ಹಲೋ.. ಅಣ್ಣಾ.. ಸುದೀಪಣ್ಣ ಇಲ್ಲೇ ಇದ್ದಾರೆ.. ಕೊಡ್ತೀನಿ.. ಮಾತನಾಡಿ..
ಮಹಮ್ಮದ್ ನಲಪಾಡ್, ಹೀಗೊಂದು ಫೋನ್ ಮಾಡಿ ಡಿಕೆ ಶಿವಕುಮಾರ್ ಮತ್ತು ಕಿಚ್ಚ ಸುದೀಪ್ ನಡುವೆ ಮಾತನಾಡಿಸದೆ ಇದ್ದರೆ, ಬಿಗ್ ಬಾಸ್ ಹಂಗಾಮ ಕಂಟಿನ್ಯೂ ಆಗುತ್ತಲೇ ಇರುತ್ತಿತ್ತೇನೋ.. ಮುಗಿಯುತ್ತಿರಲಿಲ್ಲ. ಕಿಚ್ಚ, ಡಿಕೆ ಮಧ್ಯೆ ನಲಪ್ಪಾಡ್ ಸಂಧಾನ ಮಾಡುವುದಕ್ಕೆ.. ಅಲ್ಲಲ್ಲ.. ಬ್ರಿಡ್ಜ್ ಆಗುತ್ತಿರುವುದಕ್ಕೆ ಕಾರಣ ಏನಿದೆಯೋ.. ಏನೋ.. ಬಿಗ್ ಬಾಸ್ ಮತ್ತೆ ಶುರುವಾಗಿದೆ.
ಬಿಗ್ ಬಾಸ್ ಶೋ ರೀಸ್ಟಾರ್ಟ್ ಆಗಿದೆ. ಜಾಲಿವುಡ್ ಬಿಗ್ ಬಾಸ್ ಮನೆಗೆ ಹಾಕಿದ್ದ ಬೀಗವನ್ನು ತೆಗೆಯಲಾಗಿದೆ. ಕೋರ್ಟು, ಮಾತುಕತೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಠ.. ಎಲ್ಲದರ ನಡುವೆ ವಿವಾದಕ್ಕೆ ಕೊನೆ ಹಾಡಿದ್ದು ಸ್ವತಃ ಡಿಕೆ ಶಿವಕುಮಾರ್. ಡಿಕೆ ಜೊತೆ ಮಾತನಾಡಿದ್ದು ಬಿಗ್ ಬಾಸ್ ನಿರೂಪಕರೂ ಆಗಿರುವ ಕಿಚ್ಚ ಸುದೀಪ್. ಅಂದಹಾಗೆ ಈಗ ಓಪನ್ ಆಗಿರೋದು ಬಿಗ್ ಬಾಸ್ ಹೌಸ್ ಮಾತ್ರ. ಇಡೀ ಜಾಲಿವುಡ್ ಸ್ಟುಡಿಯೋ ಅಲ್ಲ.
ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಶೋ ರೀ-ಓಪನ್ ಆಗಿದೆ. ಜಾಲಿವುಡ್ ಸ್ಟುಡಿಯೋಸ್‌ನ ಮಿಕ್ಕೆಲ್ಲ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಮುಖ್ಯದ್ವಾರ ಈಗಲೂ ಓಪನ್ ಇಲ್ಲ.
ವಿವಾದ ಬಗೆಹರಿಯುತ್ತಿದ್ದಂತೆಯೇ ಕಿಚ್ಚ ಸುದೀಪ್ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಅವ್ಯವಸ್ಥೆ ವಿಚಾರಗಳಿಗೂ, ಬಿಗ್ ಬಾಸ್ ಆಯೋಜಕರಿಗೂ ಸಂಬಂಧ ಇಲ್ಲ ಎಂದು ಅಧಿಕಾರಿಗಳಿಗೆ ಹೇಳಿರುವ ಸುದೀಪ್, ಬಿಗ್ ಬಾಸ್ ರೀ-ಓಪನ್ ಆಗಲು ಸಹಕರಿಸಿದ ಡಿಕೆ ಶಿವಕುಮಾರ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ಸುದೀಪ್ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಸೇತುವೆಯಂತೆ ಕೆಲಸ ಮಹಮ್ಮದ್ ನಲಪಾಡ್. ನಲಪಾಡ್ ಅವರಿಗೂ ಸುದೀಪ್ ಥ್ಯಾಂಕ್ಸ್ ಹೇಳಿದ್ದಾರೆ.
