ನನ್ನಸಾವಿಗೆ ಅಕ್ಷಯ್ (Akshay) ಕಾರಣ ಅವನು ನನ್ನ ನಾಯಿತರ ಟ್ರೀಟ್ ಮಾಡುತ್ತಾ ಇದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದ್ದಾರೆ. ನನಗೆ ನನ್ನ ಪ್ಯಾಮಿಲಿಗೆ ಕೆಟ್ಟ ಕೆಟ್ಟ ಮಾತಲ್ಲಿ ಬೈದು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನನ್ನ ಡಿಪ್ರೆಷನ್ಗೆ ಅಡಿಕ್ಟ್ ಮಾಡಿದ್ದಾನೆ. ಹೀಗಾಗಿ ನನಗೆ ಬದುಕಲು ಆಗುತ್ತಿಲ್ಲ. ಡೇ ಬೈ ಡೇ ನನಗೆ ತುಂಬಾ ಸ್ಟೇನ್ ಆಗುತ್ತಿದೆ. ಅಮ್ಮ, ಗುರು, ಮನು I am Sorry ದಯವಿಟ್ಟು ನನ್ನ ಕ್ಷಮಿಸಿ. ಎಲ್ಲಾ ಹುಡುಗಿಯರಲ್ಲಿ ವಿನಂತಿ ದಯವಿಟ್ಟು ಯಾರು ಲವ್ ಮಾಡಬೇಡಿ. Good bye this World ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾಳೆ.
ಇಂತಾದ್ದೊಂದು ಡೆತ್ ನೋಟ್ ಬರೆದಿಟ್ಟು ಮಂಡ್ಯದ ದಿವ್ಯಾಶ್ರೀ (Divyashree) ಅನ್ನೋ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಷ್ಟಕ್ಕೂ ಕಥೆ ಏನು ಅಂತಾ ನೋಡಿದರೆ, (Facebook love story) ಫೇಸ್ಬುಕ್ ಲವ್ ಮತ್ತು ಮೋಸದ ಕಥೆ ತೆರೆದುಕೊಳ್ಳುತ್ತೆ.
ದಿವ್ಯಶ್ರೀ, ಮಂಡ್ಯದ (Mandya) ಹುಡುಗಿ. ಅಕ್ಷಯ್ ಬೆಂಗಳೂರಿನ ಬಸವೇಶ್ವರನಗರದ ಹುಡುಗ. ಇಬ್ಬರಿಗೂ ಪರಿಚಯವಾಗಿದ್ದು ಫೇಸ್ಬುಕ್ನಲ್ಲಿ. ಕಳೆದ ಮೂರು ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಪರಿಚಯರಾದ ಇವರ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಸುಮಾರು ಮೂವರು ವರ್ಷಗಳಿಂದಲೂ ಪ್ರೀತಿ ಮಾಡಿಕೊಂಡು ಪ್ರಣಯ ಪಕ್ಷಿಗಳಂತೆ ಓಡಾಡಿದ್ದಾರೆ. ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದ ಅಕ್ಷಯ್ ಮಾತಿಗೆ ಮರುಳಾದ ದಿವ್ಯಶ್ರೀ ತನು-ಮನ-ಧನವನ್ನು ಅರ್ಪಿಸಿದ್ದಾಳೆ. ಅಕ್ಷಯ್ ಖರ್ಚಿಗೆ ಆಗಾಗ್ಗೆ ದುಡ್ಡು ಕೊಡುತ್ತಿದ್ದ ಅಶ್ವಿನಿ, ಡೆತ್ ನೋಟ್ ಪ್ರಕಾರ ಕೊಟ್ಟಿರುವ ಲೆಕ್ಕ 1 ಲಕ್ಷದ 76 ಸಾವಿರ.




ಮೊಬೈಲ್ನ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುವ ಪ್ರೀತಿಯ ಗಟ್ಟಿಯಾಗಿರೋದಿಲ್ಲ ಎಂಬುದಕ್ಕೆ ಎಷ್ಟೇ ಉದಾಹರಣೆಗಳು ಇದ್ದರೂ, ಅನೇಕರು ಮೋಸದ ಪ್ರೀತಿಗೆ ಬಿದ್ದು ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೋ ಇದ್ದವರನ್ನು ಸುಲಭವಾಗಿ ಸಂಪರ್ಕಿಸಿ ಸ್ನೇಹ ಪ್ರೀತಿ ಅಂತ ಮೋಸ ಹೋಗಿ ಜೀವನ ಹಾಳು ಮಾಡಿಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ. ಆ ಪಟ್ಟಿಗೆ ಈಗ ದಿವ್ಯಶ್ರೀ ಹೊಸ ಸೇರ್ಪಡೆ ಅಷ್ಟೆ..



