ಭಾಷೆ ಹೇಗಿರಬೇಕು. ಡಾ.ರಾಜ್ ಚಿತ್ರಗಳನ್ನು ನೋಡಿ. ವ್ಯಕ್ತಿತ್ವವನ್ನು ಹೇಗೆ ಬೆಳೆಸಿಕೊಳ್ಳಬೇಕು. ಅಣ್ಣಾವ್ರನ್ನು ನೋಡಿ. ಎಷ್ಟೇ ಸಾಧನೆ ಮಾಡಿದರೂ ವಿನಯವಂತಿಕೆ ಇದ್ದರೆ ಜನ ಹೇಗೆಲ್ಲ ಪ್ರೀತಿಸ್ತಾರೆ. ದೊಡ್ಮನೆಯವರನ್ನು ನೋಡಿ ತಿಳಿದುಕೊಳ್ಳಿ. ಹೀಗೆಲ್ಲ ಜನ ಹೇಳ್ತಾ ಇರ್ತಾರೆ. ಈಗ ಅದೇ ಮಾತನ್ನು ಪ್ರಕಾಶ್ ರೈ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿಯವರಿಗೆ ಹೇಳಿದ್ದಾರೆ. ತಗಡು, ಪುಂಗಿಸ್ಕೋಳ್ಳೋ ಡೈಲಾಗ್ ಬಂದ ನಂತರ ಉಮಾಪತಿ, ಡಾ.ರಾಜ್ ಅವರ ವಿಡಿಯೋ ಹಾಕಿ ಪರೋಕ್ಷವಾಗಿ ದೊಡ್ಮನೆಯೇ ಗ್ರೇಟ್ ಎಂದು ಅಭಿಪ್ರಾಯ ಹೇಳಿದ್ದರು. ಈಗ ಇಬ್ಬರಿಗೂ ಪ್ರಕಾಶ್ ರೈ ಬುದ್ದಿವಾದ ಹೇಳಿದ್ದಾರೆ. ನಟ ಪ್ರಕಾಶ್ ರೈ, ದರ್ಶನ್ ಅವರ ಜೊತೆ ನಟಿಸಿಯೂ ಇದ್ದಾರೆ.
ಪ್ರಕಾಶ್ ರೈ ಪ್ರಕಾರ ʻʻಇಬ್ಬರದೂ ಭಾಷೆ ತಪ್ಪಾಗಿದೆ, ಕೇಳೋಕೆ ಕಷ್ಟವಾಗುತ್ತೆ… ತುಂಬಾ ಜನರು ಸೇರಿರುವ ವೇದಿಕೆ ಮೇಲೆ ಆಡಿರುವ ಅಂಥ ಮಾತುಗಳನ್ನು ಕೇಳುವುದಕ್ಕೆ ಮುಜುಗರ ಆಗುತ್ತೆ. ಈ ಮಾತು ಹೇಳಿರೋದು ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್. ಚಿತ್ರರಂಗದ ಹಿರಿಯ ನಟನ ಸ್ಥಾನಕ್ಕೆ ಏರಿರುವ ಪ್ರಕಾಶ್ ರೈ, ನಾವು ಆಡುವ ಮಾತು ಕೇಳುಗರಿಗೆ ನೋಡುಗರಿಗೆ ಅಸಹ್ಯ ಅನಿಸಬಾರದು. ಜನರ ಪ್ರೀತಿ ಕಲಾವಿದನಿಗೆ ಸಿಕ್ತಾ ಸಿಕ್ತಾ ಹೋದಂತೆ, ಅವನು ಸುಂದರವಾಗಬೇಕೇ ಹೊರತು ಅಸಹ್ಯ ಆಗಬಾರದು. ಯಾರು ಸರಿ, ಯಾರದ್ದು ತಪ್ಪು ಎಂಬುದು ಮುಖ್ಯ ಅಲ್ಲ. ಒಬ್ಬ ಪ್ರೇಕ್ಷಕನಾಗಿ, ಒಬ್ಬ ಪ್ರಜೆಯಾಗಿ, ಒಂದು ಕುಟುಂಬದ ಸದಸ್ಯನಾಗಿ ನನಗೆ ಆ ಭಾಷೆ ಇಷ್ಟ ಆಗಿಲ್ಲʼʼ ಎಂದಿದ್ದಾರೆ.
