ಯಶ್ (Actor Yash) ಚಿತ್ರಗಳಲ್ಲಿ ಇದೂವರೆಗೆ ಹೆಚ್ಚು ನಟಿಸಿರುವುದು ಕನ್ನಡದ ನಟಿಯರೇ. ಸ್ಟಾರ್ ಆದ ನಂತರವಂತೂ ಕನ್ನಡದವರೇ ಫಿಕ್ಸ್ ಆಗಿಬಿಟ್ಟಿದ್ದಾರೆ. ನಟ ನಟಿಯರಷ್ಟೇ ಅಲ್ಲ, ನಿರ್ದೇಶಕರೂ ಅಷ್ಟೆ. ಕನ್ನಡದವರಿಗೇ ಆಗ್ರತಾಂಬೂಲ ಕೊಡುವ ಯಶ್(Actor Yash), ಈಗ ಆ ಸಂಪ್ರದಾಯವನ್ನ ಮುರಿಯುತ್ತಿದ್ದಾರಾ..? ತಾವೇ ಹಾಕಿಕೊಂಡಿದ್ದ ರೇಖೆ ದಾಟುತ್ತಿದ್ದಾರಾ..? ಹೀಗೊಂದು ಅನುಮಾನ ಕಾಡೋಕೆ ಶುರುವಾಗಿರೋದು ನಿಜ.
ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ ತೆರೆಕಂಡು ಬರೋಬ್ಬರಿ ಬರೋಬ್ಬರಿ 17 ತಿಂಗಳುಗಳಾಗಿವೆ. ಕೆಜಿಎಫ್ 2 ರಿಲೀಸ್ ಆಗುವುದಕ್ಕೆ ಮುಂಚೆ ಹೆಚ್ಚೂ ಕಡಿಮೆ ಒಂದು ವರ್ಷ ಪೋಸ್ಟ್ ಪ್ರೊಡಕ್ಷನ್ ಕೆಲಸವೇ ಇತ್ತು. ಆದರೆ ಇದೂವರೆಗೆ ಯಶ್ 19ನೇ ( Yash19 ) ಸಿನಿಮಾ ಘೋಷಣೆ ಆಗಿಲ್ಲ. ಈ ಗ್ಯಾಪ್‍ನಲ್ಲಿ ಅದೆಷ್ಟೋ ಚಿತ್ರಗಳು ಘೋಷಣೆಯಾಗಿ, ಸೆಟ್ ಏರಿ, ಚಿತ್ರೀಕರಣ ಮುಗಿಸಿ, ಥಿಯೇಟರಿಗೆ ಬಂದು ಹೋಗಿಯೂ ಬಿಟ್ಟವು. ಯಶ್ ಅಭಿಮಾನಿಗಳು ಈಗಲೂ ಕಾಯುತ್ತಲೇ ಇದ್ದಾರೆ. ಈ ಮಧ್ಯೆ ಹೊಸ ಸುದ್ದಿಯೊಂದು ಬಂದಿದೆ.
ಗೀತು ಮೋಹನ್ ದಾಸ್ ( Geethu Mohan das ). ಮಲಯಾಳಂ ( Malayalam ) ನಿರ್ದೇಶಕಿ. ಲೈಯರ್ಸ್ ಡೈಸ್ ಅನ್ನೋ ಸಿನಿಮಾವನ್ನು ಡೈರೆಕ್ಟ್ ಮಾಡಿ, ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದ ನಿರ್ದೇಶಕಿ. ಗೀತು ಮೋಹನ್ದಾಸ್ ಅವರೇ ಯಶ್ ಅವರ ಮುಂದಿನ ಡೈರೆಕ್ಟರ್ ಎಂಬ ಸುದ್ದಿ ಬಲವಾಗಿ ಕೇಳಿಬಂತು.
ಗೀತು ಮೋಹನ್ದಾಸ್ ಜತೆ ಸಿನಿಮಾ ಮಾಡುವ ಬಗ್ಗೆ ಈವರೆಗೂ ಯಶ್ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಗೀತು ಮೋಹನ್ದಾಸ್ & ಯಶ್ ಕಾಂಬಿನೇಷನ್ ಸಿನಿಮಾ ಸೆಟ್ಟೇರುವುದು ಖಾಯಂ ಅನ್ನುತ್ತಿವೆ ಆಪ್ತ ಮೂಲಗಳು. ಎಲ್ಲ ಅಂದುಕೊಂಡಂತೆ ನಡೆದರೆ, ಡಿಸೆಂಬರ್ನಲ್ಲಿ ಶೂಟಿಂಗ್ ಆರಂಭವಾಗುವುದು ನಿಶ್ಚಿತ ಎನ್ನಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಈವರೆಗೂ ಸಿಕ್ಕಿಲ್ಲ. ಈ ಮಧ್ಯೆ ಯಶ್ ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ ಅನ್ನೋ ಸುದ್ದಿ ಕೂಡ ಕೇಳಿಬಂದಿತ್ತು. ಆದರೆ ಅದ್ಯಾವುದು ನಿಜವಲ್ಲ.
ಇದೀಗ ಹೀರೋಯಿನ್ (mallu actress) ಹೆಸರನ್ನೂ ಫೈನಲ್ ಮಾಡಿದ್ದಾರೆ ಅನ್ನೋ ಸುದ್ದಿ ಇದೆ. ಒನ್ಸ್ ಎಗೇನ್ ಅವರೂ ( mallu ) ಮಲಯಾಳಂನವರೇ. ಸಂಯುಕ್ತಾ ಮೆನನ್ ( Samyuktha menon ). ಇತ್ತೀಚೆಗೆ ಗಾಳಿಪಟ 2ನಲ್ಲಿ ನಟಿಸಿದ್ದರಲ್ಲ, ಅದೇ ಸಂಯುಕ್ತಾ ಮೆನನ್. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಸಂಯಕ್ತಾ ಮೆನನ್, ಯಶ್ ಎದುರು ನಾಯಕಿಯಾಗುತ್ತಿದ್ದಾರೆ ಅನ್ನೋದು ಸುದ್ದಿ. ಹೊಸ ಸಿನಿಮಾ ಗಣೇಶ ಹಬ್ಬಕ್ಕೆ ಅನೌನ್ಸ್ ಆಗಲಿದೆ ಅನ್ನೋದೂ ಕೂಡಾ ಸುದ್ದಿಯೇ. ಆದರೆ ಇದ್ಯಾವುದೂ ಅಧಿಕೃತ ಅಲ್ಲ.
ಅಂದಹಾಗೆ ಯಶ್ ( Yash19 ) ಏನೇ ಮಾಡಿದರೂ ಕನ್ನಡದ ಬಾವುಟ ಹಾರಿಸ್ತಾರೆ. ಕನ್ನಡಿಗರು ಹೆಮ್ಮೆ ಪಡೋ ಹಾಗೆ ಮಾಡ್ತಾರೆ ಅನ್ನೋದು ಅಭಿಮಾನಿಗಳ ಆತ್ಮವಿಶ್ವಾಸ. ಇನ್ನೂ ಹೆಚ್ಚಿನದಾಗಿ ಇದು ಸಿನಿಮಾ. ಕಥೆ ಹೇಳೋದು ಮುಖ್ಯ. ಯಾರು ಚೆನ್ನಾಗಿ ಕಥೆ ಹೇಳ್ತಾರೋ.. ಅವರು ಗೆಲ್ತಾರೆ. ನೋಡೋಣ. ಇನ್ನೂ ಟೈಮಿದೆ ಅಲ್ವಾ..



