ಕಿಚ್ಚ ಸ್ಟೈಲ್ ಈಸ್ ಬ್ಯಾಕ್ ಅಂತಿದೆ ಮ್ಯಾಕ್ಸ್ ಟ್ರೇಲರ್. ಮಾಸ್ ಆಗಿರೋ ಟ್ರೇಲರಿನಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ಕಿಚ್ಚ ಸುದೀಪ್ ಅವರ ಅಭಿನಯಕ್ಕೆ ಅವರದ್ದೇ ಆದ ಸ್ಟೈಲ್ ಇದೆ. ಜೊತೆಗೆ ಸುದೀಪ್ ಡೈಲಾಗ್ ಅಷ್ಟೇ ಅಲ್ಲ, ಕಣ್ಣುಗಳಲ್ಲೂ ಆಕ್ಟಿಂಗ್ ಮಾಡೋ ನಟ. ಆ ಎರಡನ್ನೂ ಮ್ಯಾಕ್ಸ್ʻನಲ್ಲಿ ತೋರಿಸಿ ವ್ಹಾವ್ ಎನಿಸುವಂತೆ ಮಾಡಿದ್ದಾರೆ ಡೈರೆಕ್ಟರ್ ವಿಜಯ್ ಕಾರ್ತಿಕೇಯ. ಆದರೆ ಟ್ರೇಲರ್ ನೋಡಿದವರಿಗೆ ಪದೇ ಪದೇ ತಮಿಳಿನ ಆ ಎರಡು ಚಿತ್ರಗಳು ನೆನಪಾಗುತ್ತಿವೆ.
ಮೊದಲನೆಯದ್ದು ಕಾರ್ತಿ ಅಭಿನಯದ ಖೈಥಿ. ಎರಡನೆಯದ್ದು ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಟಿಸಿದ್ದ ವಿಕ್ರಂ. ಎರಡೂ ಚಿತ್ರಗಳಿಗೆ ಲೋಕೇಶ್ ಕನಕರಾಜ್ ನಿರ್ದೇಶಕ. ಎರಡೂ ಚಿತ್ರಗಳ ಕಥೆಯಲ್ಲಿ ಪೊಲೀಸ್ ಸ್ಟೇಷನ್ ಅಟ್ಯಾಕ್ ಮಾಡುವ ಕ್ಲೈಮಾಕ್ಸ್ ಇದೆ. ಖೈಥಿಯಲ್ಲಂತೂ ಒಂದೇ ರಾತ್ರಿ ನಡೆಯುವ ಕಥೆ ಇದೆ. ವಿಕ್ರಂ ಚಿತ್ರದಲ್ಲಿ ಇಂಟರ್‌ವೆಲ್ ನಂತರ ಸುದೀರ್ಘ ಕ್ಲೈಮಾಕ್ಸ್ ರಾತ್ರಿಯಿಡೀ ನಡೆಯುತ್ತೆ. ಮ್ಯಾಕ್ಸ್ ಚಿತ್ರದಲ್ಲೂ ಅಷ್ಟೇ. ಇಡೀ ಕಥೆ ನಡೆಯೋದು ಒಂದೇ ರಾತ್ರಿಯಲ್ಲಿ.
ಪೊಲೀಸ್ ಠಾಣೆ ಮೇಲೆ ಅಟ್ಯಾಕ್ ಮಾಡೋ ವಿಲನ್ಸ್, ಅಟ್ಯಾಕ್ ಮಾಡೋದ್ಯಾಕೆ..? ಅದೇ ಚಿತ್ರದ ಒನ್ ಲೈನ್ ಸ್ಟೋರಿ. ಮ್ಯಾಕ್ಸ್ ಸಿನಿಮಾ ರಿಲೀಸ್ ಆಗೋದು ಇದೇ 25ಕ್ಕೆ. ಬಿಡುಗಡೆ ಆಗುವುದಕ್ಕೆ ಮೂರು ದಿನ ಮೊದಲಷ್ಟೇ ಟ್ರೇಲರ್ ರಿಲೀಸ್ ಮಾಡಿ, ಸಂಚಲನ ಸೃಷ್ಟಿಸಿದ್ದಾರೆ ಮ್ಯಾಕ್ಸ್ ಸುದೀಪ್.
ಟ್ರೇಲರ್ ನೋಡಿದವರಿಗೆ ಇದು ಕಂಪ್ಲೀಟ್ ಪವರ್ ಫುಲ್ ಆಕ್ಷನ್ ಪ್ಯಾಕ್ ಸಿನಿಮಾ ಅನ್ನೋದು ಗೊತ್ತಾಗುತ್ತೆ.
