ಘಟನೆ ಶುರುವಾಗಿದ್ದು ಉಪೇಂದ್ರ (Actor Upendra) ಅವರಿಂದ. ಅವರು ತಮ್ಮ ಪಕ್ಷದ ಜೊತೆ ಮಾತನಾಡುತ್ತಾ ಹೇಳುವಾಗ ಊರು ಇದ್ದ ಕಡೆ – ಇರುತ್ತೆ ಎಂದು ಮಾತನಾಡಿದ್ದು ದೊಡ್ಡ ವಿವಾದವಾಗಿದ್ದು, ಉಪೇಂದ್ರ (Actor Upendra) ವಿರುದ್ಧ ಕೇಸುಗಳ ಮೇಲೆ ಕೇಸು ದಾಖಲಾಗಿದ್ದು, ಮೂರು ಕಡೆ ಎಫ್.ಐ.ಆರ್. ಆಗಿದ್ದು.. ಅದನ್ನು ಪ್ರಶ್ನಿಸಿ, ಎಫ್.ಐ.ಆರ್. (FIR) ರದ್ದು ಮಾಡುವಂತೆ ಉಪೇಂದ್ರ ಕೋರ್ಟ್ (court) ಮೊರೆ ಹೋಗಿದ್ದಿ, ಕೋರ್ಟ್ ಎಫ್.ಐ.ಆರ್.ಗೆ ತಡೆಯಾಜ್ಞೆ ಕೊಟ್ಟಿದ್ದು.. ಎಲ್ಲವೂ ಇದೀಗ ಹಳೇ ಸುದ್ದಿ. ಹೊಸ ಸುದ್ದಿಯೇನೆಂದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S S Mallikarjun) ವಿರುದ್ಧವೂ ಕೇಸ್ ದಾಖಲಾಗಿದೆ. ದಿವಾಕರ್ (Divakar) ಅನ್ನೋವ್ರು ಕಂಪ್ಲೇಂಟ್ ಕೊಟ್ಟಿದ್ದು, ಬೆಂಗಳೂರಿನ ರಾಜಾಜಿನಗರ ಠಾಣೆ (Rajajinagr police station) ಪೊಲೀಸರು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (SS Malllikarjun) ವಿರುದ್ಧ ಎನ್.ಸಿ.ಆರ್. (NCR) ದಾಖಲಾಗಿದೆ. ಎಫ್.ಐ.ಆರ್. (FIR) ಅಲ್ಲ. ಆದರೆ ಅಟ್ರಾಸಿಟಿ (Atrocity) ಕೇಸಿನಲ್ಲಿಯೇ ಎನ್.ಸಿ.ಆರ್. ದಾಖಲಿಸಿದ್ದಾರೆ.
ಉಪೇಂದ್ರ ಹೇಳಿಕೆ ವಿವಾದದ ಬೆನ್ನಲ್ಲಿಯೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (Shamanooru Mallikarjun) ಅವರು ಮಾತನಾಡಿದ್ದ ಹಳೆಯ ವಿಡಿಯೋ ಮುನ್ನೆಲೆಗೆ ಬಂದಿತ್ತು. ಸ್ಯಾಂಡಲ್ವುಡ್ ನಟ ಉಪೇಂದ್ರ ಮಾದರಿಯಲ್ಲಿಯೇ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ‘ದಲಿತ ವಿರೋಧಿ’ ಪದವನ್ನು ಹೇಳಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಉಪೇಂದ್ರ ಬಳಸಿದ್ದ ಆ ಪದವನ್ನೇ ಮಲ್ಲಿಕಾರ್ಜುನ್ ಕೂಡಾ ಬಳಸಿದ್ದರು. ಆದರೆ ಉಪೇಂದ್ರ ವಿರುದ್ಧದ ಹೇಳಿಕೆ ಕುರಿತು ಸಲ್ಲಿಸಿದ್ದ ಮೂರು ದೂರುಗಳಿಗೂ ಎಫ್.ಐ.