ರಾಜ್ಯದಲ್ಲೀಗ ಅಶ್ಲೀಲ ವಿಡಿಯೋಗಳ ಹಾವಳಿ ಮಿತಿ ಮೀರಿದೆ. ಹೀಗಿರುವಾಗಲೇ.. ಇಡೀ ದೇಶದಲ್ಲೇ ಇರುವ ಅತಿ ದೊಡ್ಡ ಸುದ್ದಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನುತ್ತಿರುವಾಗಲೇ.. ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಭಾರೀ ಸುದ್ದಿ ಮಾಡಿವೆ. 18ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಸ್ಟಾರ್ ನಟಿ ಈ ಜ್ಯೋತಿ ರೈ.
ಕನ್ನಡದ ಕಿರುತೆರೆ ಸ್ಟಾರ್ ನಟಿಯ ವಯಸ್ಸು ಈಗ 40 ದಾಟಿದೆ. ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಗೆಜ್ಜೆಪೂಜೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋಗಳು ಭರ್ಜರಿ ಸುದ್ದಿ ಮಾಡ್ತಿವೆ. ಆ ವಿಡಿಯೋದಲ್ಲಿರುವುದು ಜ್ಯೋತಿ ರೈ ಅವರೇನಾ..?
ಜ್ಯೋತಿ ರೈ 20ರ ಹರೆಯದಲ್ಲಿಯೇ ಮದುವೆಯಾಗಿದ್ದವರು. ಆ ನಂತರ ಮೊದಲ ಪತಿಗೆ ವಿಚ್ಛೇದನ ನೀಡಿದ್ದರು. ಸದ್ಯಕ್ಕೆ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಂಸಾರ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋಗಳು ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿದೆ. ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದ ಜ್ಯೋತಿ ರೈ ಅವರ ಕೌಟುಂಬಿಕ ಜೀವನ ಅಷ್ಟು ಚೆನ್ನಾಗಿಲ್ಲ ಎಂಬುದನ್ನೂ ಇದಕ್ಕೆ ಬಳಸಿಕೊಳ್ಳಲಾಗಿದೆ. ಈಗ ವೈರಲ್ ಆಗಿರೋ ವಿಡಿಯೋಗಳಿಗೂ.. ಅವರ ಕೌಟುಂಬಿಕ ಜೀವನಕ್ಕೂ ಥಳುಕು ಹಾಕಿ ಸುದ್ದಿ ಮಾಡಲಾಗಿದೆ. ಆದರೆ.. ಇವುಗಳಿಗೆಲ್ಲ ಜ್ಯೋತಿ ರೈ ಉತ್ತರ ಕೊಟ್ಟಿದ್ದಾರೆ. ವಿಡಿಯೋದಲ್ಲಿರುವುದು ತಾನಲ್ಲ ಎಂದು ಸ್ಪಷ್ಟವಾಗಿ ಹೇಳಿದ್ಧಾರೆ.
ಕೆಲವು ವ್ಯಕ್ತಿಗಳು ತಮ್ಮ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ದೂರು ಕೂಡ ನೀಡಿದ್ದೇನೆ. ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಫೇಕ್. ಕೆಲವರ ನಂಬರ್ ನಿಂದ ನನಗೆ ಕರೆಗಳು ಬಂದಿದ್ದವು. ಅವರೇ ಇಂದು ನನ್ನದು ಎನ್ನಲಾಗುತ್ತಿರುವ ವಿಡಿಯೋ ಮತ್ತು ಫೋಟೋ ಕಳುಹಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಯೂಟ್ಯೂಬ್ ಖಾತೆಯೊಂದರಲ್ಲಿ ಜ್ಯೋತಿ ರೈ ಅವರ ವಿಡಿಯೋ ಸುದ್ದಿ ಮಾಡುತ್ತಿದ್ದು, ‘ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ’ ಎಂದು ಪೋಸ್ಟ್ ಮಾಡಲಾಗಿದೆ. ಪೋಸ್ಟ್ ಮಾಡಿರುವ ವ್ಯಕ್ತಿ ತನ್ನ ಬಳಿ ಎರಡು ಫುಲ್ ವಿಡಿಯೋಗಳಿದ್ದು, ತಲಾ 5 ನಿಮಿಷದ ವಿಡಿಯೋ ಅದಾಗಿದೆ ಎಂದು ಹೇಳಿದ್ದಾರೆ. ಹಾಗಂತ ಈ ವ್ಯಕ್ತಿ ಇದನ್ನು ಪೋಸ್ಟ್ ಮಾಡಿ ಒಂದು ದಿನವಾಗಿದ್ದರೂ ಆತನ ಯೂಟ್ಯೂಬ್‌ಗೆ ಸಬ್‌ಸ್ಕ್ರೈಬರ್ಸ್ 500 ಕೂಡ ದಾಟಿಲ್ಲ.
ಅಂದಹಾಗೆ ಜ್ಯೋತಿ ರೈ ಪ್ರಕಾರ ಈ ವಿಡಿಯೋಗಳಿಗೂ.. ಅವರಿಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳಲ್ಲಿ ಜ್ಯೋತಿ ರೈ ಅವರಂತೆ ಕಾಣುವ ಯವತಿ ಇದ್ಧಾರೆಯೇ ಹೊರತು.. ಅವರು ಇವರಲ್ಲ. ಇವರು ಅವರಲ್ಲ. ಹಾಗಾದರೆ.. ಜ್ಯೋತಿ ರೈ ಹೆಸರಲ್ಲಿ ಕೇವಲ ಸಬ್ ಸ್ಕ್ರೈಬರ್ ಗುರಿ ಮುಟ್ಟುವುದಕ್ಕೆ ಇಷ್ಟೆಲ್ಲ ಆಟ ನಡೀತಾ.. ಅಥವಾ.. ಜ್ಯೋತಿ ರೈ ಅವರ ಹೆಸರು ಕೆಡಿಸಲು ಈ ಕುಕೃತ್ಯ ನಡೀತಾ.. ಉತ್ತರಿಸಬೇಕಾದ್ದು ಸೈಬರ್ ಕ್ರೈಂ ಪೊಲೀಸರು.



