ಉಪೇಂದ್ರ (Actor Upendra) ಅವರ ವಿರುದ್ಧ ಆಕ್ರೋಶ, ಹೋರಾಟ, ಪ್ರತಿಭಟನೆಗಳು ಹೊಸದೇನಲ್ಲ. ಆದರೆ ಈ ರೀತಿಯ ಪ್ರತಿಭಟನೆ ಹೊಸದು. ಹೊಸ ಅನುಭವ. ಇದು ಇಲ್ಲಿಗೇ ನಿಲ್ಲುತಿಲ್ಲ. ನಿಲ್ಲುವ ಸಾಧ್ಯತೆಗಳೂ ಇಲ್ಲ. ಉಪೇಂದ್ರ ವಿರುದ್ಧ ಜಾತಿನಿಂದನೆ ಕೇಸಿಗೆ ತಡೆ ಸಿಕ್ಕಿದ್ದರೂ, ಸಮಸ್ಯೆಗಳು ನಿಂತಿಲ್ಲ. ಉಪೇಂದ್ರ (Actor Upendra) ಅವರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಎಂದು ಕೆಲವರು ಒತ್ತಾಯಿಸಿ ಫಿಲ್ಮ್ ಚೇಂಬರಿಗೂ (Film Chamber) ಪತ್ರ ಬರೆದಿದ್ದಾರೆ. ಉಪೇಂದ್ರ ಅವರು ಜಾತಿನಿಂದನೆ (Atrocity) ಮಾಡುವ ಮೂಲಕ ರಾಜ್ಯದಲ್ಲಿ ಗಲಭೆ, ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. ಜಾತಿ-ಜಾತಿಗಳನ್ನು ಎತ್ತಿ ಕಟ್ಟುವ (Atrocity) ಹೊರಟಿರುವ ಉಪೇಂದ್ರ ಅವರನ್ನು ಕನ್ನಡ ಚಿತರರಂಗದಿಂದ 5 ವರ್ಷಗಳ ಕಾಲ ನಿಷೇಧ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ಮಂಡಳಿಗೆ ಪತ್ರವನ್ನು ಬರೆದಿದ್ದಾರೆ.
ಸಾಮಾಜಿಕ ಕಾರ್ಯಕರ್ತ ನವೀನ್ ಎನ್ನುವವರಿಂದ ಕರ್ನಾಟಕ ಚಲನಚಿತ್ರಮಂಡಳಿಗೆ (Film Chamber) ಮನವಿ ಸಲ್ಲಿಸಲಾಗಿದೆ. ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಲು ಪತ್ರದಲ್ಲಿ ಮನವಿ ಮಾಡಲಾಗಿದೆ. ಉಪೇಂದ್ರ ಅವರು ಗಲಭೆ, ಅಶಾಂತಿ ಸೃಷ್ಟಿಸಲು ಉಪೇಂದ್ರ ಹೊರಟಿದ್ದಾರೆ. ಅವರು ಜಾತಿ ಜಾತಿಗಳನ್ನ ಎತ್ತಿಕಟ್ಟೊ ಕೆಲಸ ಮಾಡಿದ್ದಾರೆ. ಈ ಪ್ರಕರಣವನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಬೇಕು. ನಾಡಿನ ಗೌರವವನ್ನು ಎತ್ತಿಹಿಡಿದು ಶೋಷಿತರ ಪರ ನಿಲ್ಲಬೇಕು. ಆದ್ದರಿಂದ ಉಪೇಂದ್ರ ಅವರನ್ನು ಈ ಕೂಡಲೆ ಕನಿಷ್ಠ 5 ವರ್ಷ ಚಿತ್ರರಂಗದಿಂದ ನಿಷೇಧ ಹೇರಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.
ನವೀನ್ ಅವರು ಬರೆದಿರುವ ಪತ್ರದ ಸಾರಾಂಶ ಇದು
ಮಾನ್ಯರೇ,
ವಿಷಯ : ದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು ಜಾತಿಗಳನ್ನು ಎತ್ತಿಕಟ್ಟಿ, ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂದನೆ (Atrocity) ಮಾಡಿರುವ ನಟ ಉಪೇಂದ್ರ ಅಲಿಯಾಸ್ ಉಪೇಂದ್ರ ರಾವ್ ರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಕನಿಷ್ಠ 5ವರ್ಷ ನಿಷೇದ ಹರಬೇಕೆಂದು ಮನವಿ
ಕನ್ನಡದ ನಟಿ ಎಂದು ಹೇಳಿಕೊಳ್ಳುತ್ತಿರುವ ಉಪೇಂದ್ರ ಅಲಿಯಾಸ್ ಉಪೇಂದ್ರರಾವ್ ಅಲಿಯಾಸ್ ಉಪ್ಪಿ ಎಂಬಾತ ಮೂನ್ನ ಅಂದರೆ 12.08.2023 ರಂದು ತನ್ನದೇ Upendra face book account ನಲ್ಲಿ ತನ್ನದೇ ಮಾತುಗಳ ವಿಡಿಯೋವನ್ನು ಪ್ರಸಾರ ಮಾಡಿರುತ್ತಾರೆ. ಆತ ತನ್ನ ವಿಡಿಯೋದಲ್ಲಿ ಕಟ್ಟಿ ಜನಗಳು ಎಂಬುದಕ್ಕೆ ಉದಾಹರಣೆಯಾಗಿ “ಊರು ಅಂದಲೆ ಹೊಲಗೇರಿ ಇರುತ್ತದೆ” ಎಂದು ಹೇಳಿದ್ದಾನೆ.
