ನಟ ದರ್ಶನ್ ನಾನಿನ್ನೂ ಬೆಳೆಯುತ್ತಿರುವ ನಟ, ನಂಗೂ ನಿಮ್ಮ ಬ್ಯಾನರ್ʻನಲ್ಲಿ ಒಂದು ಚಾನ್ಸ್ ಕೊಡಿ ಎನ್ನುತ್ತಿದ್ದರೆ, ಡಾಲಿ ಧನಂಜಯ ನಾಚಿಕೆಯಿಂದ ಮುದುಡಿ ಹೋಗಿದ್ದರು. ಇದೆಲ್ಲ ನಡೆದದ್ದು ಟಗರುಪಲ್ಯ ಪ್ರೀ-ರಿಲೀಸ್ ಈವೆಂಟಿನಲ್ಲಿ. ನಾವು ಇನ್ನು ಚಿಕ್ಕ ನಟ, ನಿಮ್ಮ ಬ್ಯಾನರ್ನಲ್ಲಿ ನನಗೂ ಅವಕಾಶ ಕೊಡಿ. ದಯವಿಟ್ಟು ನಿಮ್ಮ ಬ್ಯಾನರ್ನಲ್ಲಿ ಒಂದು ಚಾನ್ಸ್ ಕೊಡಿ ಖಂಡಿತ ಬಂದು ಸಿನಿಮಾ ಮಾಡ್ಯಿನಿ. ನಮಗೆ ಅದು ಇದು ಅಂತಿಲ್ಲ. ಕೆಲಸ ಮಾಡುತ್ತೇನೆ, ನಾನು ಇನ್ನೂ ಬೆಳೆಯುತ್ತಿರುವ ನಟ ಎಂದ ದರ್ಶನ್, ಡಾಲಿ ಧನಂಜಯ ಅವರನ್ನು ಹೊಗಳುತ್ತಿದ್ದರೆ, ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಿದ್ದರು.
ಟಗರು ಪಲ್ಯ. ಡಾಲಿ ಪಿಕ್ಚರ್ಸ್ ನಿರ್ಮಾಣದ 3ನೇ ಸಿನಿಮಾ. ಹೀರೋ ನಾಗಭೂಷಣ್. ಹೀರೋಯಿನ್ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್. ಅಮೃತಾ ತುಂಬಾ ಚೆನ್ನಾಗಿ ನಟಿಸಿದ್ದಿಯ. ನಮ್ಮದು ಚಿಕ್ಕ, ಚೊಕ್ಕ, ನೀಟ್ ಆದ ಇಂಟಸ್ಟ್ರೀ. ಇಲ್ಲಿಗೆ ನಿನಗೆ ಆತ್ಮೀಯ ಸ್ವಾಗತ ಎಂದ ದರ್ಶನ್, ಅಮೃತಾ ಅವರನ್ನು ಚಿತ್ರರಂಗಕ್ಕೆ ಸ್ವಾಗತಿಸಿದರು. ಚಿತ್ರಕ್ಕೆ ಟಗರು ಪಲ್ಯ ಅನ್ನೋ ಹೆಸರಿಡೋ ಬದಲು ಟಗರು ಖಲೀಜಾ.. ಟಗರು ಬೋಟಿ ಅಂತಾ ಹೆಸರಿಡೋಕೆ ಆಗ್ತಾ ಇರಲಿಲ್ವಾ ಅಂತಾ ತಮಾಷೆ ಕೂಡಾ ಮಾಡಿದರು ದರ್ಶನ್.
ನಮ್ಮ ಸೋಗಡಿನ ಸಿನಿಮಾ ಇಲ್ಲ ಅಂತಿರಾ.. ಆದರೆ ಅಂತ ಸಿನಿಮಾ ಮಾಡಿದರೇ ನೊಡಲ್ಲ. ಇದು ಎಲ್ಲಾ ಸೊಗಡು ತುಂಬಿರುವ ಸಿನಿಮಾ. ಅದು ಟ್ರೇಲರ್ನಲ್ಲೆ ಕಾಣುತ್ತಿದೆ. ಜನ ಕೇಳ್ತಾರೆ ಹೀರೋಗಳು ಏನ್ ಮಾಡ್ತಿದ್ದಾರೆ ಎಂತ. ಅವರಿಗೆ ಇಂದು ನಾನು ಎದೆ ಮುಟ್ಟಿಕೊಂಡು ಹೇಳ್ತಿನಿ. ಕೆಲವು ಹೀರೋಗಳು ಪ್ರೋಡ್ಯೂಸ್ ಮಾಡ್ತಿದ್ದಾರೆ. ಧನಂಜಯ್ಗೆ ನಾನು ಹೇಳೋದು ಏನೆಂದರೆ ಡಾಲಿ ಫಿಕ್ಚರ್ ದೊಡ್ಡ ಪ್ರೋಡಕ್ಸನ್ ಕಂಪನಿಯಾಗಲಿ. ಇದು ಅವರ ಮೂರನೇ ಸಿನಿಮಾ. ಇದರಲ್ಲಿ ಎರಡು ವಿಧಗಳಿವೆ. ಹಠದಿಂದ ಬೆಳೆಯೋದು ಬೇರೆ, ಛಲದಿಂದ ಬೆಳೆಯೊದು ಬೇರೆ. ಹಠದಿಂದ ಬೆಳೆಯುವುದಕ್ಕಿಂತ ಛಲದಿಂದ ಬೆಳೆಯಲಿ. ಅಂತಹ ಛಲ ಇರುವುದಕ್ಕೆ ಇವರು ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಡಾಲಿ ಧನಂಜಯ ಅವರನ್ನ ಹೊಗಳಿದ್ದಾರೆ ನಟ ದರ್ಶನ್.
