ಹಾಸನ ಪೆನ್ ಡ್ರೈವ್ ಪ್ರಕರಣ ದಿನೇ ದಿನೇ ಗೋಜಲು ರೂಪ ಪಡೆದುಕೊಳ್ಳುತ್ತಿದೆ. ಪ್ರಜ್ವಲ್ ಮಾಡಿದ್ದು ಸುಳ್ಳು ಎಂದಾಗಲೀ.. ಕಾಲ್ಪನಿಕವಾಗಿ ಸೃಷ್ಟಿಸಿದ್ದು ಎಂದಾಗಲೀ.. ಯಾರೂ ಹೇಳುತ್ತಿಲ್ಲ. ಆದರೆ.. ಆ ಪೆನ್ ಡ್ರೈವ್ ವಿಡಿಯೋಗಳು ಮುಖವನ್ನು ಕೂಡಾ ಮಾಸ್ಕ್ ಮಾಡದೆ ರಿಲೀಸ್ ಮಾಡಿದ್ದು ಏಕೆ ಎನ್ನುವ ಪ್ರಶ್ನೆಯೇ ಎಲ್ಲರದ್ದು.
ಪ್ರಜ್ವಲ್ ಮಾಡಿದ್ಧಾನೆ ಎನ್ನಲಾದ ಹಲ್ಕಾ ಕೆಲಸ ನೂರಾರು ಕುಟುಂಬಗಳನ್ನು ಒಡೆದು ಚೂರು ಚೂರು ಮಾಡಿದೆ. ಇದರ ನಡುವೆಯೇ ದೇವರಾಜೇ ಗೌಡ ಸ್ಫೋಟಕ ಹೇಳಿಕೆ ಕೊಟ್ಟಿದ್ಧಾರೆ. ದೇವರಾಜೇ ಗೌಡ ಅವರ ಮೇಲೂ ಈಗ ಅತ್ಯಾಚಾರ ಆರೋಪವಿದ್ದು, ಸದ್ಯಕ್ಕೆ ಅವರು ಕಸ್ಟಡಿಯಲ್ಲಿದ್ಧಾರೆ. ಈ ಮಧ್ಯೆ ವಿಚಾರಣೆಗೆ ಕರೆದೊಯ್ಯುವಾಗ ಮಾಧ್ಯಮಗಳಿಗೆ ಸಿಕ್ಕಿರುವ ದೇವರಾಜೇ ಗೌಡ ʻ ಪೆನ್‌ಡ್ರೈವ್ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನ್ನನ್ನು ಕರೆಸಿ ಮಾತನಾಡಿದ್ದರು. ಕಾರ್ತಿಕ್‌ನಿಂದ ಪೆನ್‌ಡ್ರೈವ್ ತರಿಸಿಕೊಂಡು ಎಲ್ಲಾ ಮಾಹಿತಿ ಪಡೆದಿದ್ದರುʼʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ʻ ಪ್ರಜ್ವಲ್ ರೇವಣ್ಣ ಕುರಿತ ಪೆನ್‌ಡ್ರೈವ್ ಹಂಚಿಸಿದ್ದು ಕುಮಾರಸ್ವಾಮಿ ಎಂದು ಹೇಳಿದರೆ 100 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. ಏನೇ ಸಮಸ್ಯೆಯಾದರೂ ನಾನು ನಿನ್ನನ್ನು ರಕ್ಷಿಸುತ್ತೇನೆ ಎಂದು ಡಿಕೆಶಿ ಭರವಸೆ ನೀಡಿದ್ದರಂತೆ.
ಪೊಲೀಸರ ವಶದಲ್ಲಿರುವ ದೇವೇರಾಜೇಗೌಡ ಈ ಮಾತು ಹೇಳಿರುವುದು ಡಿಕೆ ಶಿವಕುಮಾರ್ ಅವರ ಮೇಲೆಯೇ ಸಂಶಯದಿಂದ ನೋಡುವಂತೆ ಮಾಡಿದೆ. ಪೆನ್‌ಡ್ರೈವ್ ಪ್ರಕರಣಕ್ಕೆ ನಾಲ್ವರು ಸಚಿವರನ್ನು ನೇಮಕ ಮಾಡಿದ್ದರು. ಚೆಲುವರಾಯ ಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಮತ್ತೊಬ್ಬ ಸಚಿವರ ತಂಡ ರಚಿಸಿದ್ದರು. ರಂತರವಾಗಿ ನನ್ನ ಮೇಲೆ ಒತ್ತಡ ತರುವ ಪ್ರಯತ್ನವನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ ಎಂದು ದೇವೇರಾಜೇ ಗೌಡ ಆರೋಪಿಸಿದ್ಧಾರೆ.
ಪ್ರಧಾನಿ ಮೋದಿ, ಬಿಜೆಪಿ ಹಾಗೂ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಈ ಪ್ರಕರಣ ನಡೆದಿದೆ. 100 ಕೋಟಿ ರೂಪಾಯಿ ಆಫರ್ ಕೊಟ್ಟು, 5 ಕೋಟಿ ಅಡ್ವಾನ್ಸ್ ಹಣವನ್ನು ಬೌರಿಂಗ್ ಕ್ಲಬ್‌ನ 110ನೇ ನಂಬರ್ ಕೊಠಡಿಗೇ ಕಳಿಸದ್ದರು. ಚೆನ್ನರಾಯಪಟ್ಟಣದ ಗೋಪಾಲಸ್ವಾಮಿ ಅವರನ್ನ ಸಂಧಾನಕ್ಕೆ ಕಳುಹಿಸಿದ್ದರು. ಶಿವರಾಮೇ ಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಹಾಗೂ ಗೋಪಾಲಸ್ವಾಮಿ ಬಳಿ 5 ಕೋಟಿ ರೂಪಾಯಿ ಕ್ಯಾಷ್ ಕೊಟ್ಟು ಕಳುಹಿಸಲಾಗಿತ್ತು ಎನ್ನುವುದು ದೇವರಾಜೇ ಗೌಡರ ಆರೋಪ.



