ಮಿಲನ ಮಹೋತ್ಸವಕ್ಕೆ ಮೂಡ್ ಬಹಳ ಮುಖ್ಯ. ಇಬ್ಬರಿಗೂ ಮೂಡ್ ಇರಬೇಕು. ಒಬ್ಬರಿಗೆ ಮೂಡ್ ಇದ್ದು, ಇನ್ನೊಬ್ಬರಿಗೆ ಮೂಡ್ ಇಲ್ಲದಿದ್ದರೆ ಶುಭ ಮಿಲನವೂ ಭಯಂಕರವಾಗಿ ಕಾಡಿಬಿಡುತ್ತೆ. ಖುಷಿಯಾದರೂ ಎಲ್ಲಿ ಬರಬೇಕು.
ಆಟದ ವೇಳೆ ಮಹಿಳೆಯರು ಮಾಡೋ ಕೆಲವು ತಪ್ಪುಗಳು ಪುರುಷರಿಗೆ ಇಷ್ಟವಾಗಲ್ಲವಂತೆ. ಅದು ಪುರುಷರ ಮನಸ್ಥಿತಿಯನ್ನು ಡೈವರ್ಟ್ ಮಾಡುತ್ತೆ. ಆಟ ರೋಮಾಂಚಕಾರಿಯಾಗಿರಬೇಕು, ಥ್ರಿಲ್ಲಿಂಗ್ ಆಗಿರಬೇಕು.. ಅದನ್ನ ಬಿಟ್ಟು ಮತ್ತೇನು ಮಾಡಿದರೂ ಗಂಡಸು ತೃಪ್ತನಾಗುವುದಿಲ್ಲ.
ಆಟಕ್ಕೆ ನೋ ಎನ್ನಬೇಡಿ..
ಪ್ರತಿಯೊಬ್ಬನೂ ಇಡೀ ದಿನ ಕೆಲಸ ಮಾಡಿದ ಮೇಲೆ ಸುಖ ಬಯಸುತ್ತಾನೆ. ಹಾಸಿಗೆಯ ಮೇಲೆ ಖುಷಿ ಪಡೋಕೆ ಬಯಸುತ್ತಾನೆ. ಆಟಕ್ಕೆ ಆತ ಸಿದ್ಧನಾಗಿ ಬಂದಾಗ ನೋ ಎಂದರೆ ಪದೇ ಪದೇ ಬೇಡ.. ನನಗೂ ಸುಸ್ತಾಗಿದೆ ಎನ್ನುತ್ತಿದ್ದರೆ ಅದು ಇಷ್ಟವಾಗಲ್ಲ.
ಇಲ್ಲಿ ಪುರುಷರೂ ಅಷ್ಟೆ, ಹೊರಗೆ ಕೆಲಸ ಮಾಡುವವರಷ್ಟೇ ಸುಸ್ತಾಗಲ್ಲ. ಮನೆಯೊಳಗಿದ್ದೂ ಸುಸ್ತಾಗುತ್ತಾರೆ. ಅಲ್ಲಿಯೂ ಕೆಲಸ ಇರುತ್ತೆ. ಒಮ್ಮೊಮ್ಮೆ ಆಕೆಗೂ ಮೂಡ್ ಬರುತ್ತೆ.
ಸಂಗಾತಿ ಇಲ್ಲ, ಮೂಡ್ ಇಲ್ಲ ಎಂದರೆ ಎಂಥವರಿಗೂ ನಿರಾಸೆಯೇ. ಹೀಗಾಗಿ ಆಟಕ್ಕೆ ಬಂದವರನ್ನು ನೋ ಎನ್ನಬೇಡಿ.
ವೇಗಕ್ಕೆ ತಕ್ಕ ಉದ್ವೇಗ ಇರಲಿ..
ಉತ್ತಮ ಸುಖಕ್ಕಾಗಿ ತೃಪ್ತಿಗಾಗಿ ನಿಧಾನವಾಗಿ ಸಂಗಾತಿಯೊಂದಿಗೆ ಸಿಂಕ್ ಆಗಬೇಕಾಗುತ್ತೆ. ನಿಮ್ಮ ವೇಗಕ್ಕೆ ತಕ್ಕಂತೆಯೇ ಎಲ್ಲ ಆಗಲ್ಲ. ಒಮ್ಮೊಮ್ಮೆ ಅವರು ಸ್ಲೋ ಆದರೆ, ಮಗದೊಮ್ಮೆ ಇವರು ಸ್ಲೋ ಆಗ್ತಾರೆ. ಅಂತಹ ವೇಳೆ ಸಂಗಾತಿಯ ವೇಗಕ್ಕೆ ತಕ್ಕಂತೆ ಆಟವಾಡುವುದೂ ಒಂದು ಕಲೆ. ಅವರ ವೇಗದ ಜೊತೆ ಹೊಂದಾಣಿಕೆ ಆಗದೇ ಹೋದರೆ ಆಗ ಸಂಗಾತಿಗೆ ನಿರಾಶೆ ಕಟ್ಟಿಟ್ಟ ಬುತ್ತಿ.