ಟಗರು ಪಲ್ಯ ಚಿತ್ರದಲ್ಲಿ ನಾನು ಹೀರೋ. ಅಮೃತಾ ಹೀರೋಯಿನ್. ನಾವು ಪ್ರಧಾನ ಪಾತ್ರದಲ್ಲಿದ್ದರೂ, ಸಿನಿಮಾ ನೋಡಿದ ಮೇಲೆ ಚಿತ್ರವನ್ನು ಆವರಿಸಿಕೊಳ್ಳೋದು, ನಿಮಗೆ ಇಷ್ಟವಾಗೋದ ರಂಗಾಯಣ ರಘು ಮತ್ತು ತಾರಾ ಎನ್ನುವ ಮೂಲಕ ನಾಗಭೂಷಣ್ ಬೇರೆಯದೇ ಮಾತು ಹೇಳಿದರು. ಇದೇ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ದೊಡ್ಡ ದೊಡ್ಡ ನಟರ ಬೆಂಬಲ ಇರುವುದು ವಿಶೇಷ. ಅಮೃತಾ ಪ್ರೇಮ್ ನಾಯಕಿಯಾಗಿರುವ ಮೊದಲ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಡಾಲಿ ಧನಂಜಯ. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ನಟ ದರ್ಶನ್. ವೇದಿಕೆಯಲ್ಲಿ ನಿಂತು ಶುಭ ಹಾರೈಸಿದ್ದು ನಟ ನೀನಾಸಂ ಸತೀಶ್. ತಂದೆ ಪ್ರೇಮ್ ಅವರ ಆಶೀರ್ವಾದದೊಂದಿಗೆ ಟಗರು ಪಲ್ಯ ಚಿತ್ರದ ಸೂರ್ಯಕಾಂತಿಯಾಗಿದ್ದಾರೆ ಅಮೃತಾ.
ಅಮೃತಾ ಅವರ ಜೊತೆ ನಟಿಸಿರುವ ರಂಗಾಯಣ ರಘು, ತಾರಾ ಅವರಂತಹ ಹಿರಿಯರು ಅಮೃತಾ ಅವರ ನಟನೆಯನ್ನು ಹೊಗಳಿದರೆ, ಅಮೃತಾ ಅವರಿಗಿಂತಲೂ ಹೆಚ್ಚು ಭಾವುಕರಾಗಿದ್ದು ನಟ ಪ್ರೇಮ್. ಟಗರುಪಲ್ಯ ಚಿತ್ರಕ್ಕೆ ಅಮೃತಾ ಅವರನ್ನು ನಾಯಕಿಯನ್ನಾಗಿ ಮಾಡ್ತೇವೆ ಎಂದಾಗ ಡಾಲಿ ಧನಂಜಯ ಅವರಿಗೆ ಯೋಗ್ಯತೆ, ಅರ್ಹತೆ ಇದ್ದರೆ ಮಾತ್ರ ಅವಕಾಶ ಕೊಡು ಎಂದಿದ್ದರಂತೆ ಪ್ರೇಮ್. ಪ್ರೇಮ್ ಅವರು ಇಟ್ಟುಕೊಂಡಿದ್ದ ಭಯವನ್ನೂ ಮೀರಿ ಅತ್ಯತ್ತಮವಾಗಿ ನಟಿಸಿದ್ದಾರೆ ಎನ್ನುವುದು ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ ಹೇಳಿದ ಮಾತು.
ಚಿತ್ರವನ್ನು ನೀನಾಸಂ ಸತೀಶ್ ಈಗಾಗಲೇ ನೋಡಿದ್ದಾರಂತೆ. ಅದೇ ಮಾತನ್ನು ಹೇಳಿದ ಸತೀಶ್ ಅಮೃತಾ ಅವರನ್ನು ಹೊಗಳಿದರು. ರಂಗಾಯಣ ರಘು ಮತ್ತು ತಾರಾ ಆಕ್ಟಿಂಗ್ ಮೆಚ್ಚಿಕೊಂಡರು. ತಾರಾ ಅವರನ್ನು ನಟಿ ರಾಕ್ಷಸಿ ಎಂದರು.
ನಟಿ ಅಮೃತಾ ಅವರಿಗಂತೂ ನಟ ಡಾಲಿ ನಿರ್ಮಾಣದ ಚಿತ್ರದಲ್ಲಿ ನಟಿಸಿರುವುದು ಹಾಗೂ ದರ್ಶನ್ ಅವರು ಮೊದಲ ಚಿತ್ರದ ಟ್ರೇಲರ್ ಲಾಂಚ್ ಮಾಡಿರುವುದನ್ನು ಖುಷಿಯಾಗಿ ಹೇಳಿಕೊಂಡರು. ಚಿತ್ರದ ನಿರ್ದೇಶಕ ಉಮೇಶ್ ಕೆ.ಕೃಪಾ ಅವರ ಡೈರೆಕ್ಷನ್ನಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.



