ಗಣೇಶ್ ಚಿತ್ರಗಳೆಂದ ಮೇಲೆ.. ಅಲ್ಲಿ ಒಬ್ಬರೇ ಹೀರೋಯಿನ್ ಇರೋದು ಅಪರೂಪ. ಅದರಲ್ಲೂ ಇತ್ತೀಚೆಗೆ ಗಣೇಶ್ ಚಿತ್ರಗಳಲ್ಲಿ ಇಬ್ಬರು.. ಮೂವರು ಹೀರೋಯಿನ್ ಇರೋದು ಕಾಮನ್ ಆಗಿ ಹೋಗಿದೆ. ಆದರೆ. ಕೃಷ್ಣಂ ಪ್ರಣಯ ಸಖಿಯಲ್ಲಿ ಒಬ್ಬರಲ್ಲ.. ಇಬ್ಬರಲ್ಲ.. ಮೂವರಲ್ಲ.. ನಾಲ್ವರಲ್ಲ.. ಐವರಲ್ಲ.. 6 ಅಲ್ಲ.. 7 ಅಲ್ಲ. ಬರೋಬ್ಬರಿ 8 ಜನ ಇದ್ದಾರೆ. ಹಾಗಾದರೆ.. ಅವರೆಲ್ಲರೂ ಗಣೇಶ್ ಪ್ರೇಯಸಿಯರಾ.. ಗೊತ್ತಿಲ್ಲ.
ಪ್ರೀತಿ ಖಯಾಲಿ..
ನನ್ನ ಹಾರ್ಟಲ್ಲಿ..
ಡೌಟು ಇನ್ನೆಲ್ಲಿ..
ಐ ಆಮ್ ಸೋ ಲವ್ ವಿತ್ ಯೂ..
ಲೆಕ್ಕ ಇನ್ನೆಲ್ಲಿ..
ಎಲ್ಲ ಮಾಮೂಲಿ..
ನಮ್ಮ ಪ್ರೀತಿಲಿ..
ಓ ಗರ್ಲ್ ಅವರ್ ಲವ್ ಈಸ್ ಟ್ರೂ..
ತುಂಟತನದ ಸಾಹಿತ್ಯವೇ ಇರುವ ಈ ಹಾಡಿನಲ್ಲಿ ಕೃಷ್ಣನ ಜೊತೆ ಒಬ್ಬಿಬ್ಬರಲ್ಲ. ಬರೋಬ್ಬರಿ 8 ಜನ. ಅವರೆಲ್ಲರ ಜೊತೆಯಲ್ಲೂ ರೊಮ್ಯಾನ್ಸ್ ಇದೆಯಾ..? ಸಿನಿಮಾ ನೋಡೀನೇ ಹೇಳಬೇಕು. ಗೋಲ್ಡನ್ ಸ್ಟಾರ್ ಗಣೇಶ್ ಎದುರು ನಾಯಕಿಯಾಗಿರೋದು ಮಾಳವಿಕ ನಾಯರ್. ಉಳಿದ 7 ಚೆಲುವೆಯರ ಕಥೆ ಏನು..? ಅವರೆಲ್ಲ ಏಕೆ ಗಣೇಶ್ ಜೊತೆ ಮದುವೆ ಡ್ರೆಸ್ಸಿನಲ್ಲಿದ್ಧಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗೋದು ಸಿನಿಮಾ ಥಿಯೇಟರಿಗೆ ಬಂದಾಗಲೇ.
ಇದುವರೆಗೆ ರಕ್ತಸಿಕ್ತ ಚಿತ್ರಗಳನ್ನೇ ಮಾಡಿದ್ದ ಶ್ರೀನಿವಾಸ್ ರಾಜು ಈ ಬಾರಿ ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ನಿರ್ದೇಶಿಸಿದ್ಧಾರೆ. ನಿಶಾನ್ ರೈ ಸಾಹಿತ್ಯಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಹಾಡಿಗೆ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಧ್ವನಿಯಾಗಿದ್ಧಾರೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಚಿತ್ರ ತ್ರಿಶೂಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬರುತ್ತಿದೆ. ಚಿತ್ರ ಶೀಘ್ರದಲ್ಲೇ ರಿಲೀಸ್ ಆಗಲಿದೆ.
ಬೆಂಗಳೂರು, ವಿಯೆಟ್ನಾಂ ಸೇರಿದಂತೆ ಹಲವು ಸುಂದರವಾದ ತಾಣಗಳಲ್ಲಿ ಚಿತ್ರತಂಡ ಚಿತ್ರೀಕರಣವಾಗಿದೆ. ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ 41 ನೇ ಸಿನಿಮಾ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.



