70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಗಳ ಸರಣಿಯಲ್ಲಿ ಕನ್ನಡದ, ಕನ್ನಡಿಗರ ಝೇಂಕಾರವೇ ಮೊಳಗಿದೆ. ಒಟ್ಟು 7 ಪ್ರಶಸ್ತಿಗಳು ಲಭಿಸಿದಂತಾಗಿದೆ. ಈ ಬಾರಿಯ ವಿಶೇಷ ಎಂದರೆ ಕನ್ನಡಿಗ ಹೀರೋ ರಿಷಬ್ ಶೆಟ್ಟಿಯೇ ಅತ್ಯುತ್ತಮ ನಟಿ. ಕನ್ನಡತಿ ನಿತ್ಯಾ ಮೆನನ್ ತಮಿಳು ಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದರೂ, ಈಕೆ ಮೂಲತಃ ಕನ್ನಡತಿ. ನಿತ್ಯಾ ಮೆನನ್ ಅವರ ಮಾತೃಭಾಷೆ ಮಲಯಾಳಂ ಆದರೂ.. ಕನ್ನಡದಷ್ಟು ಚೆನ್ನಾಗಿ ಓದಲು, ಬರೆಯಲು ಬರೋದಿಲ್ಲ. ಒಟ್ಟಿನಲ್ಲಿ ಕನ್ನಡದಕ್ಕೆ ರಾಷ್ಟ್ರಪ್ರಶಸ್ತಿಗಳಲ್ಲಿ ದಶಕಗಳಿಂದ ಇದ್ದ ಬರ ನೀಗಿದಂತೆಯೂ ಆಗಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ವರ್ಷ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಇನ್ನೂ ಹಲವು ನಟರಿಂದ ಸ್ಪರ್ಧೆ ಇತ್ತು. ಆದರೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಒಲಿದಿದೆ.
ಕನ್ನಡದಲ್ಲಿ ಈ ಹಿಂದೆ ರಾಷ್ಟ್ರಪ್ರಶಸ್ತಿ ಪಡೆದಿದ್ದವರು ವಾಸುದೇವ ರಾವ್ (ಚೋಮನ ದುಡಿ), ತಬರನ ಕಥೆ (ಚಾರು ಹಾಸನ್) ಸಂಚಾರಿ ವಿಜಯ್ (ನಾನವನಲ್ಲ ಅವಳು) ಪಡೆದಿದ್ದರು. ಇವರಲ್ಲಿ ಚಾರು ಹಾಸನ್ ಮೂಲತಃ ತಮಿಳಿನವರು. ಆದರೆ ಪ್ರಶಸ್ತಿ ಪಡೆದಿದ್ದು ಕನ್ನಡ ಚಿತ್ರಕ್ಕೆ. ಇದೀಗ ಕಾಂತಾರ ಚಿತ್ರಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕರು ಇಬ್ಬರೂ ಕನ್ನಡದವರೇ.
ಕನ್ನಡದಲ್ಲಿ ಬೆಸ್ಯ್ ಆ್ಯಕ್ಟರ್ ಪ್ರಶಸ್ತಿ ಪಡೆದ 4ನೇ ಕಲಾವಿದರಾಗಿ ರಿಷಬ್ ಶೆಟ್ಟಿ ಹೊರಹೊಮ್ಮಿದ್ದು, ಹೊಂಬಾಳೆ ಅತ್ಯುತ್ತಮ ಚಿತ್ರಗಳನ್ನು ನೀಡುವ ಪ್ರೊಡಕ್ಷನ್ ಹೌಸ್ ಆಗಿ ಪರಿಗಣಿಸಲ್ಪಟ್ಟಿದೆ.
ಇದುವರೆಗೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿಗಳು ಬಂದಾಗ ಮಾತ್ರ ಅಂಥದ್ದೊಂದು ಚಿತ್ರವಿದೆ ಎಂಬುವುದು ಕನ್ನಡ ಚಿತ್ರ ರಸಿಕರ ಗಮನಕ್ಕೆ ಬರುತ್ತಿತ್ತು. ಆದರೆ, ಈ ಸಾರಿ ಪ್ಯಾನ್ ಇಂಡಿಯಾದಲ್ಲಿ ಹೆಸರು ಮಾಡಿದ ಯಶ್ ನಟನೆಯ ಕೆಜಿಎಫ್-2 ಹಾಗೂ ಕಾಂತಾರ ಚಿತ್ರಗಳು ಎರಡೆರಡರು ಪ್ರಶಸ್ತಿಗಳು ಬಾಚಿ ಕೊಂಡಿರುವುದು ಮತ್ತೊಂದು ವಿಶೇಷ. ಕನ್ನಡಕ್ಕಲ್ಲದೇ ಮತ್ತೆ ಯಾವ ಯಾವ ಚಿತ್ರಗಳಿಗೆ ಪ್ರಶಸ್ತಿಗಳು ಬಂದಿವೆ, ಇಲ್ಲಿದೆ ಪಟ್ಟಿ.
ಬೆಸ್ಟ್ ಫೀಚರ್ ಫಿಲ್ಮ್ : ಆಟ್ಟಮ್ (Best Feature Film – Aattam)
ಅತ್ಯುತ್ತಮ ನಟ : ರಿಷಭ್ ಶೆಟ್ಟಿ (Best Actor – Rishab Shetty)
ಅತ್ಯುತ್ತಮ ನಟಿಯರು : ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್ (Best Actress – Nithya Menen and Manasi Parekh)
ಅತ್ಯುತ್ತಮ ನಿರ್ದೇಶಕ : ಸೂರಜ್ ಬರ್ಜಾತ್ಯ (Best Director – Sooraj Barjatya)
ಅತ್ಯುತ್ತಮ ಪೋಷಕ ನಟಿ : ನೀನಾ ಗುಪ್ತಾ (Best Supporting Actress – Neena Gupta)
ಅತ್ಯುತ್ತಮ ಪೋಷಕ ನಟ : ಪವನ್ ಮಲ್ಹೋತ್ರಾ (Best Supporting Actor – Pawan Malhotra)
ಅತ್ಯುತ್ತಮ ಮನೋರಂಜನಾ ಚಿತ್ರ : ಕಾಂತಾರ (Best Feature Film Providing Wholesome Entertainment – Kantara)
ಅತ್ಯುತ್ತಮ ಹೊಸ ಮುಖಗಳು : ಫೌಜಾ, ಪ್ರಮೋದ್ ಕುಮಾರ್ (Best Debut – Fouja, Pramod Kumar)
ಅತ್ಯುತ್ತಮ ತೆಲಗು ಚಿತ್ರ : ಕಾರ್ತಿಕೇಯ 2 (Best Telugu Film – Kartikeya 2)
ಅತ್ಯುತ್ತಮ ಚಿತ್ರ : ಪೊನ್ನಿಯನ್ ಸೆಲ್ವನ್ ಭಾಗ-1 (Best Tamil Film – Ponniyin Selvan – Part 1)
ಅತ್ಯುತ್ತಮ ಪಂಜಾಬಿ ಚಿತ್ರ : ಬಾಘಿ ದಿ ಧೀ(Best Punjabi Film – Baaghi Di Dhee)
ಅತ್ಯುತ್ತಮ ಒಡಿಯಾ ಚಿತ್ರ : ದಾಮನ್ (Best Odia Film – Daman)
ಅತ್ಯುತ್ತಮ ಮಲಯಾಳಂ ಚಿತ್ರ : ಸೌದಿ ವೆಲಕ್ಕ ಸಿಸಿ.225/2009 (Best Malayalam Film – Saudi Velakka CC.225/2009)
ಅತ್ಯುತ್ತಮ ಮರಾಠಿ ಚಿತ್ರ : ವಾಲ್ವಿ (Best Marathi Film – Vaalvi)
