Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಮೋದಿ ಯಡಿಯೂರಪ್ಪ ಮೀಟಿಂಗ್ ಕೊಟ್ಟ ಮೆಸೇಜ್

SpeciallU by SpeciallU
January 18, 2023
in News, Politics
Reading Time: 1 min read
0 0
0
ಮೋದಿ ಯಡಿಯೂರಪ್ಪ ಮೀಟಿಂಗ್ ಕೊಟ್ಟ ಮೆಸೇಜ್

ಕರ್ನಾಟಕ ರಾಜಕೀಯ ಚುನಾವಣೆಯೆಂಬ ರಣರಂಗಕ್ಕೆ ಸಿದ್ಧವಾಗುತ್ತಿರುವಾಗಲೇ ಬಿಜೆಪಿಯಲ್ಲೊಂದು ತಳಮಳ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂಬುದಕ್ಕೆ ಕೌಂಟರ್ ಅಟ್ಯಾಕ್ ಮಾಡಲು ಅವರ ಬಳಿ ಏನೂ ಅಸ್ತ್ರವಿಲ್ಲ. ಯಡಿಯೂರಪ್ಪ ಅವರೇನೋ ಪಕ್ಷದ ಸಮಾವೇಶಗಳಲ್ಲಿ ಮಾತನಾಡುತ್ತಿದ್ದಾರೆ. ಆದರೆ ಆಕ್ಟಿವ್ ಆಗುವುದಕ್ಕೆ ಬೇಕಾದ ಸ್ವಾತಂತ್ರ್ಯ ಮತ್ತು ಅಧಿಕಾರ ಎರಡೂ ಇರುವಂತೆ ಕಾಣುತ್ತಿಲ್ಲ. ಮೋದಿ ಮೆಚ್ಚುತ್ತಾರೆ. ಅಮಿತ್ ಶಾ ಹೊಗಳ್ತಾರೆ. ಕಟೀಲು, ಬಿ.ಎಲ್.ಸಂತೋಷ್, ಸಿ.ಟಿ.ರವಿ ಮೊದಲಾದವರೆಲ್ಲ ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಇರೋಕ್ ಸಾಧ್ಯವಾ.. ಎಂದು ಮಾತನಡುತ್ತಾರೆ. ಆದರೆ ಮಾತು ಕೃತಿಗೆ ಬರುವಾಗ ಮಾತ್ ಮಾತಲ್ಲೇ ಇರುತ್ತೆ.

ಇದರಿಂದ ನಿಜಕ್ಕೂ ಖುಷಿಯಾಗಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್`ಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸೀಟುಗಳ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಎಂಬ ಆಸೆ ಗರಿಗೆದರಿರುವುದು ಸತ್ಯ. ಯಡಿಯೂರಪ್ಪ ಅವರನ್ನು ಸೈಡಿಗೆ ತಳ್ಳೋದ್ರಿಂದ ಲಿಂಗಾಯತ ಸಮುದಾಯದ ದೊಡ್ಡದೊಂದು ಸಮೂಹ ಬಿಜೆಪಿಯಿಂದ ದೂರವಾಗಲಿದೆ ಎಂಬ ನಿರೀಕ್ಷೆ ಕಂಗ್ರೆಸ್ಸಿನಲ್ಲಿದೆ. ಜೊತೆಗೆ ಪಂಚಮಸಾಲಿ ಸಮುದಾಯದ ಸ್ವಾಮಿಗಳು ಬೀದಿಗೆ ಇಳಿದಿರುವುದು ಕಾಂಗ್ರೆಸ್ ರಣೋತ್ಸಾಹ ಹೆಚ್ಚಿಸಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಜೆಡಿಎಸ್‍ನಲ್ಲಿಯೂ ಯಡಿಯೂರಪ್ಪ ಅವರಿಗೆ ಆಗಿರುವುದು ಸಂಭ್ರಮ ಹೆಚ್ಚಿಸಿದೆ.
ಚಿಂತೆಯಾಗಿರುವುದು ರಾಜ್ಯ ಬಿಜೆಪಿ ನಾಯಕರಿಗೆ. ಬಿಜೆಪಿಯಲ್ಲಿ ಒಂದು ಭಾಷಣ, ಒಂದು ರ್ಯಾಲಿ, ಒಂದು ಸಮಾವೇಶದ ಮೂಲಕ ಮತದಾರರನ್ನು ಪೋಲರೈಸ್ ಮಾಡುವ ಇನ್ನೊಬ್ಬ ಸ್ಥಳೀಯ ನಾಯಕ ಬಿಜೆಪಿಯಲ್ಲಿಲ್ಲ. ಯಡಿಯೂರಪ್ಪ ಏನೂ ಮಾಡದೆ ಸ್ವಲ್ಪ ಮೌನವಾದರೂ ಸಾಕು, ಬುಟ್ಟಿಯೊಳಗಿನ ಮತಗಳೂ ಹಾರುತ್ತವೆ ಎಂಬ ಭಯ ಬಿಜೆಪಿಯವರದ್ದು. ಯಡಿಯೂರಪ್ಪ ಇದ್ದಿದ್ದರೆ ಈ ಲಿಂಗಾಯತರ ಹೋರಾಟವನ್ನು ಮನವೊಲಿಸಿ ಶಮನ ಮಾಡುತ್ತಿದ್ದರು. ಹೀಗೆ ಸುಡುವ ಬೆಂಕಿಯಾಗುತ್ತಿರಲಿಲ್ಲ ಎನ್ನುವ ಮಾತನ್ನು ಖುದ್ದು ಬಿಜೆಪಿಯವರೂ ಒಪ್ಪುತ್ತಾರೆ. ಯಡಿಯೂರಪ್ಪ ಹೋದಲ್ಲಿ ಬಂದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ. ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಗುಡುಗುತ್ತಾರೆ. ವಿಜಯೇಂದ್ರ ಯಡಿಯೂರಪ್ಪ ನಮ್ಮನ್ನೇನು ಸೈಡ್ ಲೈನ್ ಮಾಡಿಲ್ಲ ಎನ್ನುತ್ತಾರೆ. ಆದರೆ ಅದನ್ನು ನಂಬುವುದು ಹೇಗೆ? ಈ ಅಪನಂಬಿಕೆಯಲ್ಲಿರುವಾಗಲೇ ಮೋದಿ ಮತ್ತು ಬಿಎಸ್‍ವೈ ಮಧ್ಯೆ 15 ನಿಮಿಷಗಳ ಮೀಟಿಂಗ್ ಆಗಿದೆ. ದೆಹಲಿಯಲ್ಲಿ.

