ಭಾರತದ ಐತಿಹಾಸಿಕ ಕ್ಷಣ ನಮ್ಮ ಸಂಸತ್ತಿನಲ್ಲಿ ಮತ್ತೆ ಪ್ರತಿಷ್ಠಾಪನೆಗೊಳ್ಳುತ್ತಿದೆ. ಈ ಇತಿಹಾಸದ ಹೆಮ್ಮೆಯ ರಾಜದಂಡವನ್ನ, ನೆಹರು ಅವರ ಚಿನ್ನದ ವಾಕಿಂಗ್ ಸ್ಟಿಕ್ ಎಂದು ಬರೆದಿಟ್ಟು ಹೋದ ಆ ಮಹಾನುಭಾವ ಯಾರೋ.. ಭಾರತದಲ್ಲಿ ಅದೆಷ್ಟು ಇತಿಹಾಸದ ಹೆಮ್ಮೆಯ ಕ್ಷಣ, ಸ್ಮಾರಕಗಳಿಗೆ ಸಮಾಧಿ ಕಟ್ಟಿದ್ದಾರೋ.. ಈ ಸಿಂಗೊಲ್ ಅರ್ಥಾತ್ ರಾಜದಂಡವನ್ನು ಬ್ಯಾಟನ್ 1947ನೇ ಇಸವಿಯ ಆಗಸ್ಟ್ 14ರ ರಾತ್ರಿ ಭಾರತದ ಮೊದಲ ಪ್ರಧಾನಿ ಜವಹರ ಲಾಲ್ ನೆಹರು ಅವರಿಗೆ ನೀಡಿದ 15 ನಿಮಿಷಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು.



