ಹಳೆಯ ಕಾಲದ ನಾಣ್ಯ, ವಿಗ್ರಹ, ಪುರಾತನ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೆ, ಹಳೆಯ ನೋಟುಗಳಿಗೂ ಈ ಬೇಡಿಕೆ ಇದೆಯಾ ಎಂದರೆ ಹೌದು ಎಂಬ ಉತ್ತರ ಸಿಗುತ್ತದೆ. 5 ರೂಪಾಯಿ ನೋಟು ಅದೃಷ್ಟ ಲಕ್ಷ್ಮಿಯಾಗಬಹುದು. ಹಳೆಯ 5 ರೂಪಾಯಿ ನೋಟಿನಿಂದ ಕೋಟ್ಯಧಿಪತಿಯಾಗುವುದು ಹೇಗೆ ಎಂದರೆ ಈ ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳಿ.
ಟ್ರಾಕ್ಟರ್ ಗುರುತು ಇದ್ದ 5 ರೂ. ನೋಟಿಗೆ 30 ಸಾವಿರ ರೂ.
ಎಲ್ಲ ಹಳೆಯ 5 ರೂ. ನೋಟುಗಳಿಗೂ ಈ ಅದೃಷ್ಟ ಇರುವುದಿಲ್ಲ. ಆದರೆ ನೋಟಿನ ಮೇಲೆ ಟ್ರ್ಯಾಕ್ಟರ್ ಗುರುತು ಇದ್ದರೆ, ಆ ನೋಟನ್ನು ಆನ್ ಲೈನಿನಲ್ಲೇ ಮಾರಾಟ ಮಾಡಬಹುದು. ಕಾಯಿನ್ ಬಜಾರ್ ಡಾಟ್ ಕಾಂ (coinbazzar.com) ವೆಬ್ ಸೈಟಿನಲ್ಲಿ ಟ್ರಾಕ್ಟರ್ ಗುರುತಿರುವ ಹಳೆಯ ನೋಟುಗಳಿಗೆ ಬೇಡಿಕೆ ಇದೆ.
ವೈಷ್ಣೋದೇವಿ ಚಿಹ್ನೆ ಇರುವ 10ರೂ. ನಾಣ್ಯಗಳಿಗೆ ಲಕ್ಷ ಲಕ್ಷ..!
ಡಿಮಾನಿಟೈಸೇಷನ್ ಆಗುವುದಕ್ಕೂ ಮೊದಲು ವೈಷ್ಣೋದೇವಿ ಚಿಹ್ನೆ ಇದ್ದ 10ರೂ. ನಾಣ್ಯಗಳು ಬಂದಿದ್ದವು. ಅಂತಹ ನಾಣ್ಯಗಳು ನಿಮ್ಮಲ್ಲಿ ಇದ್ದರೆ ಲಕ್ಷ ಲಕ್ಷ ದುಡಿಯಬಹುದು.
ಆ ೧ ರೂ. ನೋಟಿಗೆ 45ಸಾವಿರ ರೂ.
ನಿಮ್ಮ ಬಳಿ 1979-80 ರ ಅವಧಿಯಲ್ಲಿ ಬಿಡುಗಡೆಯಾಗಿದ್ದ 1 ರೂ. ನೋಟುಗಳಿದ್ದರೆ ಆ ನೋಟಿನ ಮೌಲ್ಯ ೪೫ ಸಾವಿರ ರೂ. ಎಂದು ನಿಗದಿ ಮಾಡಲಾಗಿದೆ. ಆದರೆ, ಒಂದೇ ಒಂದು ಷರತ್ತಿದೆ. ಆ ಅವಧಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿದ್ದ ಹೀರೂಭಾಯ್ ಎನ್ ಪಟೇಲ್ ಸಹಿ ಇರಬೇಕು. ಆ ಸಹಿ ಇದ್ದ ೧ ರೂ. ನೋಟಿಗೆ ಮಾತ್ರ ೪೫ ಸಾವಿರ ರೂ. ಮೌಲ್ಯವಿದೆ. ಹೀರೂಭಾಯ್ ಎನ್ ಪಟೇಲ್ ಸಹಿಗೇಕೆ ಇಷ್ಟು ಡಿಮ್ಯಾಂಡ್ ಎಂಬ ಪ್ರಶ್ನೆಗೆ ಉತ್ತರ ಇಲ್ಲ.
ಹಳೆಯ 25ಪೈಸೆ ಬೆಳ್ಳಿ ನಾಣ್ಯಕ್ಕೆ ಒಂದೂವರೆ ಲಕ್ಷ ರೂ.