ವಿಲನ್ನುಗಳು ಮ್ಯಾಕ್ಸ್ ಮಟ್ಟಹಾಕುವುದಕ್ಕೆ ಬರುತ್ತಾರಾ ಅಥವಾ ಬೇರೆ ಕಾರಣಕ್ಕೆ ಬರುತ್ತಾರಾ..
ಆ ಲೇಡಿ ಪೊಲೀಸ್‌ಗೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳೋಕೆ ಇಲಾಖೆ ನಿಂತುಕೊಳ್ಳುತ್ತಾ..?
ಆ ಠಾಣೆಯಲ್ಲಿ ಏನಾದರೂ ರಹಸ್ಯ ಇದೆಯಾ..? ಒಂದಷ್ಟು ಕುತೂಹಲಗಳಿವೆ. ಜೊತೆಗೆ ಸುದೀಪ್ ಮಾತಿನಲ್ಲಷ್ಟೇ ಅಲ್ಲ, ಕಣ್ಣಿನಲ್ಲೂ ಪ್ರೇಕ್ಷಕರ ಹೃದಯ ಕ್ಲಿಕ್ಕಿಸುತ್ತಾರೆ ಕಿಚ್ಚ ಸುದೀಪ್. ಆದರೆ ಅರ್ಜುನ್ ಮಹಾಕ್ಷಯ್ ಅನ್ನೋ ಪೊಲೀಸ್ ಪಾತ್ರ ಮಾಡಿರೋ ಕಿಚ್ಚ ಸುದೀಪ್, ವಿಲನ್ನುಗಳ ಟಾರ್ಗೆಟ್ ಆಗಿರೋದ್ಯಾಕೆ.. ಆ ಪ್ರಶ್ನೆಯೇ ಖೈಥಿ, ವಿಕ್ರಂ ಚಿತ್ರಗಳನ್ನು ನೆನಪಿಸೋದು.
ಇದು ಒಂದೇ ರಾತ್ರಿಯಲ್ಲಿ ನಡೆಯುವ ಆ್ಯಕ್ಷನ್ ಕಹಾನಿ. ಈ ಚಿತ್ರದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಪಕ್ಕಾ ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೆ ‘ಮ್ಯಾಕ್ಸ್’ ಸಿನಿಮಾದಲ್ಲಿ ಮನರಂಜನೆಯ ಫುಲ್ ಮೀಲ್ಸ್ ಇರಲಿದೆ ಎಂಬುದು ಟ್ರೇಲರ್ನಲ್ಲೇ ಕಾಣಿಸುತ್ತಿದೆ. ಇನ್ನು, ಖಡಕ್ ಆದಂತಹ ಡೈಲಾಗ್ಗಳ ಮೂಲಕವೂ ಸುದೀಪ್ ಅವರು ವಿಲನ್ಗಳಿಗೆ ನಡುಕ ಹುಟ್ಟಿಸಿದ್ದಾರೆ.
ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ, ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ಮುಂತಾದವರು ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಕಲೈಪುಲಿ ಎಸ್. ಧಾನು ನಿರ್ಮಾಣದ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶಕ.
ಈಗಾಗಲೇ ಎರಡೂವರೆ ವರ್ಷ ಕಾಯಿಸಿದ್ದಕ್ಕೆ ಕ್ಷಮೆ ಕೇಳಿಯೇ ಸಿನಿಮಾ ರಿಲೀಸ್ ಮಾಡ್ತಿದ್ದಾರೆ ಕಿಚ್ಚ ಸುದೀಪ್. ಇನ್ನು ಮುಂದೆ ವರ್ಷಕ್ಕೆ ಎರಡು ಚಿತ್ರ ಮಾಡೋಕೆ ಪ್ರಯತ್ನ ಮಾಡೋದಾಗಿ ʻಮತ್ತೊಮ್ಮೆ ಸುಳ್ಳುʼ ಹೇಳಿದ್ದಾರೆ. ಸುದೀಪ್ ಅವರ ಈ ಭರವಸೆ ಇವತ್ತಿನದ್ದಲ್ಲ. ಆರಂಭದ ಕೆಲ ವರ್ಷಗಳನ್ನು ಬಿಟ್ಟರೆ ವರ್ಷಕ್ಕೆ ಎರಡು ಮೂರು ಸಿನಿಮಾ ಬಂದಿದ್ದು ಇಲ್ಲವೇ ಇಲ್ಲ. ಈಗಂತೂ ಮೂರು ವರ್ಷಕ್ಕೊಂದು ಸಿನಿಮಾ ಮಾಡ್ತಿರೋ ಸುದೀಪ್ ಅವರ ಈ ಭರವಸೆಯನ್ನ ಅವರ ಕಟ್ಟರ್ ಅಭಿಮಾನಿಗಳೂ ನಂಬೋದಿಲ್ಲ.