ಆರ್. ದಾಖಲಿಸಿದ್ದ ಪೊಲೀಸರು, ಸಚಿವ ಮಲ್ಲಿಕಾರ್ಜುನ ವಿರುದ್ಧ ದೂರು ನೀಡಿದರೂ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ (Dr.Prabha Mallikarjun) ಸಂದರ್ಶನ ನಡೆಸಿದ್ದಾರೆ. ವೀಡಿಯೊವನ್ನು ಯೂಟ್ಯೂಬ್ ಚಾನೆಲ್ (Youtube Channel) ನಲ್ಲಿ ಮೂರು ತಿಂಗಳ ಮೊದಲು ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ನಗರದ ಅಶೋಕ್ ಥಿಯೇಟರ್ ಬಳಿ ನಿರ್ಮಾಣಗೊಂಡಿರುವ ಅಂಡರ್ ಪಾಸ್ ಬಗ್ಗೆ ಅಭಿಪ್ರಾಯ ಕೇಳುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಲವು ಬಾರಿ ನಾನು ಪ್ರಶ್ನೆ ಮಾಡಿದ್ದೆ, ಸಂಬಂಧಪಟ್ಟ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ‘ಊರನ್ನು ಹೊಲೆಗೇರಿ ಮಾಡಬೇಡಿ’ ಎಂದು ಹೇಳಿದ್ದೆ ಎಂದು ಮಲ್ಲಿಕಾರ್ಜುನ್ ಅವರು ಹೇಳುತ್ತಾರೆ.
ಎಫ್.ಐ.ಆರ್. ಬದಲು ಎನ್.ಸಿ.ಆರ್. ಏಕೆ?
ಎಸ್.ಎಸ್.ಮಲ್ಲಿಕಾರ್ಜುನ್ ಶಾಸಕರಷ್ಟೇ ಅಲ್ಲ, ಸಚಿವರೂ ಹೌದು. ಹೀಗಾಗಿಯೇ ಅವರ ಮೇಲೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ಮಾತ್ರ ದಾಖಲಿಸಲಾಗಿದೆ. ದಿವಾಕರ್ ಎನ್ನುವವರು ಸಚಿವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿದ್ದು, ಈ ಪ್ರಕರಣವನ್ನು ವಿಧಾನಸೌಧ ಠಾಣೆಯಲ್ಲಿಯೇ ದಾಖಲಸಿಬೇಕಂತೆ. ಹೀಗಾಗಿ ಎನ್.ಸಿ.ಆರ್. ದಾಖಲಿಸಿರುವ ಪೊಲೀಸರು ವಿಧಾನಸೌಧ ಠಾಣೆಗೆ ಹೋಗಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡುವಂತೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಎನ್.ಸಿ.ಆರ್. ದಾಖಲಾದರೆ ಅರೆಸ್ಟ್ ಮಾಡುವ ಅಗತ್ಯ ಇರುವುದಿಲ್ಲ ಎನ್ನುತ್ತದೆ ಕಾನೂನು.
ಸಚಿವ ಮಲ್ಲಿಕಾರ್ಜುನ್ ಈ ವಿಷಯದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಕೆಲವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ, ನಾನು ಆ ರೀತಿಯಾಗಿ ಹೇಳಿಲ್ಲ. ಉಪೇಂದ್ರ ಪ್ರಕರಣ ಬಗ್ಗೆ ನನಗೆ ಏನು ಗೊತ್ತಿಲ್ಲ. ನಾನು ಗಾಧೆ ಮಾತನ್ನು ಬಳಸಿಲ್ಲ, ಒಳ್ಳೆಯ ಕೆಲ್ಸಾ ಮಾಡಿ ಹೊಲಸು ಮಾಡಬೇಡಿ ಹೇಳಿದ್ದೇನೆ ಅಷ್ಟೇ. ಅದನ್ನು ನೀವು, ಅವರು ತಿರುಚಿದ್ದೀರಿ ಎಂದು ಮಾಧ್ಯಮಗಳ ಮೇಲೆ ತಪ್ಪು ಹೊರೆಸಿದ್ದಾರೆ.



