ಇಡೀ ದೇಶ ಈಗ ೪ನೇ ಹಂತದ ಚುನಾವಣೆಯಲ್ಲಿ ಬ್ಯುಸಿ. ಹೀಗಿರುವಾಗಲೇ.. ಮೋದಿ ಪ್ರಧಾನಿಯಾಗಿ ಹ್ಯಾಟ್ರಿಕ್ ಸಾಧಿಸ್ತಾರಾ..? ಇಲ್ವಾ..? ಸಮೀಕ್ಷೆಗಳು ಆರಂಭದಲ್ಲಿ ಬಿಜೆಪಿ & ಎನ್ʻಡಿಎಗೆ ಸೂಪರ್ ಬಹುಮತ ಕೊಟ್ಟಿದ್ದರೂ.. ಸಮೀಕ್ಷೆ ಸಮೀಕ್ಷೆಗಳಷ್ಟೇ. ಫಲಿತಾಂಶ ಬೇರೆಯೂ ಇರಬಹುದು. ಹೀಗಾಗಿಯೇ.. ಕುತೂಹಲ ಮೂಡಿದೆ. ಏಕೆಂದರೆ.. ಮೋದಿ ವಿರುದ್ಧ ಒಟ್ಟಾಗಿ ಮುಗಿಬಿದ್ದಿರುವ ವಿರೋಧ ಪಕ್ಷಗಳು ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದು ಮತ್ತೆ ಮತ್ತೆ ಷರಾ ಬರೆಯುತ್ತಿವೆ.
ಒಬ್ಬೊಬ್ಬ ಮಹಾನ್ ನಾಯಕರ ವಿಶ್ಲೇಷಣೆಗಳು ಹಾಗೆಯೇ ಹೇಳುತ್ತಿವೆ. ಅವರವರ ಲೆಕ್ಕಾಚಾರದ ಪ್ರಕಾರ ಮೋದಿ ಮತ್ತೆ ಪ್ರಧಾನಿಯಾಗೋದು ಕಷ್ಟ ಕಷ್ಟ ಕಷ್ಟ. ಆದರೆ.. ಬಿಜೆಪಿಯವರು ಕೊಡುತ್ತಿರುವ ಕೌಂಟರ್ ಕೂಡಾ ಅಷ್ಟೇ ಮಜಭೂತಾಗಿದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ :
ಪ್ರಧಾನಿ ನರೇಂದ್ರ ಮೋದಿಯ ಈ ಬಾರಿ ದೇಶದಲ್ಲಿ ಮತ್ತೆ ಸರ್ಕಾರವನ್ನು ರಚಿಸುವುದು ಬಹಳ ಕಷ್ಟ. ಮೋದಿಯವರ ಭಾಷಣದಲ್ಲಿ ಈ ಹಿಂದೆ ಇರುತ್ತಿದ್ದ ಅಭಿಮಾನ ಮತ್ತು ಗರ್ವ ಕಾಣೆಯಾಗಿದೆ. ಮೂರು ಹಂತದ ಎಲೆಕ್ಷನ್ ಬಳಿಕ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೇರುವುದು ಕಷ್ಟ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅದಕ್ಕೇ ಅವರು ಈಗ ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ಅವರಿಗೆ ಎನ್‌ಡಿಎ ಸೇರಿಕೊಳ್ಳಿ ಎನ್ನುತ್ತಿದ್ದಾರೆ.
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ :
ಬರೆದಿಟ್ಟುಕೊಳ್ಳಿ. ಮೋದಿ ಮತ್ತೆ ಪ್ರಧಾನಿಯಾಗಲ್ಲ. ಬಿಜೆಪಿ 200ರ ಆಸುಪಾಸು ಇರುತ್ತದೆಯೇ ಹೊರತು ಬಹುಮತ ಬರಲ್ಲ. ಮೋದಿಗೆ ಈಗಾಗಲೇ ಆ ಮುನ್ಸೂಚನೆ ಇದೆ. ಉತ್ತರ ಪ್ರದೇಶದಲ್ಲಿಯೇ ೮೦ ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟ ೫೦ ಕ್ಷೇತ್ರಗಳಲ್ಲಿ ಗೆಲ್ಲಲಿದೆ.