ಅತ್ಯುತ್ತಮ ಕನ್ನಡ ಚಿತ್ರ : ಕೆಜಿಎಫ್ ಚಾಪ್ಟರ್ 2 (Best Kannada Film – KGF: Chapter 2)
ಅತ್ಯುತ್ತಮ ಹಿಂದಿ ಚಿತ್ರ : ಗುಲ್ ಮೊಹರ್ (Best Hindi Film – Gulmohar)
ವಿಶೇಷ ಉಲ್ಲೇಖ : ಗುಲ್ ಮೊಹಹರ್ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್ ಚಿತ್ರಕ್ಕಾಗಿ ಸಂಜಯ್ ಸಲೀಲ್ ಜೌಧರಿ (Special Mentions – Manoj Bajpayee in Gulmohar, and Sanjoy Salil Chowdhury for Kalikhan)
ಅತ್ಯುತ್ತಮ ಆ್ಯಕ್ಷನ್ ನಿರ್ದೇಶಕ : ಕೆಜಿಎಫ್-2 ( Best Action Direction – KGF: Chapter 2)
ಅತ್ಯುತ್ತಮ ನೃತ್ಯ ನಿರ್ದೇಶನ : ತಿರುಚಿತ್ರಬಲಮ್ (Best Choreography – Tiruchitrabalam)
ಅತ್ಯುತ್ತಮ ಸಾಹಿತ್ಯ :ಪೌಜಾ (Best Lyrics – Fouja)
ಅತ್ಯುತ್ತಮ ಸಂಗೀತ ನಿರ್ದೇಶಕ : ಪ್ರೀತಮ್ (ಹಾಡು) ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ) (Best Music Director – Pritam (Songs), AR Rahman (Background Score)
ಅತ್ಯುತ್ತಮ ಪ್ರಸಾದನ : ಅಪರಾಜಿತೋ (Best Makeup – Aparajito)
ಅತ್ಯುತ್ತಮ ವಸ್ತ್ರ ವಿನ್ಯಾಸ : ಕಚ್ ಎಕ್ಸ್‌ಪ್ರೆಸ್ (Best Costumes – Kutchh Express)
ಅತ್ಯುತ್ತಮ ಪ್ರೊಡಕ್ಷನ್ ವಿನ್ಯಾಸ : ಅಪರಾಜಿತೋ (Best Production Design – Aparajito)
ಅತ್ಯುತ್ತಮ ಸಂಕಲನ : ಸುರೇಶ್ ಅರಸ್, ಮಧ್ಯಂತರ (Best Editing – Madhyantara)
ಅತ್ಯುತ್ತಮ ಧ್ವನಿ ಸಂಯೋಜನ್ : ಪೊನ್ನಿಯಿನ್ ಸೆಲ್ವನ್-1 (Best Sound Design – Ponniyin Selvan – Part 1)
ಅತ್ಯುತ್ತಮ ಸಂಕಲನ : ಆಟ್ಟಮ್ (Best Screenplay – Aattam)
ಅತ್ಯುತ್ತಮ ಸಂಭಾಷಮೆ : ಗುಲ್ ಮೊಹರ್ (Best Dialogues – Gulmohar)
ಬೆಸ್ಟ್ ಛಾಯಾಗ್ರಹಣ : ಪೊನ್ನಿಯಿನ್ ಸೆಲ್ವನ್-1 (Best Cinematography – Ponniyin Selvan – Part 1)
ಅತ್ಯುತ್ತಮ ಹಿನ್ನೆಲೆ ಗಾಯಕ : ಸೌದಿ ವೆಲಕ್ಕ ಸಿಸಿ 225/2009 (Best Female Playback – Soudi Velakka CC.225/2009)
ಅತ್ಯುತ್ತಮ ಹಿನ್ನೆಲೆ ಗಾಯಕಿ : ಬ್ರಹ್ಮಾಸ್ತ್ರ-ಶ್ರೇಯಾ ಘೋಷಾಲ್ (Best Female Playback – Brahmastra)



