ಇಲ್ಲಿ ಹಿಟ್ ಆದ ಚಿತ್ರಗಳು ಅಲ್ಲಿ ಗೆಲ್ಲುವುದು ಹೊಸದಲ್ಲ. ಫ್ಲಾಪ್ ಆದ ಚಿತ್ರಗಳೂ ಅಲ್ಲಿ ಗೆದ್ದಿವೆ. ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಸಿನಿಮಾ 2021ರಲ್ಲಿ ರಿಲೀಸ್ ಆಗಿತ್ತು. ಇಲ್ಲಿ ಹೇಳಿಕೊಳ್ಳುವಂತ ಹಿಟ್ ಏನೂ ಆಗಿರಲಿಲ್ಲ. ಹೀಗೆ ಬಂದು ಹಾಗೆ ಹೋಗಿದ್ದ ಸಿನಿಮಾ ರೈಡರ್ (Raider). ಸಿಂಪಲ್ಲಾಗ್ ಹೇಳ್ಬೇಕಂದ್ರೆ ಫ್ಲಾಪ್ ಮೂವಿ. ಆದರೆ ಅದೇ ರೈಡರ್ (Raider) ಹಿಂದಿಯಲ್ಲಿ ದಾಖಲೆ ಬರೆದಿದೆ. ದೊಡ್ಡ ಮಟ್ಟದ ಹಿಟ್ ಆಗಿದೆ.
ವಿಜಯ್ ಕುಮಾರ್ ಕೊಂಡ ನಿರ್ದೇಶಿಸಿದ್ದ ರೈಡರ್ (Raider) ಸಿನಿಮಾದಲ್ಲಿ ಕಶ್ಮೀರ (Actress Kashmira) ನಾಯಕಿಯಾಗಿದ್ದರು. ನಿಖಿಲ್ (Nikhil Kumaraswamy) ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಟಿಸಿದ್ದ ಸಿನಿಮಾವನ್ನು ಲಹರಿಯವರು ನಿರ್ಮಾಣ ಮಾಡಿದ್ದರು. ನಂತರ ತೆಲುಗಿಗೂ ರಿಲೀಸ್ ಆಗಿದ್ದ ರೈಡರ್ (Raider), ಆಮೇಲೆ ಹಿಂದಿಗೆ ಡಬ್ (dubbed hindi movie) ಆಗಿತ್ತು. ಹಾಗೆ ಹಿಂದಿಯಲ್ಲಿ ಡಬ್ ಆದ ಚಿತ್ರವೇ ದಾಖಲೆ ಬರೆದಿದೆ.
ಕನ್ನಡ ಸಿನಿಮಾಗಳು ಕನ್ನಡದಲ್ಲಿ ಈ ಪ್ರಮಾಣದ ವೀಕ್ಷಣೆಗಳಿಸುವುದು ತುಂಬ ವಿರಳ. ಆದರೆ ರೈಡರ್ ಸಿನಿಮಾದ ಹಿಂದಿ ವರ್ಷನ್ (dubbed hindi movie) 100 ಮಿಲಿಯನ್ (100 million views) ವೀಕ್ಷಣೆ ಕಂಡಿದೆ. ಸದ್ಯಕ್ಕೆ ನಿಖಿಲ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಲೈಕಾ ಪ್ರೊಡಕ್ಷನ್ (Lyca productions) ನಿರ್ಮಾಣ ಮಾಡುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು, ಯುಕ್ತಿ ಥರೇಜಾ (Actrress Yukthi Thareja) ನಾಯಕಿಯಾಗಿದ್ದಾರೆ. ಆ ಸಿನಿಮಾವು ಹಿಂದಿಯಲ್ಲೂ ರಿಲೀಸ್ ಆಗಲಿದೆ. ನಿಖಿಲ್ ಅವರ ‘ರೈಡರ್’ (Raider) ಸಿನಿಮಾ ಉತ್ತರ ಭಾರತದಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿರುವುದರಿಂದ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾಗೂ ಇದರಿಂದ ಲಾಭವಾಗುವುದು ಖಚಿತ.
ಸ್ಯಾಂಡಲ್ವುಡ್ ಸಿನಿಮಾಗಳು ಕರುನಾಡಿನಲ್ಲೇ ಇಷ್ಟೊಂದು ವೀವ್ಸ್ ಪಡೆಯುವುದು ವಿರಳ. ಅಂಥದ್ದರಲ್ಲಿ ನಿಖಿಲ್ ಕುಮಾರ್ ನಟನೆಯ ‘ರೈಡರ್’ ಸಿನಿಮಾ ಹಿಂದಿ ಭಾಷೆಯಲ್ಲಿ 100 ಮಿಲಿಯನ್ ಬಾರಿ ವೀಕ್ಷಣೆ ಕಂಡಿದೆ ಎಂಬುದು ಗಮನಾರ್ಹ ಸಂಗತಿ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕರುನಾಡಿನಲ್ಲಿ ಮಾತ್ರವಲ್ಲದೇ ಹಿಂದಿ ಪ್ರೇಕ್ಷಕರ ವಲಯದಲ್ಲೂ ನಿಖಿಲ್ ಕುಮಾರ್ಗೆ ಫ್ಯಾನ್ಸ್ ಇದ್ದಾರೆ ಎಂಬುದಕ್ಕೆ ಈ 100 ಮಿಲಿಯನ್ ಸಾಕ್ಷಿ ಒದಗಿಸುತ್ತಿದೆ. ಒಂದು ಮಿಲಿಯನ್ ಎಂದರೆ 10 ಲಕ್ಷ. 100 ಮಿಲಿಯನ್ ಎಂದರೆ.. 10 ಕೋಟಿ ವೀಕ್ಷಣೆ. 10 ಕೋಟಿ ಮೀರಿ ವ್ಯೂವ್ಸ್ ಪಡೆಯುವುದು ಸಣ್ಣ ಮಾತನೇನಲ್ಲ.



