ಹಿತ್ತಲಕ ಕರಿಬ್ಯಾಡ ಮಾವ….
ಬಲ ನಾಚಿಕೆ ಆಗತೈತಿ..
ಒತ್ತಿಕೊಂಡು ನಿಲ್ಲಬ್ಯಾಡ ಮಾವ..
ಎದಿ ಗಾಬರಿ ಆಗತೈತಿ..
ಎಂದು ನಿಶ್ವಿಕಾ ನಾಯ್ಡು ಹಾಡುತ್ತಿದ್ದರೆ..
ಗಡಗಡಗಡಗಡ..
ನಡಗಿಸಿ ಹೊಡಿ ನಿನ್ನ ನಡ..
ಸಂಗಮರ್ ಮರಿ ಸುಂದ್ರಿ ಡಾರ್ಲಿಂಗ..
ಸಿರಿ ಸೌಂದರ್ಯ ತಡಕಳ್ಳಿ.. ನಾ ಹ್ಯಾಂಗ..
ತುಟಿಗೆ ತುಟಿ ಹಚ್ಚಿ ಮಾಡ್ಲೇನ ವೆಲ್ಡಿಂಗ..
ತಟಗು ತಡಕಬಕು..
ಆಮ್ಯಾಲ್ ಹಿಡ್ಕಬಕು..
ಮೊದಲು ಮಕ್ಳಾಬಕು..
ಆಮ್ಯಾಕ್ ಲಗ್ನಾಬಕು..
ಹಿತ್ತಲಕ ಕರಿಬ್ಯಾಡ ಮಾವ….
ಬಲ ನಾಚಿಕೆ ಆಗತೈತಿ..
ನಿನ್ನ ಮ್ಯಾಲೆ ಇಟ್ಟಿನಲೆ ಜೀವ..
ಅಭಿ ಪಿಕ್ಚರ್ ಬಾಕಿ ಐತಿ..
ಆಗವಲ್ದ ಆಗವಲ್ದ ನನಗ..
ನಿನ್ನ ಬೆಳ್ಳಿನ ಚಕ್ ಗುಳ್ಳೀ..
ಏನ್ ಮಾಡ್ಲೆಬೆ ಕಡಿತೈತಿ.. ಹೃದಯ..
ನಾ ನಂಬರ್ ಒನ್ ಪ್ರೀತಿ ಪಿಲ್ಲಿ..
ಮಾವ ಮಾವ..
ನಾ ಕೊಡತೇನಿ ಗ್ಯಾರಂಟಿ..
ಕಾವು ಇಳಿಸಿ ಮಳಿಗಾಲ ಹೊಡಿ ರಂಟಿ..
ಶಿವ ಶಿವ ಶಿವ..
ಶುರು ಆತಪ್ಪ ಬಿಸಿ ಅನುಭವ..
ಸಿಗದಿದ್ರ ನೀ ನಂಗ..
ಈ ಜನುಮಕ ಇರಲಾರ್ದ ಮೀನಿಂಗ..
ಬಾಲು ಬರದಾನ.. ನಾ ಏನ್ ಮಾಡ್ಲಾ ಬ್ಯಾಟಿಂಗ..
ತಟಗು ತಡ್ಕಬಕು.. ಆಮ್ಯಾಲ್ ಪಡ್ಕಬಕು..
ಮೊದಲು ಕೆಲ್ಸಾಬಕು.. ಆಮ್ಯಾಲ್ ಮನ್ಸಾಬಕು..
ಎಂದು ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಹುಚ್ಚು ಹಿಡಿಸುವಂತೆ ಕುಣಿಯುತ್ತಾರೆ.
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಗೀತೆ. ಹಾಡಿನ ತುಂಬೆಲ್ಲ ಪೋಲಿತನ ಇದೆ. ಹಾಡಿರೋದು ನಾಡ್ರೈವರ ಖ್ಯಾತಯ ಮಾಳು ನಿಪನಾಳ. ನಿರ್ದೇಶಕ ಯೋಗರಾಜ್ ಭಟ್ ಅವರು ಈ ಹಾಡನ್ನು ಬರೆದಿದ್ದಾರೆ. ಮಾಳು ನಿಪನಾಳ ಜೊತೆ ಶ್ರುತಿ ಪ್ರಹ್ಲಾದ ಅವರು ಕೂಡ ಧ್ವನಿ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಈ ಸಾಂಗ್ ಮೂಡಿಬಂದಿದೆ. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.
ವಿಶೇಷ ಅಂದ್ರೆ ಈ ಪೋಲಿತನ ಅರ್ಥ ಆಗೋದು ಉತ್ತರ ಕರ್ನಾಟಕ ಭಾಷೆಯವರಿಗೆ ಮಾತ್ರ. ಅದು ಭಟ್ಟರ ಸ್ವತ್ತು.
ಮಾರ್ಚ್ 8ರಂದು ‘ಕರಟಕ ದಮನಕ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ವಿ. ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವರಾಜ್ಕುಮಾರ್ ಮತ್ತು ಪ್ರಭುದೇವ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿರುವುದು ವಿಶೇಷ. ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಕ್ರೇಜ್ ಸೃಷ್ಟಿ ಮಾಡಿವೆ.