ದರ್ಶನ್ ಅವರಿಗೆ ಸಿಕ್ಕಿರುವ ಪ್ರೀತಿ ಬೆಲೆ ಕಟ್ಟಲಾಗದ್ದು. ಯಾರೋ ಏನೋ ಮಾತನಾಡ್ತಾರೆ ಅಂತ ಹಾಗೇ ನಾವೂ ಮಾತನಾಡೋಕೆ ಆಗಲ್ಲ. ಜನ ನಮ್ಮನ್ನು ಪ್ರೀತಿಯಿಂದ ಒಂದು ಸ್ಥಾನದಲ್ಲಿ ನಿಲ್ಲಿಸಿರ್ತಾರೆ. ಅವರಿಗೆ ನಾವು ನಟರು, ಕಲಾವಿದರು ಮಾದರಿಯಾಗಬೇಕು. ನಮ್ಮ ಮಾತುಗಳ ಮೂಲಕ, ನಮ್ಮ ಅನುಭವಗಳ ಮೂಲಕ, ನಾವು ಹಂಚಿಕೊಳ್ಳುವ ವಿಷಯದ ಮೂಲಕವೇ ಜನ ನಮ್ಮನ್ನು ಅಳೆಯುತ್ತಾರೆ, ಅರಿಯುತ್ತಾರೆ. ಪ್ರೇಕ್ಷಕರು ಎಲ್ಲರಿಗೂ ಮೇಲ್ಮಟ್ಟದ ಸ್ಥಾನ ಕೊಡಲ್ಲ. ನಿಮ್ಮ ಮಾತುಗಳನ್ನು ಕೇಳುವಷ್ಟು ಜನ ಅಲ್ಲಿದ್ದಾಗ, ಭಾಷೆಯ ಮೇಲೆ ಹಿಡಿತ ಇರಬೇಕು. ಅದಕ್ಕಾಗಿ ನಿಮ್ಮ ಅಂತರಂಗದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ವೇದಿಕೆ ಮೇಲೆ ಯಾವಾಗಲೂ ಚೆನ್ನಾಗಿಯೇ ಮಾತನಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಡಾ.ರಾಜ್ ಅವರ ವ್ಯಕ್ತಿತ್ವದ ಉದಾಹರಣೆ ಕೊಟ್ಟ ಪ್ರಕಾಶ್ ರೈ ಅಪ್ಪಾಜಿ ಅವರು ಹೇಗೆ ಮಾತಾಡ್ತಿದ್ರು? ಅವರ ನಿಲುವುಗಳು ಏನಿದ್ದವು ಎಂಬುದು ಮುಖ್ಯ ಅಲ್ಲ. ಆದರೆ ಅವರ ಭಾಷೆಯಲ್ಲಿದ್ದ ಧೀಮಂತಿಕೆ. ಒಂದು ಘನತೆ, ಒಂದು ಗಾಂಭೀರ್ಯ, ಒಂದು ಪ್ರೀತಿ, ಅಗಾಧ ಜ್ಞಾನ, ಅನುಭವಕ್ಕೆ ತಕ್ಕಹಾಗೆ ಇತ್ತು. ಅದನ್ನು ನಾವೆಲ್ಲರೂ ಪಾಲಿಸಬೇಕು. ನಮ್ಮ ಡಾ ರಾಜ್‌ಕುಮಾರ್ ಹೇಗಿದ್ದರು, ಹೇಗೆ ಮಾತನಾಡಬೇಕು ಎಂದು ಅವರನ್ನು ನೋಡಿಯಾದರೂ ಕಲಿಯಬೇಕು ಎಂದು ಕಿವಿಮಾತು ಹೇಳಿದ್ಧಾರೆ. ದರ್ಶನ್ ಮತ್ತು ಉಮಾಪತಿ.. ಇಬ್ಬರಿಗೂ..