ಶಶಿ ತರೂರ್, ಕಾಂಗ್ರೆಸ್ ಮುಖಂಡ
ಜೂನ್ 2024 ರ ನಂತರ ಮೋದಿ ಪ್ರಧಾನಿಯಾಗುವುದಿಲ್ಲ. ನಾವು ಸೆಪ್ಟೆಂಬರ್ 2025 ರವರೆಗೂ ಕಾಯಬೇಕಾಗಿಲ್ಲ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಈ ಬಾರಿ ಜಯಭೇರಿ ಬಾರಿಸಲಿದೆ.
ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ
ಮೋದಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿಯೇ ಅವರು ಹಿಂದೂ ಮುಸ್ಲಿಂ ನಡುವೆ ಭಯ ಹುಟ್ಟಿಸುತ್ತಿದ್ಧಾರೆ. ಹಿಂದುಳಿದವರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ಧಾರೆ. ಸೋಲಿನ ಭಯದಿಂದಲೇ ಆಕ್ಸಿಸ್ ಕೊಟ್ಟ ನಿಜವಾದ ಸಮೀಕ್ಷೆಗಳನ್ನು ಅಳಿಸಿ ಹಾಕುತ್ತಿದ್ಧಾರೆ.
ನರೇಂದ್ರ ಮೋದಿ, ಪ್ರಧಾನ ಮಂತ್ರಿ :
ಈ ಬಾರಿ ಎನ್ ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟಿಗಿಂತ ಹೆಚ್ಚು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವಾಗಲು ಅಗತ್ಯವಿರುವ 50 ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ, 53ರ ಹರೆಯದ ರಾಹುಲ್ ಗಾಂಧಿ ವಯಸ್ಸಿನಷ್ಟೂ ಸ್ಥಾನ ಬರಲ್ಲ ಹೀಗಾಗಿ ಅಧಿಕೃತ ಪ್ರತಿಪಕ್ಷದ ಸ್ಥಾನವಾಗುವ ಯೋಗ್ಯತೆಯನ್ನೂ ಪಡೆಯುವುದಿಲ್ಲ. ಕಾಂಗ್ರೆಸ್‌ನ ಶೆಹಜಾದ 2014ರ ಚುನಾವಣೆಯಿಂದಲೂ ಒಂದೇ ಭಾಷಣ ಓದುತ್ತಿದ್ದಾರೆ. ಆದರೆ, ಬರೆದಿಟ್ಟು ಕೊಳ್ಳಿ… ಈ ಬಾರಿ ಎನ್‌ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟು ಗೆಲ್ಲಲಿದೆ.
ಎಲ್ಲ ಓಕೆ.. ಆದರೆ.. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಎಷ್ಟು ಸೀಟು ಗೆಲ್ಲಬಹುದು? ಕಾಂಗ್ರೆಸ್ ನೇತೃತ್ವದ ಇಂಡಿಯಾ ಎಷ್ಟು ಸೀಟು ಗೆಲ್ಲಬಹುದು? ಪ್ರಧಾನಿ ಯಾರಾಗಬಹುದು? ರಾಹುಲ್ ಗಾಂಧಿನಾ..? ಮೋದಿನಾ..?
ನಿಮ್ಮ ಅಭಿಪ್ರಾಯದ ಪ್ರಕಾರ.. ಕಮೆಂಟ್ ಬಾಕ್ಸಿನಲ್ಲಿ ತಿಳಿಸಿ. ಸ್ಪೆಷಲ್ ಯು ಪೇಜಿಗೆ ಬಂದು ಕಮೆಂಟ್ ಮಾಡಿ. ಲೈಕ್ ಮಾಡಿ. ಫಾಲೋ ಮಾಡಿ.



