ಕೆಲವರು ಏನೇ ಮಾಡಿದರೂ ಉದ್ಧಾರ ಆಗ್ತಾ ಇಲ್ಲ. ಎಷ್ಟು ದುಡಿದರೂ ಕೈಲಿ ಹಣ ಇರಲ್ಲ. ಹಿಂಗ್ ಬರುತ್ತೆ. ಹಂಗ್ ಹೋಗುತ್ತೆ ಎಂದು ಅಲವತ್ತುಕೊಳ್ಳುತ್ತಾರೆ. ಆದರೆ ಲಕ್ಷ್ಮಿ ಬರುವುದು ಹೇಗೆಯೋ.. ಹಾಗೆಯೇ ಹೋಗುವುದಕ್ಕೂ ಮುನ್ನ ಕೆಲವು ಸೂಚನೆ ಕೊಡ್ತಾಳೆ. ಆಗಲೇ ಎಚ್ಚೆತ್ತುಕೊಂಡರೆ ದರಿದ್ರ ಲಕ್ಷ್ಮಿಯಿಂದ ಪಾರಾಗಬಹುದು.
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ (Hindu relegioun), ತಾಯಿ ಲಕ್ಷ್ಮಿಯನ್ನು wealth god lakshmi ಸಂಪತ್ತಿನ ಒಡತಿ ಅಥವಾ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ನಂಬುತ್ತಾರೆ. ಪ್ರತಿಯೊಬ್ಬರೂ ಲಕ್ಷ್ಮೀ ಪೂಜೆ ಮಾಡ್ತಾರೆ. ಅಂತಹ ಲಕ್ಷ್ಮಿ ದೇವಿ ಪ್ರಸನ್ನಳಾಗಿದ್ದರೆ ಜೀವನವೂ ಶುಭಲಾಭ. ಬೆನ್ನು ತಿರುಗಿಸಿದರೆ ಕಷ್ಟ ಕಟ್ಟಿಟ್ಟ ಬುತ್ತಿ. . ಲಕ್ಷ್ಮಿ ದೇವಿಯು ಓರ್ವ ವ್ಯಕ್ತಿಯ ಮೇಲೆ ಕೋಪಿಸಿಕೊಂಡಾಗ ಕೆಲವೊಂದು ಸೂಚನೆಗಳನ್ನು ನೀಡುತ್ತಾಳೆ. ಅವುಗಳಿಂದ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬಹುದು.
ಪದೇ ಪದೇ ಆಭರಣ ಕಳೆದುಹೋಗುತ್ತಿದ್ದರೆ..
ಚಿನ್ನ ಮತ್ತು ಬೆಳ್ಳಿಯ ಆಭರಣಗಳು Jewels ಪದೇ ಪದೇ ಕಳೆದು ಹೋಗುವುದು ಶುಭ ಸೂಚನೆ ಅಲ್ಲ. ಕಳ್ಳತನ ಅಥವಾ ಎಲ್ಲೋ ಬಿದ್ದು ಹೋಗುವುದು ಸಹ ಲಕ್ಷ್ಮಿ ದೇವಿ ಕೋಪಗೊಂಡಿದ್ಧಾಳೆ ಎಂಬುದರ ಸಂಕೇತ. ಆದ್ದರಿಂದ ನೀವು ನಿಮ್ಮ ವಸ್ತುಗಳ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು. ಒಂದು ವೇಳೆ ಆಭರಣಗಳು ಕಳೆದು ಹೋದರೆ, ಜೀವನದಲ್ಲಿನ ಆರ್ಥಿಕ ಬಿಕ್ಕಟ್ಟುಗಳು ಶೀಘ್ರದಲ್ಲೇ ದೂರಾಗಿಸುವಂತೆ ಲಕ್ಷ್ಮೀದೇವಿಯನ್ನು ಪ್ರಾರ್ಥಿಸುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ. ಅಂದಹಾಗೆ ಮನೆಯಲ್ಲಿ ಕಳ್ಳತನವಾಗಿರುವ Theft ಕುಟುಂಬಗಳು ಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳನ್ನು ನೋಡಿದ್ದೀರಿ ತಾನೆ..
ನಲ್ಲಿಯಿಂದ ನೀರು ತೊಟ್ಟಿಕ್ಕಬಾರದು.. ಬಿಂದಿಗೆ ತೂತಿರಬಾರದು..
ಮನೆಯಲ್ಲಿ ಕುಬೇರ ಮೂಲೆಯಲ್ಲಿ ನೀರು ಇರಬೇಕು. ಆದರೆ ಮನೆಯ ನಲ್ಲಿಯಿಂದ Tap water leakages ನಿರಂತರವಾಗಿ ನೀರು ತೊಟ್ಟಿಕ್ಕುವುದು ಆರ್ಥಿಕ ನಷ್ಟ ಮತ್ತು ಮಾನನಷ್ಟದ ಸಂಕೇತವಾಗಿದೆ. ನೀರು ತುಂಬಿಡುವ ಬಿಂದಿಗೆ, ಪಾತ್ರೆಗಳೂ ತೂತಾಗಿರಬಾರದು. ಅದರಲ್ಲೂ ಮನೆಯ ಅಡುಗೆಮನೆ ಅಥವಾ ಬಾತ್ ರೂಂ ನಲ್ಲಿ ಈ ರೀತಿ ಸಂಭವಿಸಿದರೆ ತಕ್ಷಣವೇ ಅದನ್ನು ಸರಿ ಮಾಡಿಸಿಕೊಳ್ಳಿ. ಏಕೆಂದರೆ ನೀರು ಹನಿ ಹನಿಯಾಗಿ ತೊಟ್ಟಿಕ್ಕುವುದು ಆರ್ಥಿಕ ನಷ್ಟದ ಅಥವಾ ಹಣದ ನಷ್ಟದ ಸಂಕೇತವಾಗಿದೆ.