ನಾನು ಡಿಕೆ ಸಾಹೇಬರಿಗೆ ಫೋನ್ ಮಾಡಿ, ಸುದೀಪ್ ಅವರಿಗೆ ಕೊಟ್ಟಿದ್ದೇನಷ್ಟೇ. ವಿವಾದ ಬಗೆಹರಿಯೋದಕ್ಕೆ ಸುದೀಪ್ ಮತ್ತು ಡಿಕೆ ಸಾಹೇಬರೇ ಕಾರಣ ಎಂದಿದ್ದಾರೆ ನಲಪಾಡ್.
ʻʻಬಿಗ್‌ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆಯಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದುʼʼ ಎಂದು ಡಿಕೆ ತಿಳಿಸಿದ್ದಾರೆ. ಇದರ ಜೊತೆಯಲ್ಲೇ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದೂ ಡಿಕೆ ಹೇಳಿದ್ದಾರೆ.
ಯಾರು ಈ ಮಹಮ್ಮದ್ ನಲಪ್ಪಾಡ್..?
ಮಹಮ್ಮದ್ ನಲಪ್ಪಾಡ್, ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ. ಯುವ ಕಾಂಗ್ರೆಸ್ ನಾಯಕ. ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಈ ವ್ಯಕ್ತಿಯ ಹೆಸರು ಮೊದಲು ಕೇಳಿ ಬಂದಿದ್ದು ಯಾವಾಗ ನೆನಪಿದೆಯೇ.. ಯುವ ರಾಜ್ ಕುಮಾರ್ (ಆಗಿನ್ನೂ ಗುರು) ಅವರ ಗೆಳೆಯನೊಬ್ಬ ಹೋಟೆಲ್ಲೊಂದಕ್ಕೆ ಹೋಗಿದ್ದಾಗ ನಲಪ್ಪಾಡ್ ಅವರ ಗ್ಯಾಂಗಿನ ಸದಸ್ಯರು ಕಾಲು ತುಳಿದು ಜಗಳ ಮಾಡಿದ್ದರು. ಮುಖಮೂತಿ ಕಿತ್ತು ಹೋಗುವಂತೆ ಹೊಡೆದಿದ್ದರು. ಬಹುಶಃ ಆವತ್ತು ಗೆಳೆಯನ ರಕ್ಷಣೆಗೆ ಯುವ ರಾಜ್ ಕುಮಾರ್ ಹೋಗದೇ ಇದ್ದಿದ್ದರೆ, ಇವನು ಅಣ್ಣಾವ್ರ ಮೊಮ್ಮಗ ಕಣ್ರೋ ಅಂಥಾ ನಲಪ್ಪಾಡ್ ಗ್ಯಾಂಗಿನ ಸದಸ್ಯನೊಬ್ಬ ಹೇಳದೇ ಹೋಗಿದ್ದರೆ.. ಏನಾಗುತ್ತಿತ್ತೋ.. ಏನೋ.. ಗೊತ್ತಿಲ್ಲ. ಡಾ.ರಾಜ್ ಎಂಬ ಹೆಸರು ಆವತ್ತು ನಲಪ್ಪಾಡ್ ಗ್ಯಾಂಗಿನ ಅಟ್ಟಹಾಸದ ವಿರುದ್ಧ ರಕ್ಷಣೆ ಕೊಟ್ಟಿತ್ತು. ಇವತ್ತು ನಲಪ್ಪಾಡ್ ಗ್ಯಾಂಗನವರಿಂದ ಹಾಗೆ ಒದೆ ತಿಂದು ಹೋದ ವ್ಯಕ್ತಿ, ಕರ್ನಾಟಕಕ್ಕೆ ಹೆಚ್ಚು ಬರೋದೇ ಇಲ್ಲ. ಇನ್ನು ನಲಪ್ಪಾಡ್ ಆ ಕೇಸಿನಲ್ಲಿ ಅರೆಸ್ಟ್ ಆದಂತೆ ಆಗಿ, ಆಮೇಲೆ ಯುವ ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೂ ಆಯ್ತು. ಮುಂದೆ.. ಹ್ಯಾರಿಸ್ ಅವರ ಕ್ಷೇತ್ರಕ್ಕೆ ಟಿಕೆಟ್ ಪಡೆಯುತ್ತಾರೆ. ಯುವ ನಾಯಕ.