ದೆಹಲಿಯಲ್ಲಿ ನಡೆದ 2 ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಮಧ್ಯೆ ಸುಮಾರು 15 ನಿಮಿಷಗಳ ಮೀಟಿಂಗ್ ನಡೆಯಿತು. ಆ ಸಮಯದಲ್ಲಿ ಏನೇನೆಲ್ಲ ಚರ್ಚೆಗೆ ಬಂತು ಅನ್ನೋದನ್ನು ಯಾವ ನಾಯಕರೂ ಬಿಟ್ಟುಕೊಟ್ಟಿಲ್ಲ. ಆದರೆ ಇಡೀ ದೇಶದ ಎಲ್ಲ ರಾಜ್ಯಗಳ ಅಧ್ಯಕ್ಷರು, ನಾಯಕರು ಇರುವಾಗಲೇ ಯಡಿಯೂರಪ್ಪ ಜೊತೆ ನಡೆಸಿದ 15 ನಿಮಿಷಗಳ ಮಾತುಕತೆ, ರಾಜ್ಯ ಬಿಜೆಪಿಯವರಿಗೆ ಬೇರೆಯದ್ದೇ ಸಂದೇಶ ರವಾನಿಸಿದೆ.

ಫೆಬ್ರವರಿ 12ಕ್ಕೆ ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ಆ ದಿನ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆಯೇ ಪ್ರಮುಖ ಕಾರ್ಯಕ್ರಮ. ಅದು ಯಡಿಯೂರಪ್ಪ ಅವರ ಕನಸಾಗಿತ್ತು. ಹಠಕ್ಕೆ ಬಿದ್ದು ಕಾರ್ಯರೂಪಕ್ಕೆ ತಂದಿರುವ ಯಡಿಯೂರಪ್ಪ, ಉದ್ಘಾಟನೆಗೆ ಖುದ್ದು ಮೋದಿಯನ್ನೇ ಕರೆತರುವ ಮನಸ್ಸು ಮಾಡಿದ್ದರು. ಮಾಜಿ ಸಿಎಂ ಆಗಿದ್ದರೂ ಹಠಕ್ಕೆ ಬಿದ್ದು ಮೋದಿಯವರನ್ನು ಒಪ್ಪಿಸಿದ್ದಾರಂತೆ. ಇದೆಲ್ಲದರ ಮಧ್ಯೆಯೇ ಯಡಿಯೂರಪ್ಪ ಮತ್ತು ಮೋದಿ ನಡುವಣ 15 ನಿಮಿಷಗಳ ಮೀಟಿಂಗ್ ಬೇರೆಯದೇ ಸಂದೇಶ ನೀಡಿದೆ. ಆದರೆ ಬೂಸ್ಟ್ ಕೊಡುತ್ತಾ? ವೇಸ್ಟ್ ಆಗುತ್ತಾ? ಇನ್ನು 3 ತಿಂಗಳಲ್ಲಿ ಗೊತ್ತಾಗಲಿದೆ.

Tags: #Modi #Yadiyurappa #BJP #Airport #Amit Shah #Congress #JDS #Vijayanendra #Siddharamaiah #Shivamogga#ಮೋದಿ #ಯಡಿಯೂರಪ್ಪ #ಬಿಜೆಪಿ #ಏರ್ ಪೋರ್ಟ್ #ಅಮಿತ್ ಶಾ #ಕಾಂಗ್ರೆಸ್ #ಜೆಡಿಎಸ್ #ವಿಜಯೇಂದ್ರ #ಸಿದ್ದರಾಮಯ್ಯ #ಶಿವಮೊಗ್ಗ
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.