ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ರಾಜ್ಯ ಸರ್ಕಾರದ ಹಾಲಿ ಸಚಿವ ಚೆಲುವರಾಯ ಸ್ವಾಮಿ ಒಂದಾನೊಂದು ಕಾಲದಲ್ಲಿ ಗಳಸ್ಯ ಕಂಠಸ್ಯ ದೋಸ್ತಿಗಳಾಗಿದ್ದರು. ಅದು ಈಗ ಕೇವಲ ಇತಿಹಾಸ. ಈಗ ಇಬ್ಬರೂ ಹಾವು-ಮುಂಗುಸಿಯನ್ನೂ ಮೀರಿಸುವಂತೆ ಕಿತ್ತಾಡುತ್ತಾರೆ. ಈಗ ಇಬ್ಬ್ ಮಧ್ಯೆ ಮಂಡ್ಯದಲ್ಲಿ ಗುದ್ದಲಿ ಪೂಜೆ ವಾರ್ ಶುರುವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ, ಸಚಿವ ಚೆಲುವರಾಯ ಸ್ವಾಮಿ ನಡುವೆ ಗುದ್ದಲಿ ಗುದ್ದಾಟ ನಡೆಯುತ್ತಿದೆ. ಒಂದೇ ಕಾಮಗಾರಿಗೆ ಎರಡೆರಡು ಬಾರಿ ಗುದ್ದಲಿ ಪೂಜೆ ನಡೆಸಿದ್ದಾರೆ ಇಬ್ಬರೂ ಸಚಿವರು.
ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ಸಚಿವರ ಡಬಲ್ ಪೂಜೆಗೆ ಸಾಕ್ಷಿಯಾಗಿದೆ. ಶ್ರೀರಂಗಪಟ್ಟಣದ ಕಿರಂಗೂರಿನಿಂದ ಪಾಂಡವಪುರ ತಾಲೂಕಿನ ಬನಘಟ್ಟದವರೆಗೆ 12 ಕಿಮೀ ಹೆದ್ದಾರಿ ನಡೆಯುತ್ತಿದ್ದು, 42 ಕೋಟಿ ವೆಚ್ಚದ ಚತುಷ್ಪಥ ಹೆದ್ದಾರಿಗೆ ಕುಮಾರಸ್ವಾಮಿ ಮೊದಲು ಗುದ್ದಲಿ ಪೂಜೆ ನೆರವೇರಿಸಿದ್ದು ಕುಮಾರಸ್ವಾಮಿ. 2024ರ ಅಕ್ಟೋಬರ್ 20ರಂದು ಗುದ್ದಲಿ ಪೂಜೆ ಮಾಡಿದ್ದರು. ಕುಮಾರಸ್ವಾಮಿಯವರ ಕಾರ್ಯಕ್ರಮಕ್ಕೆ ಚೆಲುವರಾಯಸ್ವಾಮಿ ಗೈರಾಗಿದ್ದರು. ಈಗ ಅದೇ ಕಾಮಗಾರಿಗೆ ಜನವರಿ 7ರಂದು ಅದೇ ಕಾಮಗಾರಿಗೆ ಸಚಿವ ಚೆಲುವರಾಯ ಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಕ್ರೆಡಿಟ್ ಪಡೆಯಲು ಕೇಂದ್ರ ಮತ್ತು ರಾಜ್ಯದ ಸಚಿವರ ನಡುವೆ ಪೈಪೋಟಿ ಶುರುವಾಗಿದೆ. ಅ.20ರಂದು ನಡೆದ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಆಹ್ವಾನವಿತ್ತಾದರೂ ಬೇರೆ ತುರ್ತು ಕೆಲಸದ ಮೇಲೆ ತೆರಳಿದ್ದರಿಂದ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಪ್ರತ್ಯೇಕ ಪೂಜೆ ನೆರವೇರಿಸಿ ಅಭಿವೃದ್ಧಿಯತಮ್ಮ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ ಚೆಲುವರಾಯಸ್ವಾಮಿ. ಹೆದ್ದಾರಿ ಕಾಮಗಾರಿಯ ಕ್ರೆಡಿಟ್ ಪಡೆಯಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸಚಿವ ಎನ್.ಚೆಲುವರಾಯಸ್ವಾಮಿ ಕಾದಾಟಕ್ಕಿಳಿದಿದ್ದಾರೆ.



