿದೆ.
ಹಾಲಿನ ಹೊಸ ದರ
(KMF Milk) ಹಾಲಿನ ವಿಧ (ಪ್ರತಿ ಲೀಟರ್) ಹಿಂದಿನ ದರ ಪರಿಷ್ಕೃತ ದರ
- ಟೋನ್ಡ್ ಹಾಲು(ಹಳದಿ) 39 ರೂ.ನಿಂದ 42 ರೂ.ಗೆ ಏರಿಕೆ
- ಹೋಮೋಜಿನೈಸ್ಡ್ ಟೋನ್ಡ್ (ನೀಲಿ) 40 ರೂ.ನಿಂದ 43 ರೂ.ಗೆ ಏರಿಕೆ
ಹಸುವಿನ ಹಾಲು(ಹಸಿರು) 43 ರೂ.ನಿಂದ 46 ರೂ.ಗೆ ಏರಿಕೆ
ಶುಭಂ (ಕೇಸರಿ)/ಸ್ಪೆಷಲ್ ಹಾಲು 45 ರೂ.ನಿಂದ 48 ರೂ.ಗೆ ಏರಿಕೆ
- ಮೊಸರು, ಪ್ರತಿ ಕೆಜಿಗೆ 47 ರೂ.ನಿಂದ 50 ರೂ.ಗೆ ಏರಿಕೆ
- ಮಜ್ಜಿಗೆ, ಪ್ರತಿ 200 ಮಿಲಿ ಪೊಟ್ಟಣಕ್ಕೆ 8 ರು. 9 ರೂ.ಗೆ ಏರಿಕೆ
ವಾಸ್ತವ ಏನು ಎಂದು ನೋಡಿದರೆ ಲೆಕ್ಕದಲ್ಲಿರುವುದು ಒಂದು ಲೀಟರ್ ಆದರೂ, ಇದರಲ್ಲಿ ಚಿಕ್ಕ ಪ್ಯಾಕೆಟ್, ಅರ್ಧ ಲೀಟರ್ ಪ್ಯಾಕೆಟ್ ಲೆಕ್ಕಗಳಿಲ್ಲ. ವಿಶೇಷವೆಂದರೆ 3 ರೂ. ಏರಿಕೆಯಗಿರುವುದು ಒಂದು ಲೀಟರ್ ಹಾಲಿನ ಪ್ಯಾಕೆಟ್ ತೆಗೆದುಕೊಂಡಾಗ ಮಾತ್ರ. ಅದೇ ಹಾಲನ್ನು ಅರ್ಧ ಲೀಟರ್ ಪ್ಯಾಕೆಟ್ ಅಥವಾ ಕಾಲು ಲೀಟರ್ ಪ್ಯಾಕೆಟ್ ಲೆಕ್ಕದಲ್ಲಿ ತೆಗೆದುಕೊಂಡರೆ ಲೀಟರ್ ಹಾಲಿಗೆ 4 ರೂ. ಹೆಚ್ಚಳವಾದಂತಾಗುತ್ತದೆ. ಹೌದು..
ಕಾಲು ಲೀಟರ್ ಹಾಲು 11 ರೂ. ಇದ್ದದ್ದು 12 ರೂ. ಆಗಿದೆ. ಅಂದರೆ ಕಾಲು ಲೀಟರ್ ಹಾಲಿಗೇ 1 ರೂ. ಹೆಚ್ಚಳವಾಗಿದೆ. ಅರ್ಧ ಲೀಟರ್ ಹಾಲೂ ಅಷ್ಟೇ.. ಮೊದಲಿದ್ದ ದರಕ್ಕಿಂತ 2 ರೂ. ಏರಿಕೆಯಾಗಿದೆ.
ಸಾಮಾನ್ಯವಾಗಿ ಒಂದು ಲೀಟರ್ ಹಾಲು ತೆಗೆದುಕೊಳ್ಳುವುದು ಹೋಟೆಲ್, ಬೇಕರಿಯವರು ಮಾತ್ರ. ಜನ ಸಾಮಾನ್ಯರು ಖರೀದಿ ಮಾಡುವುದು ಕುಟುಂಬದ ಸದಸ್ಯರ ಸಂಖ್ಯೆಗೆ ತಕ್ಕಂತೆ ಕಾಲು ಅಥವಾ ಅರ್ಧ ಲೀಟರ್ ಹಾಲು. ಆ ಲೆಕ್ಕದಲ್ಲಿ ನೋಡಿದರೆ ಗ್ರಾಹಕರು ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚು ಹಣ ಕೊಡಬೇಕು.
ಹಾಲನ್ನು ಅರ್ಧ ಲೀಟರ್ (KMF Milk half liter) ಪ್ಯಾಕೆಟ್ ಅಥವಾ ಕಾಲು ಲೀಟರ್ ಪ್ಯಾಕೆಟ್ ಲೆಕ್ಕದಲ್ಲಿ ತೆಗೆದುಕೊಂಡರೆ ಲೀಟರ್ ಹಾಲಿಗೆ 4 ರೂ. ಹೆಚ್ಚಳವಾದಂತಾಗುತ್ತದೆ. ಹೌದು..
ಕಾಲು ಲೀಟರ್ (KMF Milk 200 ml ) ಹಾಲು 11 ರೂ. ಇದ್ದದ್ದು 12 ರೂ. ಆಗಿದೆ. ಅಂದರೆ ಕಾಲು ಲೀಟರ್ ಹಾಲಿಗೇ 1 ರೂ. ಹೆಚ್ಚಳವಾಗಿದೆ. ಅರ್ಧ ಲೀಟರ್ ಹಾಲೂ ಅಷ್ಟೇ.. ಮೊದಲಿದ್ದ ದರಕ್ಕಿಂತ 2 ರೂ. ಏರಿಕೆಯಾಗಿದೆ.
ಸಾಮಾನ್ಯವಾಗಿ ಒಂದು ಲೀಟರ್ ಹಾಲು ತೆಗೆದುಕೊಳ್ಳುವುದು ಹೋಟೆಲ್, ಬೇಕರಿಯವರು ಮಾತ್ರ. ಜನ ಸಾಮಾನ್ಯರು ಖರೀದಿ ಮಾಡುವುದು ಕುಟುಂಬದ ಸದಸ್ಯರ ಸಂಖ್ಯೆಗೆ ತಕ್ಕಂತೆ ಕಾಲು ಅಥವಾ ಅರ್ಧ ಲೀಟರ್ ಹಾಲು. ಆ ಲೆಕ್ಕದಲ್ಲಿ ನೋಡಿದರೆ ಗ್ರಾಹಕರು ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚು ಹಣ ಕೊಡಬೇಕು.



