ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಸಿಆರ್ ರಣಕಹಳೆ ಮೊಳಗಿಸಿದ್ದಾರೆ. ಇತ್ತೀಚೆಗೆ ತೆಲಂಗಾಣದ ಖಮ್ಮಂನಲ್ಲಿ ಕೆಸಿಆರ್ ಬೃಹತ್ ಸಮಾವೇಶ ನಡೆಸಿದ್ದರು. ತಮ್ಮ ತೆಲಂಗಾಣ ರಾಷ್ಟ್ರೀಯ ಸಮಿತಿಯನ್ನು ಭಾರತೀಯ ರಾಷ್ಟ್ರೀಯ ಸಮಿತಿಯಾಗಿ ಬದಲಿಸಿ, ರಾಷ್ಟ್ರಮಟ್ಟದ ಹೋರಾಟಕ್ಕೆ ರೆಡಿಯಾಗಿರುವ ಕೆಸಿಆರ್, ಈ ಹೋರಾಟದಲ್ಲಿ ತಾವೊಬ್ಬರೇ ಅಲ್ಲ, ಹಲವರನ್ನು ಜೊತೆಗೂಡಿಸಿಕೊಂಡಿದ್ದಾರೆ. 






