

ಈ ಯುವತಿಯ ಹೆಸರು ರೂಪಾಲಿ ಚಂದನಶಿವೆ. ವಯಸ್ಸು ಕೇವಲ 20. ಆಕೆಯ ಗಂಡನ ಇಕ್ಬಾಲ್ ಮೊಹಮ್ಮದ್ ಶೇಖ್. ವಯಸ್ಸು 36. ಮದುವೆಯಾಗಿ 3 ವರ್ಷವಾಗಿತ್ತು. 2 ವರ್ಷದ ಮಗುವೂ ಇತ್ತು. ಆದರೆ ಈಗ ಶವವಾಗಿದ್ದಾಳೆ. ಅವಳು ಮಾಡಿದ ತಪ್ಪು ಒಂದೇ. ಪತಿ ಹೇಳಿದಂತೆ ಬುರ್ಖಾ ಧರಿಸಲು ಒಪ್ಪದೇ ಇದ್ದದ್ದು.
ಮೃತ ರೂಪಾಲಿ ಕುಟುಂಬಸ್ಥರ ಪ್ರಕಾರ ಅವರಿಬ್ಬರದ್ದೂ ಪ್ರೇಮ ವಿವಾಹ. ಅದಾಗಲೇ ಮದುವೆಯಾಗಿದ್ದ ರೂಪಾಲಿ ಟ್ಯಾಕ್ಸಿ ಡ್ರೈವರ್ ಇಕ್ಬಾಲ್‍ನನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆ ನಂತರ ರೂಪಾಲಿ ಹೆಸರು ಬದಲಿಸಿಕೊಂಡು ಝಾರಾ ಆಗಿದ್ದರು. ಆದರೆ ಇಸ್ಲಾಂ ಸಂಪ್ರದಾಯಗಳ ಪಾಲನೆಗೆ ಒಪ್ಪುತ್ತಿರಲಿಲ್ಲ. ಮಗುವಿನ ಪಾಲನೆ ಹಾಗೂ ಬುರ್ಖಾ ಧರಿಸಬೇಕು ಎನ್ನುವ ಷರತ್ತು ಒಪ್ಪಿಗೆ ಇರಲಿಲ್ಲ. ಗಂಡನ ಕಾಟ ತಡೆಯಲಾರದೆ ಇಕ್ಬಾಲ್‍ನನ್ನು ಬಿಟ್ಟು ಬಂದಿದ್ದ ರೂಪಾಲಿ ಅಲಿಯಾಸ್ ಝಾರಾ ಮಗುವನ್ನು ತಾವೇ ಸಾಕುವ ನಿರ್ಧಾರಕ್ಕೆ ಬಂದಿದ್ದರು. ಪ್ರತ್ಯೇಕ ಮನೆ ಮಾಡಿಕೊಂಡಿದ್ದರು. ಗಂಡನನ್ನು ದೂರವಿಟ್ಟಿದ್ದರು. ಆದರೆ ಮಗುವನ್ನು ತನಗೇ ಕೊಡಬೇಕು ಎಂದು ಇಕ್ಬಾಲ್ ಹಠ ಹಿಡಿದಿದ್ದ. ಜಗಳ ಮಾಡುತ್ತಿದ್ದ. ಒಪ್ಪದೇ ಹೋದಾಗ ಹೆಂಡತಿ ಝಾರಾಳನ್ನು ಹೊರಗೆಳೆದು ಬೀದಿಗೆ ತಂದವನೇ ಕತ್ತು ಸೀಳಿ ಹಾಕಿದ್ದಾನೆ. ಹಲವು ಬಾರಿ ಆಕೆಯ ದೇಹಕ್ಕೆ ಚೂರಿಯಿಂದ ಚುಚ್ಚಿದ್ದಾನೆ. ರೂಪಾಲಿ ನಡುಬೀದಿಯಲ್ಲಿಯೇ ಶವವಾಗಿದ್ದಾರೆ.
ಘಟನೆ ನಡೆದಿರುವುದು ಮುಂಬೈನ ಚೆಂಬೂರು ತಿಲಕ್ ನಗರ ಪ್ರದೇಶದಲ್ಲಿ. ಅಂದಹಾಗೆ ಈ ಘಟನೆಯಲ್ಲಿ ಕೊಲೆಯಾದ ಯುವತಿಯ ವಯಸ್ಸು ಕೇವಲ 20. ಮದುವೆಯಾಗಿ 3 ವರ್ಷವಾಗಿತ್ತು ಎಂದರೆ ಮದುವೆಯಾದಾಗ ಆಕೆ ಮೈನರ್ ಎಂದಾಗುತ್ತದೆ. ಈ ತಪ್ಪು ಮುಚ್ಚಿಕೊಳ್ಳೋಕೆ ಆಕೆಯನ್ನು ಮತಾಂತರ ಮಾಡಿ ಮದುವೆಯಾಗಿದ್ದ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಇಬ್ಬರ ಮಧ್ಯೆ ದೊಡ್ಡ ವಯಸ್ಸಿನ ಅಂತರವೂ ಇತ್ತು. ಮದುವೆಯಾದಾಗ ರೂಪಾಲಿಗೆ 17 ವರ್ಷವಾಗಿದ್ದರೆ ಇಕ್ಬಾಲ್‍ಗೆ 33 ವರ್ಷ. ಹಾಗಾಗಿ ಇದೊಂದು ಟ್ರ್ಯಾ; ಲವ್ ಜಿಹಾದ್ ಆಗಿತ್ತು. ಆದರೆ ಪ್ರೀತಿಯಲ್ಲಿ ಬಿದ್ದಿದ್ದವಳಿಗೆ ಇದು ಆಗ ಅರ್ಥವಾಗಿರಲಿಲ್ಲ ಎಂದು ಆರೋಪಿಸಲಾಗಿದೆ