ವೇಗ + ವೇಗ = ಉದ್ವೇಗ ಸರಿಯಾಗಿದ್ದರೆ ಮಿಲನ ಮಹೋತ್ಸವ ನಿಜಕ್ಕೂ ಮಹೋತ್ಸವವೇ. ಇಲ್ಲದಿದ್ದರೆ ಅದೊಂದು ನೀರಸ ಆಟವಾಗುತ್ತೆ ಅಷ್ಟೆ.
ಅದೊಂದೇ ಜಾಗ ಅಲ್ಲ..
ಸೆಕ್ಸ್ ಅನ್ನೋದು ಕೇವಲ ಬೆಡ್ ರೂಮಿಗೆ ಮಾತ್ರ ಸೀಮಿತ ಅಲ್ಲ. ಹಾಸಿಗೆಯ ಮೇಲೆ ಒಬ್ಬರ ಮೇಲೊಬ್ಬರು ಮಲಗಿಕೊಂಡೇ ಆಡಬೇಕೆಂದಿಲ್ಲ. ಅಡುಗೆ ಮನೆ, ಬಚ್ಚಲು ಮನೆ, ಸೋಫಾ, ಕಿಚನ್ ರೂಮಿನ ಕಟ್ಟೆ.. ಎಲ್ಲಾದರೂ ಸರಿ… ಅವು ಥ್ರಿಲ್ ಕೊಡುತ್ತವೆ. ಖುಷಿ ಕೊಡುತ್ತವೆ. ಬೇರೆ ಕಡೆ ಟ್ರೈ ಮಾಡೋಣ ಎಂದಾದ ನೋ ಎಂದು ಮಾತ್ರ ಹೇಳಬೇಡಿ. ಹೊಸ ಹೊಸ ಅನುಭವಕ್ಕೆ ಓಪನ್ ಆಗಿ.
ಮಾತು.. ಮುತ್ತು.. ರಸಿಕರಾಡುವ ಮಾತು..
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ ಅನ್ನೋ ಮಾತು ಸುಮ್ಮನೆ ಹುಟ್ಟಿದಲ್ಲ. ಲೈಂಗಿಕತೆ ವೇಳೆ ಎಲ್ಲವನ್ನೂ ಚರ್ಚಿಸುವ ಅಗತ್ಯವಿಲ್ಲ. ಮಾತಿಗಿಂತ ಮುತ್ತು, ನಿಟ್ಟುಸಿರು ಕೊಡುವ ರೋಮಾಂಚನವೇ ಬೇರೆ. ಕೊಳಕು ಮಾತು, ಪೋಲಿ ಮಾತುಗಳು ವಯಾಗ್ರದಂತೆ ಕೆಲಸ ಮಾಡುತ್ತವೆ. ಪ್ರಣಯದ ಸಾಲ ಕೊಟ್ಟುಬಿಡಿ.. ಅಲ್ಲೇ ವಾಪಸ್ ತೆಗೆದುಕೊಳ್ಳಿ. ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ. ಬೆತ್ತಲಾಗಿರುವಾಗ ಬೇರೆ ಬೇರೆ ಮಾತೇಕೆ.. ಪರಮಾನ್ನ, ಮೃಷ್ಟಾನ್ನ ಕಣ್ಣೆದುರು ಇರುವಾಗ.. ಅಡುಗೆ ಮನೆ, ಸಾಲದ ಮನೆಯ ಮಾತನ್ನಂತೂ ಖಂಡಿತಾ ಆಡಬೇಡಿ.
ಸೊಂಟಾ ಬಳುಕುವಾಗ..
ಸೊಂಟಾ ಬಳುಕುವಾಗ..
ಉಯ್ಯಾಲೆ ಆಡುವಾಗ..
ಉಲ್ಲಾಸ ಪಡು ನೀ ಆಗ..
ಎಂದು ಕವಿ ಸುಮ್ಮನೆ ಬರೆದಿಲ್ಲ. ಸೊಂಟ ಬಳುಕುವುದು ಮತ್ತು ಉಯ್ಯಾಲೆ ಆಡುವುದರ ಅರ್ಥ ಬಿಡಿಸಿ ಹೇಳಬೇಕಿಲ್ಲ. ಅದನ್ನು ಮನಃಸ್ಫೂರ್ತಿಯಾಗಿ ಮಾಡಿ. ನಿಮಗೆ ಅತ/ಆಕೆ ಏನು ಮಾಡಿದರೆ ಸುಖ ಎನ್ನೋದನ್ನು ಬಾಯಿಬಿಟ್ಟು ಹೇಳಿ. ಕೆಲವು ಪೆದ್ದುಗಳಿಗೆ ಸಂಜ್ಞೆಗಳು ಅರ್ಥವಾಗಲ್ಲ. ಶಬ್ಧಗಳು ಗೊತ್ತೇ ಆಗಲ್ಲ. ಆಟ ಬೊಂಬಾಟಾಗಿರಬೇಕೆಂದರೆ ಶಬ್ಧ ಪ್ರಳಯವಾಗಲಿ.. ತೃಪ್ತಿ ಪರಾಕಾಷ್ಠೆ ತಲುಪಲಿ.



