ಕೋಲಾರಕ್ಕೆ ಸಿದ್ದರಾಮಯ್ಯ ನಿಲ್ಲಲಿದ್ದಾರೆ ಎಂದು ಗೊತ್ತಾಗಿದ್ದೇ ತಡ.. ಸಂಚಲನ ಸೃಷ್ಟಿಯಾಯಿತು. ಸಿದ್ದರಾಮಯ್ಯ ಈ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳೋಕೆ ಹಲವು ಕಾರಣಗಳಿವೆ. ಪ್ರತೀಕೂಲ ಅಂಶಗಳೂ ಇವೆ. ಇಷ್ಟೆಲ್ಲ ಆಗಿಯೂ ಸಹಜವಾಗಿಯೇ ಕುಮಾರಸ್ವಾಮಿಯವರಿಗೆ ಎದುರಾಗಿದ್ದು ನಿಮ್ಮ ಹೋರಾಟ, ತಂತ್ರಗಾರಿಕೆ ಏನಿರುತ್ತೆ ಎಂಬ ಪ್ರಶ್ನೆ.

ಸಿದ್ದರಾಮಯ್ಯ ಅವರಿಗೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಲ್ಲೋಕೆ ಸ್ವಾತಂತ್ರ್ಯವಿದೆ. ನಾವು ಕೆಲಸ ಮಾಡೋದು ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳೋಕೆ ಕೆಲಸ ಮಾಡುತ್ತೇವೆ. ಅವರು ತುಂಬಾ ಸೀನಿಯರ್ ರಾಜಕಾರಣಿ. ತುಂಬಾ ಲೆಕ್ಕಾಚಾರ ಹಾಕಿ, ಅಳೆದು ತೂಗಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಸೋಲು ಗೆಲುವನ್ನು ನಿರ್ಧಾರ ಮಾಡೋದು ಜನ. ನಮ್ಮ ಕೆಲಸ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋದು. ಅಷ್ಟೆ ಎಂದಿದ್ದಾರೆ ಕುಮಾರಸ್ವಾಮಿ.




ಎತ್ತಿನಹೊಳೆ ಯೋಜನೆಗೆ ಹಣ ಬಿಡುಗಡೆ ಮಾಡಿದಾಗ, ಕೆಲಸ ಮಾಡಿದಾಗ ಸಿದ್ದರಾಮಯ್ಯ ಹೇಳಿದ್ದೇನು ಎನ್ನುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಈಗ ಅಷ್ಟು ಕೊಡ್ತೇನೆ, ಇಷ್ಟು ಕೊಡ್ತೇನೆ ಎಂದರೆ ನಂಬೋಕೆ ಜನ ಮೂರ್ಖರಲ್ಲ ಎಂದಿದ್ದಾರೆ ಕುಮಾರಸ್ವಾಮಿ. ನೀರೇ ಕೊಡದವರು ಮಜ್ಜಿಗೆ ಕೊಡ್ತಾರಾ ಅನ್ನೋದು ಕುಮಾರಸ್ವಾಮಿ ಪ್ರಶ್ನೆ.



