ಒಬ್ಬನೇ ಯುವ.. ಒಬ್ಬನೇ ಶಿವ.. : ʻಯುವʼ ರಾಜ ಕುಮಾರ್ ಮೊದಲ ಹಾಡು ಇಷ್ಟ ಆಯ್ತಾ..?
ಒಬ್ಬನೇ ಶಿವ..
ಒಬ್ಬನೇ ಯುವ..
ಇನ್ಮೇಲೆ ಇವ..
ಜೊತೆ ನಿಲ್ಲುವ..
ಈ ಸ್ವಾಗು.. ಸುಮ್ನೆ ಬಂದಿದ್ದಲ್ಲ..
ಈ ರೇಝು.. ಎಂದು ನಿಲ್ಲೋದಿಲ್ಲ..
ಪವರು ಕಟ್ಟಾಗಲ್ಲ.. ಒಬ್ಬನೇ ಶಿವ..
ಯುವ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಹಾಡು ನಿರೀಕ್ಷೆಯಂತೆಯೇ ಕ್ರೇಜ್ ಹುಟ್ಟುಹಾಕಿದೆ. ಒಬ್ಬನೇ ಶಿವ.. ಒಬ್ಬನೇ ಯುವ ಹಾಡು ಟ್ರೆಂಡ್ ಸೃಷ್ಟಿಸಿದೆ. ಯೂಟ್ಯೂಬಿನಲ್ಲಿ ನಂ.೧ ಟ್ರೆಂಡಿಂಗ್ʻನಲ್ಲಿರೋ ಹಾಡನ್ನು ನೋಡಿದವರ ಸಂಖ್ಯೆ ೩೦ ಲಕ್ಷಕ್ಕೂ ಹೆಚ್ಚು. ಇದು ಹೊಸ ಹೀರೋನ ಮೊದಲ ಚಿತ್ರ ಎನ್ನುವುದು ವಿಶೇಷ.
ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೇ ಹಾಡಿದ್ಧಾರೆ. ಯುವ ಚಿತ್ರದ ಮೂಲಕ ದೊಡ್ಮನೆಯ ಯುವ ರಾಜಕುಮಾರ್ ಹೀರೋ ಆಗುತ್ತಿರುವುದು ವಿಶೇಷ. ಸಪ್ತಮಿಗೌಡ ನಾಯಕಿಯಾಗಿರುವ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ ಕೂಡಾ ನಟಿಸಿದ್ಧಾರೆ.
ಡೌಟೇ ಇಲ್ಲದೆ ಇದು ನಾಯಕನ ಎಂಟ್ರಿ ಸೀನ್ ಅಥವಾ ಸೈಲೆಂಟ್ ಆಗಿದ್ದ ಯುವ, ಮೊದಲ ಬಾರಿ ನೊಂದವರ ಜೊತೆ ನಿಲ್ಲುವಂತಹ ಸೀನ್ ಎನ್ನಬಹುದು. ಹಾಡಿನಲ್ಲಿ ಬಿಲ್ಡಪ್ಪುಗಳಿವೆ. ಅಪ್ಪು ಮತ್ತು ಶಿವಣ್ಣ ಇಬ್ಬರ ಡ್ಯಾನ್ಸ್ʻನ್ನೂ ಮೀರಿಸುವ ಝಲಕ್ಕುಗಳಿವೆ.
ಹಾಡಿನಷ್ಟೇ ಫೇಮಸ್ ಆಗಿರುವುದು ಶಿವಣ್ಣನ ಜೊತೆ ಯುವ ಹಾಡಿರುವ ಡ್ಯಾನ್ಸಿನ ಝಲಕ್ ವಿಡಿಯೋ. ಮೊದಲ ಹಾಡು ರಿಲೀಸ್ ಆಗಿದ್ದು, ಡಾ.ರಾಜ್ ಅವರ ತವರೂರು ಚಾಮರಾಜನಗರದಲ್ಲಿ. ಐದು ತಾಲೂಕಿನ ಐವರು ವ್ಯಕ್ತಿಗಳಿಂದ ಯುವ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ಎಲ್ಲ ವಯೋಮಾನದ ಐವರಿಂದ ಯುವ ಚಿತ್ರದ ಫಸ್ಟ್ ಸಾಂಗ್ ಬಿಡುಗಡೆ ಮಾಡಿದ್ದಾರೆ.
ಚಾಮರಾಜೇಶ್ವರನಿಗೆ ನಮನ ಸಲ್ಲಿಸಿ ವೇದಿಕೆ ಏರಿದ ಯುವ ಅವರನ್ನು ಚಾಮರಾಜನಗರದ ಅಭಿಮಾನಿಗಳು ಹೃದಯತುಂಬಿ ಸ್ವಾಗತಿಸಿದ್ಧಾರೆ.
ಈ ಲಿರಿಕಲ್ ಹಾಡು ಶುರುವಾಗುವುದೇ ಪುನೀತ್ ರಾಜಕುಮಾರ್ ಅವರ ಸ್ಮರಣೆಯೊಂದಿಗೆ. ಪುನೀತ್ ರಾಜಕುಮಾರ್ ಲೈವ್ಸ್ ಆನ್ ಎಂದು ತೋರಿಸುವ ಮೂಲಕ ಈಗಲೂ ಪುನೀತ್ ಜೀವಂತ ಇದ್ದಾರೇನೋ ಎನ್ನಿಸಿಬಿಡುತ್ತದೆ. ಇನ್ನು ಕಥೆ ಕಾಲ್ಪನಿಕವಲ್ಲ, ನೈಜ.. ದೃಢ ಮತ್ತು ಧೈರ್ಯ.. ಯವ ಈಸ್ ಇಂಜೂರಿಯಸ್ ಟು ಎಂದು ಅಡಿಬರಹ ಕೊಟ್ಟು ಹಾಡಿನ ಕೃಏಜ್ ಹೆಚ್ಚಿಸಿದ್ದಾರೆ ಸಂತೋಷ್ ಆನಂದರಾಮ್.