ಇನ್ನು ಹಳೆಯ ಕಾಲದ 25 ಪೈಸೆ ಬೆಳ್ಳಿ ನಾಣ್ಯ ಇದ್ದರೆ ಒಂದೂವರೆ ಲಕ್ಷ ರೂ. ಕೊಟ್ಟು ಖರೀದಿಸುವವರೂ ಇದ್ದಾರೆ. ಹಾಗೆಂದು ಹೊಸದಾಗಿ 25ಪೈಸೆ ನಾಣ್ಯ ಮಾಡಿಸಿ ಮಾರಾಟ ಮಾಡುವ ವಂಚನೆಯ ಪ್ರಯತ್ನ ಬೇಡ. ಅದು ಹಳೆಯದ್ದೋ.. ಹೊಸದ್ದೋ ಎಂದು ಪರಿಶೀಲಿಸುವ ತಂತ್ರಜ್ಞಾನವೂ ಇದೆ.
ಹಳೆಯ ನಾಣ್ಯ, ನೋಟುಗಳಲ್ಲಿ 786ನಂಬರ್ ಇದ್ದರೆ..
786 ಸಂಖ್ಯೆಯು ಇಸ್ಲಾಂ ಧರ್ಮದಲ್ಲಿ ಮಹತ್ವದ್ದಾಗಿದೆ ಮತ್ತು ಈ ಸಂಖ್ಯೆಯನ್ನು ಹೊಂದಿರುವ ನೋಟುಗಳಿಗೆ ಸಂಗ್ರಹಕರಿಂದ ಬೇಡಿಕೆ ಇದೆ. ನಿಮ್ಮ ಹಳೆಯ ರೂ. 5 ನೋಟಿನಲ್ಲಿ ಈ ಸರಣಿ ಸಂಖ್ಯೆ ಇದ್ದರೆ, ಅದರ ಮೌಲ್ಯ ಇಂದಿನ ದಿನಗಳಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಇರುತ್ತದೆ. 5 ರೂ. ನೋಟುಗಳಷ್ಟೇ ಅಲ್ಲ, 1 ರೂ, 2 ರೂ, 5 ರೂ, 10 ರೂ. 20 ರೂ, 50 ರೂ. 100 ರೂ.. ಹೀಗೆ ಯಾವುದೇ ನೋಟಾದರೂ ಸರಿ, ೭೮೬ ನಂಬರ್ ಇದ್ದರೆ ಆ ನೋಟುಗಳಿಗೆ ಭರ್ಜರಿ ಬೇಡಿಕೆ ಇದೆ.
ವಿಶೇಷ ಸೂಚನೆ : ಇಂತಹ ನೋಟುಗಳು, ನಾಣ್ಯಗಳು ನಮ್ಮಲ್ಲಿ ಇವೆ. ನೀವು ಇಷ್ಟು ಲಕ್ಷ ಕೊಟ್ಟರೆ ಕೊಡುವುದಕ್ಕೆ ನಾವು ಸಿದ್ಧ ಎಂದು ಮೋಸ ಮಾಡುವವರೂ ಇದ್ದಾರೆ. ಅಂತಹ ವಂಚಕರ ಬಳಿ ಹೋದರೆ ನಿಮ್ಮ ಬಳಿ ಇದ್ದದ್ದನ್ನೂ ಕಿತ್ತುಕೊಂಡು ನಾಮ ಹಾಕುತ್ತಾರೆ. ಇಂತಹ ವ್ಯಾಪಾರಗಳಿಗೆ ಆರ್ ಬಿ ಐ ಸಪೋರ್ಟ್ ಇರುವುದಿಲ್ಲ. ಖೋಟಾ ನೋಟುಗಳನ್ನೇ ಸೃಷ್ಟಿಸುವವರಿಗೆ ಇಂತಹವುಗಳನ್ನು ಸೃಷ್ಟಿಸುವುದು, ಹಳೆಯದರಂತೆ ಕಾಣುವಂತೆ ಮಾಡುವುದೂ ಗೊತ್ತಿರುತ್ತದೆ. ನಿಮ್ಮ ಬಳಿ ಇದ್ದರೆ, ಅವುಗಳನ್ನು ಆನ್ ಲೈನ್ ಮೂಲಕವೇ ಫೋಟೋ ಹಾಕಿ ಮಾರಬಹುದು, ಅಷ್ಟೆ. ಅವುಗಳನ್ನು ಹುಡುಕಿ ದುಡ್ಡು ಮಾಡುತ್ತೇವೆ ಎಂಬ ಹುಂಬಸಾಹಸ ಬೇಡ. ಅಂತಹ ವ್ಯವಹಾರಗಳನ್ನು ಮಾಡಿ ದುಡ್ಡು ಮಾಡಿದವರು ಇಲ್ಲ.



