ಡಿಸೆಂಬರ್ 31. ಮಧ್ಯರಾತ್ರಿವರೆಗೂ ಪಾರ್ಟಿ ಇರುತ್ತದೆ. ನ್ಯೂ ಇಯರ್ ಪಾರ್ಟಿ ಎಂದ ಮೇಲೆ ಗುಂಡು ಕಾಮನ್. ಪೊಲೀಸರು ಏನೇ ಎಚ್ಚರಿಕೆ ತೆಗೆದುಕೊಂಡರೂ ಗಲಾಟೆ, ಕುಡಿದು ಬೀಳುವುದು, ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದು ನಡೆದೇ ನಡೆಯುತ್ತದೆ. ಸಾವಿರಾರು ಜನರ ಮಧ್ಯೆ ನೂರಾರು ಪೊಲೀಸರಿದ್ದರೂ ಒಬ್ಬ ಕಣ್ಣು ತಪ್ಪಿಸಿ ತಪ್ಪು ಮಾಡಿಬಿಡುತ್ತಾನೆ. ಈ ಬಾರಿ ರಾಜ್ಯ ಪೊಲೀಸರು ಅದರಲ್ಲೂ ಬೆಂಗಳೂರು ಪೊಲೀಸರು ವಿಶೇಷ ಮುಂಜಾಗ್ರತೆ ತೆಗೆದುಕೊಂಡಿದ್ದಾರೆ.
ಮಹಿಳೆಯರಿಗೆ ಸೇಫ್ ಹೌಸ್. ಹಾಸಿಗೆ ವ್ಯವಸ್ಥೆ :
ಬೆಂಗಳೂರಿನಲ್ಲಿ 37 ವುಮೆನ್ ಸೇಫ್ ಹೌಸ್ ನಿರ್ಮಿಸಿದ್ದಾರೆ. ಇವು ತಾತ್ಕಾಲಿಕ. ಹೊಸ ವರ್ಷ ಮುಗಿದ ಮರುಕ್ಷಣ ತೆರವಾಗುತ್ತವೆ. ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಮಕ್ಕಳೂ ಪಾರ್ಟಿ ಮಾಡುವ ಎಂಜಿ ರೋಡ್, ಬ್ರಿಗೇಡ್ ರೋಡ್, ಕಮರ್ಷಿಯಲ್ ಸ್ಟ್ರೀಟ್‍ಗಳಲ್ಲಿ ವುಮೆನ್ ಸೇಫ್ ಹೌಸ್ ಕಟ್ಟಿದ್ದಾರೆ. ಪ್ರತಿ ರಸ್ತೆಗೂ ಎರಡು/ಮೂರು ಸೇಫ್ ಹೌಸ್ ಇರುತ್ತವೆ. ಅಲ್ಲಿ ಮಹಿಳೆಯರು ಕೂಡಾ ಕುಡಿದು ಟೈಟ್ ಆದರೆ, ನಡೆಯಲು ಆಗದಂತೆ ಆದರೆ ಅವರಿಗೆ ಬೆಡ್ ವ್ಯವಸ್ಥೆಯೂ ಇದೆ.




ಎಲ್ಲ ಕಡೆ ಸಿಸಿ ಕ್ಯಾಮೆರಾ : ಹೆಚ್ಚುತ್ತಿರುವ ಭಯೋತ್ಪಾದನೆ ಆತಂಕ ಹಿನ್ನೆಲೆಯಲ್ಲಿ ವಿಶೇಷ ಸಿಸಿ ಕ್ಯಾಮೆರಾ ಹಾಕಲಾಗಿದೆ. ಹೆಚ್ಚು ಜನ ಸೇರುವ ಪಬ್, ಬಾರ್‍ಗಳಲ್ಲಿ ಸಿಸಿ ಕ್ಯಾಮೆರಾ ಇರಲಿವೆ. ಕೆಟ್ಟು ಹೋಗಿದ್ದ ಕ್ಯಾಮೆರಾಗಳನ್ನೂ ರಿಪೇರಿ ಮಾಡಿಸಿ ಫಿಕ್ಸ್ ಮಾಡಿಸಲಾಗಿದೆ. ಒಟ್ಟಾರೆ 1.7 ಲಕ್ಷ ಸಿಸಿ ಕ್ಯಾಮೆರಾಗಳು ಕಣ್ಗಾವಲು ಮಾಡಲಿವೆ. ಎಂಜಿ ರಸ್ತೆ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.

ವಾಹನಗಳಿಗೆ ನಿರ್ಬಂಧ : ಹೆಬ್ಬಾಳದಲ್ಲಿ ಮಾತ್ರ ಫ್ಲೈಓವರ್ ಮೇಲೆ ಓಡಾಡಬಹುದು. ಉಳಿದಂತೆ ರಾತ್ರಿ ಹೊತ್ತು ಮೇಲ್ಸೇತುವೆ/ಫ್ಲೈಓವರುಗಳಲ್ಲಿ ಓಡಾಟ ಬಂದ್. ಏನೇ ಇದ್ದರೂ ಹೊರಗಿನ ಪಾರ್ಟಿಗಳು ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ. 1 ಗಂಟೆಯ ನಂತರವೂ ಕುಡಿದು, ಕುಣಿದು ಆಡುತ್ತಿದ್ದರೆ ಲಾಠಿ ಏಟಿನ ಪಾರ್ಟಿ ಉಚಿತವಾಗಿ ಸಿಗಲಿದೆ.