ಗಿಡಗಳು ಒಣಗಿಹೋಗುತ್ತಿದ್ದರೆ..
ಹಲವರಿಗೆ ಮನೆಯಲ್ಲಿ ಗಿಡಗಳನ್ನು ಇಟ್ಟುಕೊಳ್ಳುವ ಹುಚ್ಚು ಇರುತ್ತದೆ. ಆದರೆ ಅವುಗಳನ್ನು ಆರೈಕೆ ಮಾಡುವುದಿಲ್ಲ. ಮನೆಯಲ್ಲಿ ಮನಿ ಪ್ಲಾಂಟ್ ಮತ್ತು ತುಳಸಿ ಗಿಡಗಳು ಸದಾ ಒಣಗುತ್ತಿದ್ದರೆ ಅದು ಲಕ್ಷ್ಮಿ ದೇವಿಯ ಅಸಮಾಧಾನದ ಸಂಕೇತವೂ ಹೌದು. ಮನಿ ಪ್ಲಾಂಟ್ ಸಂಪತ್ತನ್ನು ಆಕರ್ಷಿಸುವ ಸಸ್ಯವಾಗಿದ್ದರೆ, ತಾಯಿ ಲಕ್ಷ್ಮಿ ತುಳಸಿ ಸಸ್ಯದಲ್ಲಿ ನೆಲೆಸಿದ್ದಾಳೆ. ನಿಮ್ಮ ಮನೆಯಲ್ಲಿ ಈ ಗಿಡಗಳು ಒಣಗುತ್ತಿದ್ದರೆ ಅದರ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಿ.ಮನೆಯಲ್ಲಿ ಗಿಡಗಳು ಒಣಗದಂತೆ ಎಚ್ಚರವಹಿಸಿ.
ಹಾಲು, ಅನ್ನ ಚೆಲ್ಲಬಾರದು
ಹಾಲು Milk ಅಥವಾ ಅನ್ನ Rice. ಯಾವುದೇ ಆದರೂ ಅದನ್ನು ಚೆಲ್ಲಬಾರದು. ಅನ್ನವನ್ನು ಹಾಲನ್ನೂ ಅನ್ನಪೂರ್ಣೇಶ್ವರಿ ಎಂದು ಪೂಜಿಸುತ್ತಾರೆ. ತಾಯಿ ಲಕ್ಷ್ಮಿಗೆ ಹಾಲಿನಿಂದ ಮಾಡಿದ ಸಿಹಿ ತಿಂಡಿಯನ್ನು ಮತ್ತು ಖೀರ್‌ನ್ನು ನೈವೇದ್ಯವಾಗಿ ನೀಡುವುದು ಅತ್ಯಂತ ಮಂಗಳಕರ. ಯಾವುದೋ ಕಾರಣದಿಂದ ಮನೆಯಲ್ಲಿ ಪದೇ ಪದೇ ಹಾಲು ಚೆಲ್ಲುತ್ತಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಅನ್ನವನ್ನು ಚೆಲ್ಲುವುದೂ ಕೂಡಾ ಲಕ್ಷ್ಮಿದೇವಿಯನ್ನು ಮನೆಯಿಂದ ಹೊರಗೆ ಹೋಗು ಎಂದು ಹೇಳಿದಂತೆ.
ಲಕ್ಷ್ಮಿಯ ವರ ಪಡೆಯುವುದಕ್ಕಾಗಿ..
ಲಕ್ಷ್ಮಿ ದೇವಿಯನ್ನು ನಿಯಮಿತವಾಗಿ ಪೂಜಿಸಿ ಮತ್ತು ಶುಕ್ರವಾರದಂದು ಅವಳಿಗೆ ಖೀರ್‌ನ್ನು ನೈವೇದ್ಯ ಮಾಡಿ
ಶುಕ್ರವಾರದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ.
ತಾಯಿ ಲಕ್ಷ್ಮಿ ಜೊತೆಗೆ, ವಿಷ್ಣುವನ್ನು ಪೂಜಿಸಿ. ದಕ್ಷಿಣಾವರ್ತಿ ಶಂಖದಲ್ಲಿ ನೀರನ್ನು ತುಂಬಿಸಿ ಅಭಿಷೇಕ ಮಾಡಿ.
ಪ್ರತಿದಿನ ಸಂಜೆ ತುಳಸಿಯ ಬಳಿ ಮತ್ತು ಮನೆಯ ಮುಖ್ಯದ್ವಾರದಲ್ಲಿ ದೀಪವನ್ನು ಹಚ್ಚಿ.
ಮನೆಯಲ್ಲಿ ನಗು ಸದಾ ಇರುವಂತೆ ನೋಡಿಕೊಳ್ಳಿ. ಕುದಿಯುವ ಮನಸ್ಸುಗಳಿರುವ ಮನೆಯಲ್ಲಿ ಲಕ್ಷ್ಮಿ ಇರುವುದಿಲ್ಲ.