ಉಪೇಂದ್ರ ಅಲಿಯಾಸ್ ಉಪೇಂದ್ರ ರಾವ್ ಅಲಿಯಾಸ್ ಉಪ್ಪಿ ಎಂಬಾತ ಬ್ರಾಹ್ಮಣ ಸಮುದಾಯಕ ಸೇರಿದು ಸಾಮಾನ್ಯವಾಗಿ ದಲಿತರು ವಾಸ ಮಾಡುವ ಪ್ರದೇಶವನ್ನು ಹೊಲಗೇರಿ ಎಂದು ಹೇಳಿದ್ದಾನ. ಅಂದರೆ ಈ ರೀತಿ ದಲಿತರು ವಾಸ ಮಾಡುವ ಪ್ರದೇಶಗಳು ಕಟ್ಟ ಪ್ರದೇಶಗಳಾಗಿದ್ದು, ಊರು ಅಂದರೆ ಕಟ್ಟಿ ಪ್ರದೇಶಗಳೂ, ಕೆಟ್ಟ ಜನರೂ ಇರುತ್ತಾರೆ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಜನ ಕೆಟ್ಟದರ ವಿರುದ್ಧ ಇರಬೇಕು ಎಂದರೆ ಹೊಲಗೇರಿ ವಿರುದ್ಧ ಇರಬೇಕು ಎಂದು ಸಮುದಾಯಗಳನ್ನು ಹೊಲೆಯರ ವಿರುದ ಎತ್ತಿಕಟ್ಟಿದ್ದಾರೆ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ, ಅಥವಾ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸಬಹುದಾಗಿದೆ. ಯಾವುದೇ ವರ್ಗ ಅಥವಾ ಸಮುದಾಯದ ವಿರುದ್ಧ ಯಾವುದೇ ಅಪರಾಧವನ್ನು ಮಾಡಲು ಯಾವುದೇ ವರ್ಗ ಅಥವಾ ವ್ಯಕ್ತಿಗಳ ಸಮುದಾಯವನ್ನು ಪ್ರಚೋದಿಸುವ ಉದ್ದೇಶದಿಂದ IPC 505(1)(B)(C) ಯನ್ನು ಉಲ್ಲಂಘನೆ ಮಾಡಲಾಗಿದೆ, ಜೊತೆಗೆ ಇದೆ ಪ್ರಕರಣದ ಅಡಿಯಲ್ಲಿ ಈಗಾಗಲೇ ಹಲಸೂರು ಗೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಫ್ ಐ ಆರ್ ನೋಂದಾಣಿಯಾಗಿದೆ.
ಇದನ್ನು ವಾಣಿಜ್ಯ ಮಂಡಳಿ ಗಂಭೀರವಾಗಿ ಪರಿಗಣಿಸಿ ಇತಿಹಾಸವುಳ್ಳ ಕನ್ನಡ ಚಲನಚಿತ್ರ ವಾಣಿಜ ಮಂಡಳಿ ಗೌರವವನ್ನು ಎತ್ತಿ ಹಿಡಿದು ಶೋಷಿತರ ಜೊತೆಗೆ ವಾಣಿಜ್ಯ ಮಂಡಳಿ ನಿಲ್ಲುತ್ತದೆ ಎಂಬ ಸಂದೇಶ ಕೊಡಲು ನಟ ಎಂದು ಹೇಳಿಕೊಳ್ಳುವ ಈತನನ್ನು ಈ ಕೂಡಲೇ ಕನಿಷ್ಟ 5 ವರ್ಷ ನಿಷೇಧ ಹರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ಈಗ ಚೇಂಬರ್ ಅಧ್ಯಕ್ಷರು, ಸದಸ್ಯರು ಉಪೇಂದ್ರ ವಿರುದ್ಧ ಕ್ರಮ ತೆಗೆದುಕೊಳ್ತಾರಾ..? ಕಾದು ನೋಡಬೇಕು. ಬಹುಶಃ ಮಾಡಲಿಕ್ಕಿಲ್ಲ. ಏಕೆಂದರೆ ಯಾವುದೇ ವ್ಯಕ್ತಿಯನ್ನು ಬ್ಯಾನ್ ಮಾಡುವ, ಬಹಿಷ್ಕರಿಸುವ ಅಧಿಕಾರ ದೇಶದಲ್ಲಿ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ. ಸ್ವಾತಂತ್ರ್ಯ ದಿನಾಚರಣೆ ಹೊತ್ತಿನಲ್ಲೇ ಉಪೇಂದ್ರ ಈ ಪರಿಸ್ಥಿತಿ ಎದುರಿಸುತ್ತಿರುವುದು ಮಾತ್ರ ದುರದೃಷ್ಟಕರ.



